________________
೪೭೬ ನಡೆದದ್ದೇ ದಾರಿ ವಿಷಯ. ಇವರು ಅಲ್ಲಿನದೆಲ್ಲ ಕಲಿತು ಇಲ್ಲಿ ಬಂದು ಇನ್ನೂ ಒಳ್ಳೆಯ ನಾಟಕಗಳನ್ನು ಬರೆಯುವಂತಾಗಲಿ - ' ಪ್ರಿನ್ಸಿಪಾಲರು ಗೊಗ್ಗರು ದನಿಯಲ್ಲಿ ಏನೇನನ್ನೋ ಹಾರೈಸುತ್ತಲೇ ಇದ್ದರು. ಹುಡುಗರ ಚಪ್ಪಾಳೆಯ ಸದ್ದು ಕಿವಿ ಗಡಚಿಕ್ಕುವಂತಿತ್ತು... “ಇವರ ನಾಟಕಗಳೆಲ್ಲ ಜೀವಂತವಾಗಿ ಕಾಣುವುದು ಅವುಗಳ ವೈಶಿಷ್ಟ್ಯ. ಪ್ರಾಮಾಣಿಕತೆ, ಧೈರ್ಯ, ಸಾಹಸೀ ಪ್ರವೃತ್ತಿ ಇವರ ಬರವಣಿಗೆಯ ಲಕ್ಷಣಗಳು. ನಿಜ ಜೀವನದಲ್ಲೂ ಹಾಗೆಯೇ...' ಯಾಕೋ ವಿಪರೀತ ತಲೆನೋವು, ಎದೆಯಲ್ಲೊಂದು ಬಗೆಯ ಸಂಕಟ. ಎಂದಿನಂತೆ ತನ್ನ ಬಗೆಗೆ ಇತರರಾಡುವ ಒಳ್ಳೆಯ ಮಾತುಗಳನ್ನು ಕೇಳಿ ನಂಬಿ ಅಭಿಮಾನಪಟ್ಟು ತೆಪ್ಪಗಿರುವುದು ಯಾಕೆ ಸಾಧ್ಯವಾಗಲೊಲ್ಲದು... ಎಲ್ಲ ನಾಟಕೀಯವೆನಿಸತೊಡಗಿದೆ. ಪ್ರಿನ್ಸಿಪಾಲರ ಭಾಷಣದಲ್ಲಿ ಮನಸ್ಸು ಹಾಕಿ ಹಾಳು ಸ್ವಪ್ಯಾನನ್ನು ತಲೆಯಿಂದಾಚೆ ಸಾಗಹಾಕಬೇಕು... ಪ್ರಾಮಾಣಿಕತೆ ? ರಾತ್ರಿ ಕನಸಿನಲ್ಲಿ ತನ್ನ ಮುಖದ ಮೇಲೆ ಉಗುಳಿ ಮಾಯವಾದ ಆ ಅಸ್ಪಷ್ಟ ಆಕೃತಿ ಕಣ್ಣೆದುರು ತೇಲಿಬಂದಂತಾಯಿತು. ಕಣ್ಣು ಕಿರಿದುಗೊಳಿಸಿ ಗುರುತು ಹಿಡಿಯಲೆತ್ನಿಸಿದ ಆತ. ಊಹೂ, ತೀರ ಆಸ್ಪಷ್ಟ, ಕೆಂಗಣ್ಣು -ಉರಿ ಮೋರೆ... ಯಾರಿದು ? ದೆವ್ವವೆ ? ಸ್ವಪ್ನಾನ ದೆವ್ವವೇ ? ಛೇ, ಅವಳಿನ್ನೂ ಬದುಕಿದ್ದಾಳೆ. ತನ್ನ ದಾದು-ದರಕಾರು ಮಾಡದೆಯೂ ಬದುಕಿದ್ದಾಳೆ... ಆದರೂ ತನ್ನ ಪಾಲಿಗವಳು ಸತ್ತಂತೆಯೇ. ಅವಳದೇ ಹಾಗಿದ್ದರೆ ಈ ದೆವ್ವ ? - ಛ, ಜೊತೆಗೆ ಬೇರೆಯವರಿದ್ದಾಗ ಮುಖದ ಮೇಲೆ ಉಗುಳಿ ಅವಮಾನಿಸುವಷ್ಟು ಆಸಭ್ಯಳಲ್ಲ ಸ್ವಪ್ಪಾ. ಅಥವಾ ತಾನೆಂದೋ ಮರೆತ, ತನಗಿನ್ನೂ ತಿಳುವಳಿಕೆ ಬರದಿದ್ದಾಗ ತನ್ನನ್ನು ಒದ್ದಾಡಿಸಿದವರ ಪೈಕಿ ಯಾರೋ ಒಬ್ಬರ ದೆವ್ವವೇ ?... ಇರಲಾರದು. ಹಾಗಿದ್ದರೆ ಸ್ವಪ್ಪಾ ತನಗಿಲ್ಲವೆಂದು ಹೇಳಿ ಛೇಡಿಸಿದ್ದ conscience ಎಂಬಂಥದೇನಾದರೂ ಇರಬಹುದೇ ಇದು ? 'ಇವರ ನಾಟಕಗಳಲ್ಲಿ, ಒಂದು ಬಗೆಯ ತೀವ್ರಪ್ರಜ್ಞೆಯಿದ್ದುದು ಇನ್ನೊಂದು ವಿಶೇಷ'... ತಲೆ ತಿರುಗಲಾರಂಭಿಸಿತ್ತು ಆತನಿಗೆ. “ಕಲೆಯ ಸೇವೆಗಾಗಿ ಇವರು ಈಗ ಎರಡು ವರ್ಷಗಳ ಮಟ್ಟಿಗೆ ದೂರದ ಫ್ರಾನ್ಸ್ಗೆ ಹೋಗಲಿದ್ದಾರೆ.'