ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬಳಿಯಲ್ಲಿ ನಿಂತ್ತಿದ್ದ ಗುಂಪಿನಲ್ಲಿ ಯಾರದೋ ಜೋಕಿಗೆ ಉಳಿದವರೆಲ್ಲ ನಕ್ಕದು. ಆತನು ಈಕೆಂದು ವಿಚಾರಿಸದೆಯೆ ನಕ್ಕ . ನಗುತ್ತಿದ್ದರೆ ಮಾತ್ರ ಆ ದೆವ್ವವನ್ನು ಅದೂರವಿಡುವುದು ಸಾದ್ಯವೆಂಬ ರಹಸ್ಯ ಅವನಿಗೀಗ ಗೊತ್ತಾಗಿಬಿಟ್ಟಿತ್ತು. ಅವಶ್ಯವಿದ್ದು ದಕ್ಕಿಂತ ಜೋರಗಿ ನಕ್ಕ ಆತ . ಆತನ ನಗು ಸ್ಫುಟವಾಗಿ, ಉಳಿದವರೆಲ್ಲರ ಧ್ವನಿಯನ್ನು ತನ್ನಲ್ಲಿ ಅಡಫ಼ಿಸಿಕೋಡು ದೊಡ್ಡದಾಗಿ ಕೇಳಿಸಿತು.....
ಟಾಂಗಾದಲ್ಲಿ ಕೂತು ಹೆಂಡತಿಯೊಂದಿಗೆ ಮನೆಗೆ ಬರುವಾಗಲೂ ನಗುತ್ತಲೇ
ಇದ್ದ ಆತ."ಫಂಕ್ ಶನ್ ಹ್ಯಾಂಗಾತ್ರೀ?" ಎಂದು ಆಕೆ ಕೇಳಿದಾಗ ಅವಳ ಮೇಲೆ ಬಾಗಿ ತುಂಟ ನಗು ನಕ್ಕು,"ಛಲೋ ಆತ್ರಿ" ಎಂದ.
ಮನೆಯ ಬೀಗ ತೆರೆದು ಮಕ್ಕಳೋಂದಿಗೆ ಆಕೆ ಒಳಗೆ ಹೋದನಂತರ ಎರಡು
ನಿಮಿಷ ಅಲ್ಲೇ ನಿಂತು, ಪಕ್ಕದ ಮನೆಯ ಗೇಟಿನಲ್ಲಿ ನಿಂತ್ತಿದ್ದ ಇಂಜಿನಿಯರನ ಚೆಂದ ಹೆಂಡತಿಯ ಕಡೆ ನೋಡಿ ಶಿಳ್ಳು ಹಾಕಿದ.
'ಸ್ವಪ್ನಾ, ನೀನು ಸೋತೆ'- ಎಂದು ಅವನ ಮನಸ್ಸು ಕೇಕೆ ಹಾಕಿತು. * * * ಆ ರಾತ್ರಿ ಅವನ ಸ್ಕೂಟರು ಊರ ಹೊರಗಿನ ನಿರ್ಜನ ದಾರಿಯಲ್ಲಿ ವೇಗವಾಗಿ
ಓಡುತ್ತಿತ್ತು. ಹಿಂದಿನ ಸೀಟಿನಲ್ಲಿ ಕೂತಿದ್ದ ಮಿಸ್