ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನ್ನಷ್ಟು ಕತೆಗಳು/ ಹರಿದು ಬಾ ತಾಯಿ ೨೪೧

ಕೃಷ್ಣಾಪುರದ ಸಮೀಪವೇ ಇರುವ ಹನುಮಾಪುರಕ್ಕಂತೂ ದೊಡ್ಡ ಕಾಲುವೆಯಲ್ಲಿ ಸಮೃದ್ದವಾಗಿ ನೀರು ಹರಿದು ಬರುತ್ತದಂತೆ. ಊರವರೆಲ್ಲ ತೋಟಪಟ್ಟಿ ಮಾಡಿಕೊಂಡಿಬಹುದಂತೆ. ಇಮ್ಮು ತಮ್ಮೂರಿಗೆ ಬರಗಾಲವಿಲ್ಲ-ದನಗಳು ಮೇವಿಲ್ಲದೆ ಸಾಯುವುದಿಲ್ಲ. ಹಣದ ಕೊರತೆಯಿಂದಾಗಿ ಹೆಣ್ಣು ಮಕ್ಕಳ ಮದುವೆಗಳು ನಿಲ್ಲುವುದಿಲ್ಲ, ಎರಡು ಹೊತ್ತಿನ ಕೂಳಿಗೆ ತತ್ಪಾರವಾಗಿ ಯಾರೂ ಊರು ಬಿಟ್ಟು ಹೋಗುವುದಿಲ್ಲ. ಓಹ್... ದೇವರು ಅಂತೂ ಕಣ್ತೆರೆದ!

       ಅಜ್ಜನೊಂದಿಗೆ ತಿಮ್ಮನೂ ಊರಿನ ಇನ್ನಿತರರೂ ಕೃಷ್ಣಾಪುರದವರೆಗೆ ಚಕ್ಕಡಿ ಕಟ್ಟಿಕೊಂಡು ಹೋಗಿ ಕೃಷ್ಣಾನದಿಗೆ ಆಣಿಕಟ್ಟು ಕಟ್ಟುವ ಕೆಲ್ಸ ಪ್ರಾರಂಭವಾಗಿದ್ದನ್ನು ಕಣ್ಣಾರೆ ನೋಡಿದರು. ದೊಡ್ಡ-ದೊಡ್ದ ಇಂಜಿನೀಯರ್ ಸಾಹೇಬರು ಟೆಂಟ್ ಹಾಕಿಕೊಂಡು ಅಲ್ಲೇ ವಸತಿ ಮಾಡಿದಾರು. ಹಗಲು ರಾತ್ರಿ ಸರ್ವೆಕೆಲಸ ನಡೆಯುತ್ತಿತ್ತು. ಎತ್ತರದ ಕೆಂಪಗಿನ ತೇಜಸ್ವಿ ಕಣ್ಣುಗಳ ಸೂಪರಿಟೆಂಡಿಂಗ್ ಇಂಜಿನಿಯರ್ ಸಾಹೇಬರು, ವಿಜಯಧ್ವಜರಾವ್ ಅಂತ, ಅದ್ಭುತ ಹೆಸರಿನವರು, ಕೆಲಸದ ಮೇಲುಸ್ತಿವಾರಿ ನೋಡಿಕೊಳ್ಳುತ್ತಿದ್ದರು. ಸುಡುಬಿಸಿಲಿಲ್ಲಿ ಕಾರ್ಮಿಕರೊಂದಿಗೆ ಸ್ವತಃ ಶ್ರಮಿಸಿ ಬೆವರು ಹರಿಸುತ್ತ ಹೊತ್ತು ಮುಳುಗಿ ಕತ್ತಲಾಗುವವರೆಗೂ ಕೆಲಸ ಮಾಡುತ್ತಿದ್ದರು. ನುಸುಕಿನ ಮೂರು ಗಂಟೆಗೇ ಎದ್ದು ಒಬ್ಬರೇ ಗುಡ್ಡಗಾಡಿನಲ್ಲಿ ನಡೆದುಕೊಂಡು ಹೋಗಿ ನದಿಯ ನೀರಿನ ಪಾತ್ರವನ್ನು ಅಳೆಯುತ್ತಿದ್ದರು. ಸೇತುವೆಯ ಹೊಳಹು ಹಾಕುತ್ತ, ಕಾಲುವೆಯ ನಕ್ಷೆ ತಯಾರಿಸುತ್ತ, ಇಡೀ ದಿನ ಕಾರ್ಯಮಗ್ನರಾಗಿರುತ್ತಿದ್ದರು. ಕೆಲಸ ನಡೆದದ್ದನ್ನು ನೋಡಿಕೊಂಡು ಹೋಗಲು ಬಂದ ಪಿ.ಡಬ್ಲ್ಯೂ.ಡಿ. ಮಂತ್ರಿಗಳು ಕೆಲಸದ ಪ್ರಗತಿಯನ್ನು ,ಅಚ್ಚಿ ಶ್ಲಾಘಿಸಿದರು. ತಿರುಗಿ ಹೊರಟಾಗ ರಾಜಾಪುರ ಇನ್ ಸ್ಪೆಕ್ಷನ್ ಬಂಗ್ಲೆಯಲ್ಲಿ ತಮಗಾಗಿ ವ್ಯವಸ್ಥೆ ಮಾಡಿದ್ದ ಭೂರಿಭೋಜನಕ್ಕೆ ತಮ್ಮೊಂದಿಗೆ ಬರಲು ಒತ್ತಾಯದ ಆಮಂತ್ರಣ ನೀಡಿದರು. "ಕ್ಷಮಿಸ್ರಿ ಸರ್. ಕೆಲಸದ ಸೈಟ್ ಬಿಟ್ಟು ನಾ ಬರಲಾರೆ" ಅಂತ ಮಂತ್ರಿಗಳ ಆಮಂತ್ರಣವನ್ನೇ ನಿರಾಕರಿಸಿದ ವಿಜಯಧ್ವಜರಾವ್ ಅವರು ತಮ್ಮ ಟೆಂಟ್ನಲ್ಲಿ ಮೂರು ಕಲ್ಲುಗಳನ್ನಿಟ್ಟು ಹೂಡಿದ್ದ ಒಲೆಯಲ್ಲಿ ಕಟ್ಟಿಗೆ ಹಾಕಿ ಉರಿಸಿ ಅನ್ನ ಬೇಯಿಸಿಕೊಂಡು ಮಂತೆಹಿಟ್ಟು ಕಲಸಿ ಉಂಡು, ಮತ್ತೆ ಕಂದೀಲಿನ ಬೆಳಕಿನಲ್ಲಿ ತಮ್ಮ ನಕ್ಷೆಯನ್ನು ಹರಿವಿಕೊಂಡು ಕೂತರು.
       " ಈ ಯಪ್ಪನ ಹೊಟ್ಟೆ ತಣ್ಣಗಿರಲಿ, ಇವನ ಪುಣ್ಯೇದಿಂದ ನಮ್ಮೂರಿಗೂ ಕಾವಲಿ ನೀರು ಬ್ರೂದು ಇನ್ನೂ ತಡಾ ಆಗಾಂಗಿಲ್ಲ" ಅಂದುಕೊಳ್ಲುತ್ತ ಹನುಮಾಪುರದವರೆಲ್ಲ ತಿರುಗಿ ಬಂದರು.