________________
೪೮೨ ನಡೆದದ್ದೇ ದಾರಿ - ತಿಮ್ಮನ ಆಜ್ಜ ಕಾಲವಾಗಿ ವರುಷಗಳೇ ಗತಿಸಿದವು. ಹನುಮಾಪುರದವರ ನಂಬಿಕೆಗಳೆಲ್ಲಾ ಹುಸಿಯಾಗಿದ್ದವು. ಆಣೆಕಟ್ಟಿನ ಕೆಲಸ ಅಂದುಕೊಂಡ ಅವಧಿಯಲ್ಲಿ ಮುಗಿಯಲಿಲ್ಲ. ಜೀವನೋಪಾಯಕ್ಕಾಗಿ ಸುತ್ತಲಿನ ಅನೇಕ ಹಳ್ಳಿಯ ಗಂಡುಮಕ್ಕಳ ಹಾಗೆ ತಿಮ್ಮನೂ ಆಣೆಕಟ್ಟಿನ ಕಾಮಗಾರಿಯಲ್ಲಿ ಕೂಲಿಗಾಗಿ ದುಡಿಯತೊಡಗಿದ್ದ. ಕಾಮಗಾರಿ ಈಗ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಸಾವಿರಾರು ಕೂಲಿಗಳು, ನೂರಾರು ಕಂತ್ತಾಟುದಾರರು, ಲೆಕ್ಕವಿಲ್ಲದಷ್ಟು ಇಂಜಿನೀಯರರು, ವಿಜಯಧ್ವಜರಾವ್ ಎಂದೂ ವರ್ಗವಾಗಿ ಹೋಗಿದ್ದರು. ಬೆಂಗಳೂರಿಂದ ಹೊಸದಾಗಿ ಬಂದಿದ್ದರು ಎಸ್. ಈ. ಸಾಹೇಬ ಭೀಮೇಗೌಡರು : ಇಡಿಯ ದಿನ ಕಲ್ಲು ಕಡಿಯುವ, ನೆಲ ಅಗೆಯುವ, ಸೇತುವೆ ಕಟ್ಟುವ ಕೆಲಸದ ಕರ್ಕಶ ಸದ್ದಿನಿಂದ ಕೃಷ್ಣಯ ಕೊಳ್ಳ ತುಂಬಿ ಗಿಜಿಗಿಡುತ್ತಿತ್ತು. ಸಂಜೆಯಾದರೆ ಸಾಕು, ಯಾರು ಯಾರೋ ಬಿಳಿ ದಿರಿಸಿನ ಗಾಂಧಿ ಟೊಪ್ಪಿಗೆಯ ಜನ ಕಾರುಗಳಲ್ಲಿ ಬರುತ್ತಿದ್ದರು. ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿದ್ದ ಗೆಸ್ಟ್ ಹೌಸಿನಲ್ಲಿ ಬಿಡಾರ ಹೂಡಿದ್ದ ಭೀಮೇಗೌಡರೂ, ಕಂತಾಟುದಾರರೂ ಈ ಗಾಂಧೀ ಟೊಪ್ಪಿಗೆಯ ಜನರೂ ಸೇರಿ ಗುಜುಗುಜು ಮಾತಿನ ವ್ಯವಹಾರ ಪ್ರಾರಂಭಿಸುತ್ತಿದ್ದರು. ಗೆಸ್ಟ್ ಹೌಸಿನ ಕಸ ಬಳಿಯುವ ಕೆಲಸವನ್ನು ಮಾಡುತ್ತಿದ್ದ ತಿಮ್ಮ ಆ ದಿನಗಳಲ್ಲಿ ಬಾಟಲಿ ಗ್ಲಾಸುಗಳನ್ನೂ, ಲಕ್ಷ-ಲಕ್ಷ ರೂಪಾಯಿಗಳ ವ್ಯವಹಾರವನ್ನೂ ಮೊದಲ ಬಾರಿಗೆ ನೋಡಿ ಬೆರಗಾಗಿದ್ದ. ಭೀಮೇಗೌಡರ ಕೆಲಸದ ರೀತಿಯೇ ವಿಚಿತ್ರವೆನಿಸುತ್ತಿತ್ತು ತಿಮ್ಮನಿಗೆ. ಪಾನಮತ್ತರಾಗಿ ಮಲಗಿದ ಅವರು ಮುಂಜಾನೆ ಕೆಂಪುಕಣ್ಣು ಮಾಡಿಕೊಂಡು ಎದ್ದಾಗ ಗಂಟೆ ಹತ್ತು ದಾಟಿರುತ್ತಿತ್ತು. ಸೈಟಿಗೆ ಎಂದೂ ಹೋಗದೆ ಕೂತಲ್ಲೇ ನಕ್ಷೆಗಳನ್ನು ಪರೀಕ್ಷಿಸುವ ಅಪರೂಪದ ಇಂಜಿನಿಯರು ಅವರು. ಯಾವಾಗಲೋ ಮಧ್ಯಾಹ್ನ ಒಮ್ಮೆ ಕೆಲಸನಡೆಯುವಲ್ಲಿಗೆ ಹೋಗಿ ಒಂದು ದಿಕ್ಕು ತೋರಿಸಿ, “ಈ ದಿಕ್ಕಿನಲ್ಲಿ ಇಲ್ಲಿಂದ ಅಲ್ಲೀವರೆಗೆ ಇಪ್ಪತ್ತು ಕಿಲೋಮೀಟರು ಉದ್ದ ಆರು ಫೂಟು ಆಳ ತಗ್ಗು ತಗೀರಿ" ಎಂದು ಆಜ್ಞೆ ನೀಡಿದವರು ಮರುದಿನ ಹೋಗಿ, "ಎಲಾ ಕಳ್ಳ ನನ್ನ ಮಕ್ಕಳಿರಾ, ಹೊಟ್ಟೆಗೆ ಏನು ತಿಂತೀರೋ ? ಇಲ್ಯಾಕೆ ತಗ್ಗು ತೆಗೆದಿರಿ ? ಮುಚಿ ಇದನ್ನ, ಆ ಕಡೆ ನಡೀರಲೋ, ಅಲ್ಲೆ ತಗ್ಗು ತೆಗೆಯೋದೈತಿ," ಅನ್ನುತ್ತಿದ್ದರು. ಒಂದು ಸಲ ಸಿಮೆಂಟಿನ ಕೊರತೆಯಾಗಿ ಕೆಲಸ ನಿಂತಿತು. ಯಾವ ಕಂಪನಿಯ ಸಿಮೆಂಟಿಗೆ ಆರ್ಡರು ಕೊಡುವುದೆಂದು ನಿರ್ಧರಿಸಲು ಭೀಮೇಗೌಡರು ಆರು ತಿಂಗಳು ವಿಚಾರ ವಿಮರ್ಶೆ ಮಾಡಿದರು. ಕೆಲಸ ನಿಂತ ಆ ಆರು ತಿಂಗಳಲ್ಲಿ ಸರಕಾರೀ ನೌಕರರೆಲ್ಲಾ ಸಂಬಳ ಪಡೆದು ಚೈನೀ ಹೊಡೆಯುತ್ತಾ ಕೃಷ್ಣಾ ನದಿಯ ದಂಡೆಗುಂಟ ವಿಹರಿಸಿದರು. ಕೂಲಿಯಿಲ್ಲದಿದ್ದಾಗ ಹೊಟ್ಟೆಗೂ ಬಿಡುವು