________________
ಇನ್ನಷ್ಟು ಕತೆಗಳು } ಮುಂದಾಳುವಿನ ಜನತಾಸೇವೆ ೪೮೭ ಇವೆ. ಬೇರೆ ಯಾವ ಹೆಸರನ್ನೂ ನಾನು ಪರಿಗಣಿಸುವುದಿಲ್ಲ. ದಯವಿಟ್ಟು ಒತ್ತಾಯ ಮಾಡಬೇಡಿರಿ" -ಸೌಮ್ಯವಾಗಿ ಆದರೆ ದೃಢವಾಗಿ ಹೇಳಿದರು. ಪ್ರಿನ್ಸಿಪಾಲರು. “ಸ್ವಾಮಿ ಪ್ರಿನ್ಸಿಪಾಲರೆ, ಹೊಸದಾಗಿ ಬಂದಿದ್ದೀರಿ. ಇಲ್ಲಿ ನಿಮ್ಮ ಸರಕಾರದ ಕಾನೂನು ನಡೆಯುವುದಿಲ್ಲ. ನಾನು ಈ ಭಾಗದ ಮುಂದಾಳು. ಇಲ್ಲಿ ನನ್ನದೇ ಕಾನೂನು. ಇಲ್ಲಿಯ ದೀನದಲಿತರ ಮುಖವಾಣಿ ನಾನು. ಇಲ್ಲಿಯ ಸಮಸ್ತ ಬಡವರ ಬಂಧು ನಾನು. ನಮ್ಮ ಪೈಕಿಯ ಎಲ್ಲಾ ಹುಡುಗರಿಗೆ ನೀವು ಅಡ್ಮಿಶನ್ ಕೊಡಲೇ ಬೇಕು. ನೀವು ಇಲ್ಲವೆಂದರೆ ಪಾಪ ಈ ಬಡಮಕ್ಕಳು ಎಲ್ಲಿಗೆ ಹೋಗಬೇಕು ? ವಿದ್ಯೆ ಕಲಿಯುವ ಅವಕಾಶದಿಂದ ಅವರನ್ನು ನೀವು ವಂಚಿತಗೊಳಿಸತಕ್ಕದ್ದಲ್ಲ. ಹೆಂಗಾದರೂ ಮಾಡಿ ಇಷ್ಟು ಮಂದೀನ್ನ ನೀವು ಆಕಾಮಡೇಟ್ ಮಾಡಲೇ ಬೇಕು." ಪ್ರಿನ್ಸಿಪಾಲರ ಹುಬ್ಬು ಬಿಗಿದುಕೊಂಡವು. ಅವರು ನಿರ್ಧಾರದ ದನಿಯಲ್ಲಿ ಹೇಳಿದರು. ನನ್ನ ಮಿತಿಯನ್ನು ತಿಳಿದುಕೊಳ್ಳಿರಿ ಕಲ್ಲಪ್ಪನವರೆ, ಪದವಿಪೂರ್ವ ಕಾಲೇಜಿಗೆ ಇಂತಿಷ್ಟೇ ಸೀಟು ಅಂತ ನಿಗದಿಪಡಿಸಲಾಗಿರುತ್ತದೆ. ಆ ಸೀಟುಗಳನ್ನ ನಿಯಮಗಳ ಪ್ರಕಾರ ಹಂಚಲಾಗಿದೆ. ನಾನು ಯಾವುದೇ ಒತ್ತಡಕ್ಕೂ ಜಗ್ಗುವವನಲ್ಲ. ತಿಳಿಯಿತೆ ?" ಸೋಲೇ ಅರಿಯದ ಮುಂದಾಳು ಹಿಂದಿರುಗಿ ಹೋಗಬೇಕಾಯಿತು.
ಮರುದಿನ ಆ ಚಿಕ್ಕ ಊರಿನ ಚಿಕ್ಕ ಕಾಲೇಜಿನ ಆವರಣದಲ್ಲಿ ದೊಡ್ಡ ದೊಡ್ಡ ಪೋಸ್ಟರುಗಳು ಎದ್ದು ನಿಂತವು. ಹೊಸ ಪ್ರಿನ್ಸಿಪಾಲರ ಕಾರ್ಟೂನು ಚಿತ್ರ. ಜೊತೆಗೆ ಘೋಷಣೆಗಳು ; 'ಸೀಟು ಮಾರಾಟ ಮಾಡುವ ಪ್ರಿನ್ಸಿಪಾಲನಿಗೆ ಧಿಕ್ಕಾರ', “ಕಾಲೇಜಿನಲ್ಲಿ ಸೀಟು ಬೇಕೆ ? ಒಂದು ಸೀಟಿಗೆ ಐದು ಸಾವಿರ ರೂಪಾಯಿ !, 'ವಿದ್ಯೆಯ ವ್ಯಾಪಾರಿ ಪ್ರಿನ್ಸಿಪಾಲನನ್ನು ಒದ್ದೋಡಿಸಿರಿ' ಇತ್ಯಾದಿ, ಇತ್ಯಾದಿ, ಮುಂದಾಳು ಕಲ್ಲಪ್ಪ ಮಣ್ಣಿನಮನಿ ತನ್ನ ಹಿಂಬಾಲಕರನ್ನು ಕರಕೊಂಡು ಊರಲ್ಲಿ ಮೆರವಣಿಗೆ ಮಾಡಿದ. ತಾಲ್ಲೂಕು ಆಫೀಸಿಗೆ ಹೋಗಿ ಬಡವರಿಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ನ್ಯಾಯ ಕೋರಿ ಮನವಿಪತ್ರ ಸಲ್ಲಿಸಿದ. ನಾಲ್ಕಾರು ದಿನ ಊರಲ್ಲೆಲ್ಲ ಇದೇ ಸುದ್ದಿ.
- ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿತ್ತು. ಸಂತೆಯ ದಿನ ಹೊತ್ತು ಮುಳುಗಿದ ನಂತರ ಸುತ್ತಲಿನ ಹಳ್ಳಿಗಳಿಂದ ಬಂದಿದ್ದ ಹಲವಾರು ಜನ ಮುಂದಾಳುವನ್ನು ಸುತ್ತುವರಿದಿದ್ದರು. ಮುಂದಾಳು ತನ್ನದೇ ಆದ ಗತ್ತಿನಲ್ಲೇ ಅವರ ಜೊತೆ ಸಂಧಾನ ನಡೆಸಿದ್ದ :