ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೮೮ ನಡೇದದ್ದೇ ದಾರಿ
"ಯಜಮಾನರೆ, ನೀವು ಮೂರು ನಾವಿರ ವಾಪಸು ತಗೊಳ್ರಿ, ಪಾಟೀಲರೆ, ಇಗೋ ನಿಮ್ಮ ಒಂದು ಸಾವಿರ. ಗೌಡರೆ, ನಿಮ್ಮ ಎರಡು ಸಾವಿರ ತಗೊಳ್ಳಿರಿ. ಈ ಸಲ ನಮ್ಮ ಗ್ರಹಚಾರ ಸರಿಯಿಲ್ಲ." ಆದರೆ ಅವರು ತಕರಾರು ತೆಗೆದರು. "ಏನಿದು ಕಲ್ಲಪ್ಪಣ್ಣಾ. ನಮ್ಮ ಮಕ್ಕಳಿಗೆಲ್ಲ ಕಾಲೆಜಿನಲ್ಲಿ ಸೀಟು ಕೊಡಸ್ತೀನಿ, ತಲಾ ಐದು ಸಾವಿರ ಕೊಡಬೇಕು, ಅಂತ ಹೇಳಿ ಹಣ ಇಸಗೊಂಡಿ. ನಮ್ಮ ಹುಡುಗರಿಗೆ ಸೀಟೂ ಸಿಗಲಿಲ್ಲ.ನಮ್ಮ ಹಣಾನೂ ಅರ್ಧಕ್ಕರ್ಧ ನುಂಗಿ ಹಾಕ್ತಿದ್ದೀಯಲ್ಲಪ್ಪೋ..." ಕಲ್ಲಪ್ಪ ಮಣ್ಣಿನಮನಿಗೆ ಸಿಟ್ಟು ಬಂದಿತು. "ಅಲ್ಲಪ್ಪೋ, ನಿಮ್ಮ ಅರ್ಧ ಹಣಾನ ನಾನು ನುಂಗಿ ಹಾಕ್ತೀನಾ? ಇದು ನನಗಲ್ಲ. ರಾಜಧಾನಿಗೆ ಹೋಗಿ ಮಿನಿಸ್ಟರ್ನ ಕಂಡು ಈ ಕೆಟ್ಟ ಹುಳುವಿನಂಥಾ ಪ್ರಿನ್ಸಿಪಾಲನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕಲ್ಲ. ಅದಕ್ಕೆಲ್ಲ ನನಗೆ ಹಣ ಬೇಡವಾ? ನಾನು ಮಾಡೋದೆಲ್ಲ ನಿಮಗಾಗಿ, ಜನತೆಗಾಗಿ ಅಂತ ಗೊತ್ತಿಲ್ಲವಾ? ಜನಥಾ ಸೇವೆಯೇ ಜನಾರ್ಧನ ಸೇವೆ ಅಂತ ನಂಬಿದವನು ನಾನು. ಸುಮ್ಮನೆ ಎದ್ದು ಹೋಗಿರಿ" ಅಂತ ಮುಂದಾಳು ಗರ್ಜಿಸಿದ. ಎಲ್ಲರೂ ತೆಪ್ಪಗಾದರು. **********