ಪುಟ:ನಡೆದದ್ದೇ ದಾರಿ.pdf/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನ್ನಷ್ಟು ಕತೆಗಳು/ಸೋನಿಯಾ ೪೯೧

 ಮಿಲಿಯ ಒಂಬತ್ತನೆಯ ಇಯತ್ತೆಯ ಪರೀಕ್ಷೆ ಮುಗಿದು ಬೇಸಿಗೆಯ ರಜವೂ ಮುಗಿಯಲು ಬಂದಿತ್ತು.ಎಸ್.ಎಸ್.ಎಲ್.ಸಿ.ಗೆ ಹೋಗುವ ಸಂಭ್ರಮ.ಟ್ಯುಶನ್ನುಗಳ ಭರಾಟೆ.ಭವಿಷ್ಯದ ಬಗ್ಗೆ ನೂರು ಆಸೆಗಳು,ಕನಸುಗಳು.
 ರಜಯಿಡೀ ಸೋನಿಯಾಳ ಭೆಟ್ಟಿ ಆಗಿರಲ್ಲಿಲ.ಒಮ್ಮೆ ಹೋಗಿ ಬರುವ ಅನ್ನುತ್ತಿದ್ದಳು.ಆಗಲೇ ಸೋನಿಯಾಳಿಂದ ಫೋನ್ ಬಂತು-"ಈಗಿಂದೀಗ ಮನೆಗೆ ಬಾ,ಅರ್ಜೆಂಟ್.ಕೂಡಲೇ ಬಾ,ಪ್ಲೀಜ್".
 ಮಿಲಿ ಖುಷಿಯಿಂದ ಅಲಂಕರಿಸಿಕೊಂಡು ತನ್ನ ವಾಹನದಲ್ಲಿ ಆಗಿಂದಾಗ ಹೊರಹೋದಳು.
 ನಾನು ಎನೋ ಓದುತ್ತಾ ಇದ್ದೆ.ಮೆಚ್ಚಿಕೊಂಡು ಪುಸ್ತಕಗಳನ್ನು ತಿರುತಿರುಗಿ ಓದಲು ಬೇಸಿಗೆಯ ರಜ ಒಳ್ಳೆಯ ಕಾಲ ಅಂದುಕೊಳ್ಳುತ್ತಾ ಇದ್ದೆ,ಸುಮಾರು ಎರಡು ತಾಸು ಕಳೆದಿರಬೇಕು,ಆಗ-
 -ಆಗ ಮಿಲಿ ತಿರುಗಿ ಬಂದಳು.
  ಕಣ್ಣೆಲ್ಲ ಅತ್ತು ಕೆಂಪಾಗಿದೆ.ಮುಖದ ಮೇಲಿನ ಕಳೆಯೇ ಬತ್ತಿಹೋಗಿದೆ.ಕೈಕಾಲಲ್ಲಿನ ಶಕ್ತಿ ಸೋರಿ ಹೋಗಿದೆ.ಒಳಗೆ ಬಂದವಳೇ ಸೋಫಾದಲ್ಲಿ ಕುಸಿದು ಕುತಳು.
  ನನಗೆ ಗಾಬರಿ.ಎನಾಯಿತೆಂದು ಕೇಳುವ ಮೊದಲೇ ಸೋತ ದನಿಯಲ್ಲಿ ಆಕೆ ಹೇಳಿದಳು."ಅಮ್ಮಾ,ಸೋನಿಯಾಳ ಮದುವಿ ಮಾಡಿಬಿಟ್ಟಾರಮ್ಮಾ...."
  'ಸೋನಿಯಾಳನ್ನು ಗಲ್ಲಿಗೆ ಏರಿಸಿಬಿಟ್ಟಾರಮ್ಮಾ'ಅನ್ನುವ ಧಾಟಿಯಲ್ಲಿ ಬಂತು ಆ ಮಾತು.
  "ಏನಂದಿ ಮಿಲಿ?ಮದುವೆ ಮಾಡ್ಯಾರs?ಆ ಕೂಸಿಗೆ?ಆದ್ಹಾಂಗ?ಇನ್ನೂ ಮೆಜಾರಿಟಿಗೇ ಬಂದಿಲ್ಲಲ್ಲ..."ಮಾತಾಡುತ್ತಿದಂತೆ ನನ್ನ ಮಾತಿನ ಅರ್ಥಹೀನತೆಯ ಅರಿವಾಗಿ ನಾನು ಒಮ್ಮೆಲೆ ಸುಮ್ಮನಾದೆ.
  ಮಿಲಿ ಹೇಳತೊಡಗಿದಳು.ಹೇಳುತ್ತ ಹೇಳುತ್ತ ಹೋದಂತೆ ಅವಳ ದನೆಯಲ್ಲಿನ ನೋವು,ದಿಗ್ಭ್ರಮೆ,ಅಸಹಾಯಕತೆ ಮಾಯವಾಗಿ ಸಿಟ್ಟು,ಆಕ್ರೋಶ,ಸಂತಾಪ ಕಾಣತೊಡಗಿದವು.
   ಸೋನಿಯಾ ಸಂಪ್ರದಾಯಸ್ಥ ರಜಪೂತ ಕುಟುಂಬದ ಹಿರಿಯ ಮಗಳು. ಸಿರಿವಂತ ವ್ಯಾಪಾರಿಯಾಗಿದ್ದ ಆಕೆಯ ತಂದೆಗೆ ಐವರು ಹೆಣ್ಣುಮಕ್ಕಳು. ರಾಜಸ್ಥಾನ ಬಿಟ್ಟು ಈ ಕಡೆ ಬಂದು

ನೆಲೆಸಿ ಎರಡು ತಲೆಮಾರು ಕಳೆದವು.ಮನೆಯಲ್ಲಿ ಸೋನಿಯಾಳ