ಪುಟ:ನಡೆದದ್ದೇ ದಾರಿ.pdf/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಜ್ಜಿ , ವಿಧವೆ ಸೋದರತ್ತೆ, ಅಜ್ಜಿಯ ಅತ್ತೆ ಹೀಗೆ ಮೂವರು ಮುವರು ಮುದುಕಿಯರು. ಹದಿನಾಲ್ಕು ವರ್ಷಕ್ಕೆ ಹುಡುಗಿಯ ಕೈ ಹಳಿದಿ ಮಾಡುವುದು ಸಂಪ್ರದಯ. ಹೆಚ್ಚು ಕಲಿತರೆ ಈ ಕಡೆ ಅವರ ಜಾತಿಯ ವರ ಸಿಗುವುದೇ ಇಲ್ಲ. ಹಿರಿಯ ಮಗಳದೇ ಮದವೆಯನ್ನು ಸರಿಯಾದ ಕಾಲಕ್ಕೆ ಮಾಡಿದಿದ್ದರೆ ತಂಗಿಯರ ಗತಿಯೇನು? ಎಲ್ಲ ರೀತಿಯಿಂದ ಯೋಚನೆ ಮಾಡಿ ಹಿರಿಯರ ನಿರ್ಧರಿಸಿದರೆ. ಮುಂಬಯಿಯಲ್ಲಿ ಪ್ರಸಿದ್ಧ ಬಿಜಿನೆಸ್ ಮನ್ ಆಗಿದ್ದವರ ಮಗ. ಮ್ಯಾಟ್ರಿಕ್ ಫ಼ೇಲಾಗಿದ್ದರೇನ್ಂತೆ, ಲಕ್ಷಾನುಗಟ್ಟಲೆ ಹಣ ಗಳಿಸುತ್ತಾನೆ. ಒಳ್ಳೆಯ ವರ , ಸೋನಿಯಾ ತಕರಾರು ಮಾಡುತ್ತಾಳೆ ಅಂತ ಗೋತ್ತಿತ್ತು. ಅವಳಿಗೆ ಹೇಳದೆಯೇ ಮದುವೆಯ ತಯಾರಿ ಮಾಡಿದರು. ನೆಂಟರ ಮನೆಗೆ ಹೋಗೋಣ ಅಂತ ಹೇಳಿ ಕರಕೊಂಡು ಹೋದರು. ಯಾರದೋ ಮದುವೆ ಅಂತ ಸುಳ್ಲು ಹೇಳಿದರು.ತನ್ನದೇ ಅಂತ ತಿಳಿದಾಗ ಪ್ರತಿಭಟಿಸಿದಳು,ಅತ್ತಳು, ಉಪವಾಸ ಕೂತಳು. ಕೂಡಿದ ಬಂಧುಗಳು ಬುದ್ಧಿ ಹೇಳಿದರು. ಅವಳ ಸ್ವಂತ ತಾಯಿ ನೀನು ಒಪ್ಪದಿದ್ದರೆ ವಿಷ ಕುಡಿದು ಸಾಯುತ್ತೇನೆಂದು ಬೆದರಿಕೆ ಹಾಕಿದಳು. ಸೋನಿಯಾಗೆದಿಕ್ಕೇ ತೋಚಲಿಲ್ಲ. ಮದುವೆ ನಡೆದೇ ಹೋಯಿತು. ಭಾರಿ ವೈಭವದ ಮದುವೆ. ವೈಭವದ ಮದುವೆಯ ನಂತರ ಸಿಮ್ಲಾದಲ್ಲಿ ಒಂದು ತಿಂಗಳ ಹನಿಮೂನ್. ಅದಾದ ನಂತರ ಒಂದು ವಾರ ಇದ್ದು ಹೋಗಲು ಸೋನೆಯಾ ತವರಿಗೆ ಬಂದಿದ್ದಳು."ಹ್ಯಾಂಗಿದ್ದಾಳ ಸೋನೆಯಾ? ಏನಂತಾಳ?"- ಉಗುಳು ನುಂಗಿ ಕೇಳಿದೆ.

ಏನಂತಾಳಮ್ಮಾ ಪಾಪ , ಬರೇ ಅಳತಾಳ . ಸೊರಗಿ ಕಡ್ಡಿ ಅಗ್ಯಾಳ . ಮುಖದ ಮ್ಯಾಲ, ಕುತ್ತಿಗೀ ಮ್ತಾಲ ನೀಲಿ ನೀಲಿ ಕಲೆ . ಮೈತುಂಬ ಬಂಗಾರ, ಜರೀ ಸೀರೆ,ಕಾಲೊಳಗೂ ಒಜ್ಜಾ-ಒಜ್ಜಾ ಚೈನು. ಎದ್ದು ತಿರಗ್ಯಾಡಲಿಕ್ಕೂ ಶಕ್ತಿ ಇಲ್ಲ ಅಕೆಗೆ. ಘೂಂಘಟ ಹಾಕ್ಕೊಂಡು ಕೂತಬಿಟ್ಟಾಳ. ಮಾತಾಡಿದರ ಕಣ್ಣಾಗ ನೀರು ಬರ್ತವ ,"ಗೆಳತಿಯೊಂದಿಗೆ ತಾನೂ ಕಣ್ಣೀರು ಸುರಿಸಿ ಬಂದಿದ್ದ ಮಿಲಿಗೆ ನಿಜವಾಗಿ ಅಘಾತವಾಗಿತ್ತು.

ಸದಾ ನಗುತ್ತ ಜೋಕು ಮಾಡುತ್ತ ಕುಣಿಯುತ್ತಲೇ ಓಡಾಡುತ್ತಿದ್ದ ಸೋನಿಯಾಳ ಮುಖ ಕಣ್ಣಿದುರು ಬಂತು. ಛೆ,ಅನ್ಯಾಯ ಅಂದುಕೊಂಡೆ.

ಮತ್ತೆ ಒಂದು ವರ್ಷಕಳೆದಿತ್ತು. ಮಿಲಿ ಎಸ್ ಎಸ್ ಎಲ್.ಸಿ.ಯಲ್ಲಿ ತುಂಬ ಚೆನ್ನಾಗಿ ಮಾಡಿದ್ದಳು. ರಿಝಲ್ಪ್ ಬಂದ ದಿನವೇ ಸೋನಿಯಾ ಊರಿಗೆ ಬಂದ ಸುದ್ದಿ