highest example of inter-relatendess” ಎಂದು ಡಿ.ಎಚ್. ಲಾರೆನ್ಸ್ ಹೇಳಿದ. ಹೆಚ್ಚು ಕಡಿಮೆ ಇದೇ ಮಾತನ್ನು ಶಾಂತಿನಾಥ ದೇಸಾಯಿಯವರೂ ಸಮರ್ಥಿಸಿದರು. “ವೈಯಕ್ತಿಕ ಸಂಬಂಧಗಳ ಮುಖಾಂತರ ಜೀವನವನ್ನು ದೇಸಾಯಿಯವರೂ ಸಮರ್ಥಿಸಿದರು “ವೈಯಕ್ತಿಕ ಸಂಬಂಧಗಳ ಮುಖಾಂತರ ಜೀವನವನ್ನು ಶೋಧಿಸುವುದು, ಅದಕ್ಕೆ ಅರ್ಥ ಕೊಡುವುದು, ಅದಕ್ಕೆ ಅರ್ಥ ತುಂಬುವುದು ನನ್ನ ಧರ್ಮ.” ಈ ಸಂಬಂಧಗಳಲ್ಲಿ ದೇಸಾಯಿಯವರಲ್ಲಿದ್ದಂತೆ ವೀಣಾರಲ್ಲಿಯೂ ಗಂಡು-ಹೆಣ್ಣು ಸಂಬಂಧಗಳಿಗೆ ಆದ್ಯತೆಯಿದೆ. ಆದರೆ ಅವರ ದೃಷ್ಟಿಕೋನ. ಒಂದೆರಡು ಚಿಕ್ಕ ಅಪವಾದಗಳನ್ನು ಬಿಟ್ಟರೆ. ಸಂಪೂರ್ಣವಾಗಿ ಹೆಣ್ಣಿನ ದೃಷ್ಟಿಕೋನ, ಗಂಡಿನ ಸ್ವಾರ್ಥ, ಅಧಿಕಾರ ಲಾಲಸೆ, ಕ್ರೌರ್ಯ, ಮೋಸಗಳ ತೀವ್ರ ಅರಿವಿದ್ದೂ ಅವರು ಪುರುಷ ದ್ವೇಷಿಗಳಲ್ಲ. 'ಮುಳ್ಳುಗಳು' ಇಂಥ ಕತೆಗಳಲ್ಲಿ ವ್ಯಕ್ತವಾಗುವ ದ್ವೇಷ, ಪ್ರೀತಿ, ಗೌರವ, ಅರ್ಪಣೆ ಇಂಥ ಮೌಲ್ಯಗಳ ಸಂಪರ್ಕವೇ ಇಲ್ಲದ ಕಾಮುಕತೆಯ ವಿರುದ್ಧದ ದ್ವೇಷವೇ ಹೊರತು ಪುರುಷ ಜಾತಿಯ ದ್ವೇಷವಲ್ಲ.
-ವೀಣಾರ ಎಲ್ಲ ಕತೆಗಳನ್ನು ಒಟ್ಟಿಗೆ ನೋಡಿದಾಗ ಅರಿವಿಗೆ ಬರುವ ಒಂದು ಅಂಶವೆಂದರೆ ಅವರ ಪ್ರೀತಿಯ ಹಂಬಲ. ಪ್ರೀತಿಯ ಕ್ಷಣಗಳು ಎಷ್ಟೇ ಕ್ಷಣಿಕವೆನಿಸಿದರೂ, ಹಿನ್ನೋಟದಲ್ಲಿ ಭ್ರಾಮಕವೆನಿಸಿದರೂ ಅವರ ಕತೆಗಳ ನಾಯಕಿಯರು ಜೀವಂತಿಕೆಯನ್ನು ಅನುಭವಿಸುವುದು ಈ ಕ್ಷಣಗಳಲ್ಲಿಯೇ. ಇದೇ ಅವರ ಸೃಜನಶೀಲತೆಯ ಉಗಮವೂ ಆಗಿದೆ. ವೀಣಾ ಬದುಕನ್ನು ಪ್ರೀತಿಸುತ್ತಾರೆ. ಆದರೆ ಅವರು ಪ್ರಮುಖ ನವ್ಯರಂತೆ ಅಸ್ತಿತ್ವವಾದಿಗಳಲ್ಲ. ಅವರ ಕತೆಗಳಲ್ಲಿ ನೆನಪುಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಅವರ ನಾಯಕಿಯರಲ್ಲಿ ಬಹಳಷ್ಟು ಜನ ಭೂತಪೀಡೆಯಿಂದ ನರಳುವವರೇ. ಸುಖ, ಸಮೃದ್ದಿಗಳತ್ತ ವರ್ತಮಾನ ಕರೆದರೂ ಅವರ ನೆನಪುಗಳು ಅವರನ್ನು ಭೂತಕ್ಕೆಯ ಕಟ್ಟಿ ಹಾಕುತ್ತವೆ. ಕೆಲ ಸುದೈವಿಗಳಿಗೆ ಮಾತ್ರ ಬಿಡುಗಡೆ ದೊರೆಯುತ್ತದೆ. 'ನೆನಪು... ಬರೀ ನೆನಪು' ಕತೆಯ ಪಾವನಾ, 'ಪ್ರಶ್ನೆ'ಯ ಶಶಿ, 'ಮಳೆ ಬಂದಾಗ' ಕತೆಯ ಸಹನಾ, 'ದೆವ್ವದ ನಾಯಕ- ಇವರೆಲ್ಲರೂ ಭೂತದ ಮಾಯೆಯಲ್ಲಿ ತಮ್ಮನ್ನು ಕಳೆದುಕೊಂಡವರೇ. ಆದರೆ ವೀಣಾ ತೀರಾ ನಿರಾಶಾವಾದಿಯಲ್ಲ. 'ಕೊನೆಯ ದಾರಿ'ಯ ಲೀಲಾ, 'ಹೊರಟು ಹೋದವನು' ಕತೆಯ ನಾಯಕಿ, 'ಕವಲು'ವಿನ ಮಿನಿ, 'ಬಿಡುಗಡೆ'ಯ ಸರೂ, ಒಂದಿಲ್ಲೊಂದು ರೀತಿಯ ಮುಕ್ತಿ ಕಂಡುಕೊಳ್ಳುತ್ತಾರೆ, 'ಮರೀಚಿಕೆ'ಯ ಮಿನೀಯಂಥವರಿಗೆ ಮಾತ್ರ ಬಿಡುಗಡೆ'ಯ ಕನಸು ಮರೀಚಿಕೆಯಾಗಿ ಉಳಿಯುತ್ತದೆ. ಈ ಬಿಡುಗಡೆಗಳೆಲ್ಲ ವಾಸ್ತವದ ಅರಿವಿನಿಂದ ಬಂದವುಗಳೇ ವಿನಹ ಆದರ್ಶದ ಸಾಧನೆಗಳಲ್ಲ. ಇಂಥ ಕತೆಗಳಲ್ಲಿ ಎದ್ದು ಕಾಣುವುದು ಎಷ್ಟೋ ಜನ ಸ್ತ್ರೀವಾದೀ ವಿಮರ್ಶಕರಿಗೆ ಬರ್ಷಣವೆನಿಸಿದ ವೀಣಾ ಅವರ ಪ್ರಖರ ವಾಸ್ತವವಾದ, ಯಾವ ರೀತಿಯ ಭ್ರಮೆಯೊಂದಿಗೂ ಅವರು ಒಪ್ಪಂದ ಮಾಡಿಕೊಳ್ಳಲಾರರು.
ವೀಣಾರ ವಾಸ್ತವ ಪ್ರಜ್ಞೆ ಎಷ್ಟು ಪ್ರಖರವಾಗಿದೆಯೆನ್ನುವುದಕ್ಕೆ ಅವಳ ಸ್ವಾತಂತ್ರ್ಯ', 'ತಿರುಗಿ ಹೋದಳು', 'ಅನಾಥೆ', 'ಇಲ್ಲಿಂದ ಮುಂದೆಲ್ಲಿ', 'ಸಮಾಧಾನ', 'ಸೋನಿಯಾ ಇಂಥ ಕತೆಗಳು ಹಾಗೂ 'ಶೋಷಣೆ, ಬಂಡಾಯ ಇತ್ಯಾದಿ....' ಕಾದಂಬರಿ ನಿದರ್ಶನಗಳಾಗಿವೆ. 'ದಾಸ್ಯದ ಸಂಕೋಲೆಯನ್ನು ಹರಿದೊಗೆಯಬೇಕು' ಎಂದು ಸಭೆಯಲ್ಲಿ