ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೯೪
ನಡೆದದ್ದೇ ದಾರಿ

ಆದರೆ ಆಕೆ ಓದುತ್ತಿರಲಿಲ್ಲ. ನಾನು ಹೋಗಿ ಅವಳ ಹೆಗಲ ಮೇಲೆ ಮೃದುವಾಗಿ
ಕೈಯಿಟ್ಟಾಗ ತಟ್ಟನೆ ತಲೆಯೆತ್ತಿ ಏನೂ ಪೀಠಿಕೆಯಿಲ್ಲದೆ. ಬಹುಶಃ ಬಹಳ ಹೊತ್ತಿನಿಂದ
ಅವಳ ಮನಸ್ಸಿನಲ್ಲಿ ತಾಕಲಾಡತೊಡಗಿದ್ದ ಆ ಪ್ರಶ್ನೆಯನ್ನು ಕೇಳಿದಳು.

"ಅಮ್ಮಾ, ಸ್ಕೂಲಿನ್ಯಾಗ ಒಂಬತ್ತು ವರ್ಷ ಸೋನಿಯಾ ನನ್ನ
ಕ್ಲಾಸ್‌ಮೇಟಾಗಿದ್ದಳು. ನಿನಗೆ ಗೊತ್ತಲ್ಲ ? ಕರಿಯರ್‌ ಸಲುವಾಗಿ ಎಷ್ಟು ಕನಸು
ಇದ್ದವು ಆಕಿಗೆ ! ನಾವಿಬ್ರೂ ಡಾಕ್ಟರ್‌ ಆಗೋಣ. ನಮ್ಮ ದೇಶದ ಬಡಜನರ ಸೇವಾ
ಮಾಡೋಣ ಅಂದುಕೋತಿದ್ವಿ ನಾವು. ಆಂಥಾ ಹುಡುಗಿನ್ನ ಈ ಥರಾ ಟ್ರಾನ್ಸ್‌ ಫಾರ್ಮ್‌
ಮಾಡಿ ಆಕಿಯ ವ್ಯಕ್ತಿತ್ವವನ್ನೇ ಕೊಲೆ ಮಾಡ್ಯಾರಲ್ಲಮ್ಮಾ, ಈ ಅನ್ಯಾಯಕ್ಕ ಯಾರು
ಜವಾಬ್ದಾರರು ?"

ನಾನು ಸುಮ್ಮನ್ನಿದ್ದೆ.

“ಹೊತ್ತು ಭಾಳ ಆಗೇದ ಮಿಲಿ, ಮಲಕೋ" ಅಂತ ಹೇಳಿ ಹೊರಟು ಬಂದೆ.

ನಾನೆಂದೂ ಸರಸಿಯ ಗೊಂಬೆಯ ಕತೆಯನ್ನು ಮಿಲಿಗೆ ಹೇಳಲೇ ಇಲ್ಲ.