ಹುಡುಗರು-ಹುಡುಗಿಯರು ಪ್ರಶ್ನಾರ್ಥಕವಾಗಿ ಆಕೆಯನ್ನು ಕಣ್ಣರಳಿಸಿ ನೋಡಿದರು.
ವಿದ್ಯಾರ್ಥಿಗಳು ತನ್ನನ್ನು ನೋಡುವಾಗೆಲ್ಲ ಅವರ ಎಳೆಯ ಕಣ್ಣುಗಳಲ್ಲಿ
ಸುವ್ಯಕ್ತವಾಗುವ ಮೆಚ್ಚು ಗೆಯ ಅಭ್ಯಾಸವಾಗಿದ್ದ ಅವಳಿಗೆನಿಸಿತು -ಈ ವಿದ್ಯಾರ್ಥಿಗಳ
ಮೆಚ್ಚುಗೆಯನ್ನ ಮೊದಲು ಗಳಿಸಬೇಕು. ಉಳಿದವರದು ಎಷ್ಟು ಹೊತ್ತಿನ ಕೆಲಸ...
“ನಾನು ರಜನಿ ನಾಯಕ್, ಇನ್ನು ಮೇಲೆ ನಾನು ನಿಮಗೆ ಸಾಮಾನ್ಯ ವಿಜ್ಞಾನ
ಹೇಳುತ್ತೇನೆ-"
“ಇನ್ನು ಮೇಲೆ ? ಅಂದರೆ ದಿನಾಲು ?” -ಮುಂದಿನ ಬೆಂಚಿನ ಹುಡುಗ ತಟ್ಟನೆ
ಕೇಳಿದ.
“ಹೌದು, ದಿನಾಲು" -ಆಕೆ ಆತ್ಮವಿಶ್ವಾಸದ ಮುಗುಳ್ನಗೆಯೊಂದಿಗೆ ಹೇಳಿದಳು.
ಕ್ಲಾಸಿನಲ್ಲಿ ಒಮ್ಮೆಲೆ ಹಲವಾರು ಅಸಮಾಧಾನದ ಧ್ವ ್ವನಿಗಳೆದ್ದವು : "ಯಾಕೆ ?
ವರ್ಮಾ ಮ್ಯಾಡಮ್‌ಗೆ ಏನಾಯಿತು ?"" “ಇಷ್ಟು ದಿನ ಅವರೇ ಬರುತ್ತಿದ್ದರಲ್ಲ,
ಈಗೇಕೆ-'. “ವರ್ಮಾ ಮ್ಯಾಡಂ ಯಾಕೆ ಬರೋದಿಲ್ಲ ?“. “ವರ್ಮಾ ಮ್ಯಾಡಂ-"
-ಸಾಯತ್‌ಲೆನ್ಸ್ !" ಎಂದಾಕೆ ರೂಲುಕಟ್ಟಿಗೆಯಿಂದ ಟೇಬಲಿನ ಮೇಲೆ
ಮೂರು ನಾಲ್ಕು ಬಾರಿ ಕುಟ್ಟಿದಾಗಲೇ ಹುಡುಗರು ಸುಮ್ಮನಾದರು. ಆದರೂ ಅವರ
ಅತೃಪ್ತಿಯ ಗುಸುಗುಸು ನಿಲ್ಲಲೇ ಇಲ್ಲ.
ಆ ರಾತ್ರಿ; ರಜನಿ ಗಂಡನಿಗೆ ಪತ್ರ ಬರೆದಳು : “ನಾನು ಸುರಕ್ಷಿತ ಬಂದು
ಮುಟ್ಟಿದೆ. ಮಾವಶಿಯ ಮನೆ ಚೆನ್ನಾಗಿದೆ. ಇವತ್ತು ಡ್ಯೂಟಿಗೆ ರಿಪೋರ್ಟ್ ಮಾಡಿದೆ.
ಯಾಕೋ ಇಲ್ಲಿನ ಹೈಸ್ಕೂಲ್, ಪ್ರಿನ್ಸಿಪಾಲರು, ಟೀಚರು, ಹುಡುಗರು, ನನಗೆ ಅಷ್ಟು
ಹಿಡಿಸಲಿಲ್ಲ. ಮೊದಲ ದಿನವೆಂದು, ಅದೂ ನಿಮ್ಮನ್ನು ಬಿಟ್ಟು ಬಂದಿರುವೆನೆಂದು.
ಹೀಗನಿಸುತ್ತಿರಬಹುದು. ಕ್ರಮೇಣ ಎಲ್ಲ ಸರಿಹೋಗುವುದರಲ್ಲಿ ಸಂಶಯವಿಲ್ಲ."
೨
ಮರುದಿನ ಆಕೆ ಹೈಸ್ಕೂಲಿಗೆ ಹೋದಾಗ ಮೊದಲ ಗಂಟೆಯಾಗಿ ಪ್ರಾರ್ಥನೆ
ನಡೆದಿತ್ತು. ಎಲ್ಲರೂ ಸಾಲಾಗಿ ನಿಂತಿದ್ದರು. ಆಕೆಯೂ ಹಿಂದಿನ ಸಾಲಿಗೆ ಹೋಗಿ ಎಲ್ಲರ
ಬೆನ್ನುಗಳನ್ನು ಪರೀಕ್ಷಿಸುತ್ತ ನಿಂತಳು. ಆಕೆಯೆಂದೂ ಪ್ರಾರ್ಥನೆಯ ಹಾಡನ್ನು
ಹಾಡುತ್ತಿರಲಿಲ್ಲ. ಆಕೆಗೆ ಪ್ರಾರ್ಥನೆಯಲ್ಲಿ ನಂಬಿಕೆ ಇರಲಿಲ್ಲ. ಆದರೆ ಇಂದು
ಇದ್ದಕ್ಕಿದ್ದಂತೆ ಅವಳಿಗೆ ಪ್ರಾರ್ಥನೆಯ ಹಾಡು ಬಹಳ ಇಂಪಾಗಿ ಕೇಳಿಸಿತು. ಅವಳು