ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೫೦೦
ನಡೆದದ್ದೇ ದಾರಿ

“ಮಿಸೆಸ್‌ ವರ್ಮಾ ಅವರ ಆಟ ವಂಡರ್‌ಫುಲ್‌ ಆಗಿತ್ತು."

“ವರ್ಮಾ ಮ್ಯಾಡಮ್‌ ಎಷ್ಟು ಎಫೀಶಿಯಂಟ್‌ ಇದ್ದಾರಲ್ಲ...”

“ಹಲೋ ವರ್ಮಾ ಮ್ಯಾಡಮ್‌, ಸ್ವಲ್ಪ ಇತ್ತ ಕಡೇನೂ ಬರ್‍ರೆಲ್ಲ...”

ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನನಗೆ ಬಹಳ ಬೇಸರವಾಗುತ್ತಿದೇರೀ.
ಮನಸ್ಸಿಗೆ ಸ್ವಲ್ಪವೂ ಸಮಾಧಾನವಿಲ್ಲ. ನಮ್ಮ ಸ್ಕೂಲಿನ ಸುದ್ದಿ ಬರೆ ಎಂದು ಕೇಳಿದೀರಿ.
ಹೇಳಿಕೊಳ್ಳುವಂಥ ಅ್ಯಕ್ಷಿವ್ದಿಟೀಜ್‌ ಇಲ್ಲಿ ಏನೂ ನಡೆಯುವುದಿಲ್ಲ. ಈ ಸ್ಕೂಲೇ ಅಷ್ಟು
ಸರಿಯಾಗಿಲ್ಲ. ...ಅಂದಹಾಗೆ ಇಲ್ಲಿ ಮಿಸೆಸ್‌ ವರ್ಮಾ ಅಂತ ಒಬ್ಬ ಟೀಚರಿದ್ದಾಳೆ.
ಅವಳಷ್ಟು ಕೆಟ್ಟ ಹೆಂಗಸನ್ನು ನಾನು ಎಂದೂ ಎಲ್ಲಿಯೂ ನೋಡಿಯೇ ಇಲ್ಲ....
ನನಗೆಷ್ಟು ಬೇಸರವಾಗಿದೆ ಆಂದರೆ ನೀವು ಹೇಳಿದ ಹಾಗೆ ರಜೆ ತಗೊಂಡು ತಿರುಗಿ
ಬಂದುಬಿಡಲೇ ಅಂತ ವಿಚಾರಿಸುತ್ತಿದ್ದೇನೆ. ಈ ಊರೂ ಛಲೋ ಇಲ್ಲ. ನಾವಿಬ್ಬರೂ
ನಮ್ಮ ಟ್ರಾನ್ಸ್‌ಫರ್‌ ಕ್ಯಾನ್ಸಲ್‌ ಮಾಡಿಸಿಕೊಂಡು ಬೇರೆ ಊರಿಗೆ
ಮಾಡಿಸಿಕೊಳ್ಳುವುದು ಆದೀತೆ ?..."

ಅಂದು ಸ್ಕೂಲಿಗೆ ಲೇಟಾಯಿತೆಂದು ಅವಳು ಗಡಿಬಿಡಿಯಿಂದ ನಡೆದುಕೊಂಡು
ಹೊರಟಾಗ ಇದ್ದಕ್ಕಿದ್ದಂತೆ ಮಳೆ ಸುರುವಾಯಿತು. ಕೊಡೆ ಏರಿಸಿಕೊಂಡು ಸೀರೆ
ಹೊಲಸಾಗದಂತೆ ಎತ್ತಿ ಹಿಡಿದುಕೊಂಡು ಆಕೆ ಸ್ಕೂಲಿನ ಗೇಟಿನಲ್ಲಿ ಕಾಲಿಡುತ್ತಿರುವಂತೆ
ಭರ್‍ರೆಂದು ಕಾರೊಂದು ಅವಳಿಗೆ ತೀರ ಸನಿಹದಲ್ಲೇ ಅವಳ ಸೀರೆಗೆ ರಾಡಿನೀರು
ಸಿಡಿಸುತ್ತ,. ಹಾಯ್ದು ಹೋಗಿ ಸ್ಟಾಫ್‌ರೂಮಿನ ಎದುರಿಗೆ ನಿಂತಿತು. ಸುಂದರವಾದ
ನೀಲಿಬಣ್ಣದ ಹೊಸ ಮರ್ಸಿಡಿಸ್‌. ಡ್ರೈವರ್‌ ಸೀಟಿನಲ್ಲಿ ಕೂತವನು
ಆಜಾನುಬಾಹುವಾದ ಬೀಟಲು ಕೂದಲಿನ ಆಕರ್ಷಕ ವ್ಯಕ್ತಿ. ಕಾರು ನಿಲ್ಲಿಸಿದೊಡನೆ
ತಟ್ಟನೆ ಇಳಿದುಬಂದು ಎದುರುಗಡೆಯ ಸೀಟಿನ ಮಗ್ಗುಲ ಬಾಗಿಲನ್ನು ಬಗ್ಗಿ ತೆರೆದು
ಆತ ನಿಂತ ಭಂಗಿಯನ್ನೆ ನೋಡುತ್ತಿದ್ದ ರಜನಿಗೆ ಆಶ್ಚರ್ಯವಾದುದು ಕಾರಿನಿಂದ
ಡೌಲಾಗಿ ಇಳಿಯುತ್ತಿದ್ದ ಮಿಸೆಸ್‌ ವರ್ಮಾನನ್ನು ಕಂಡಾಗ.

ಯಾರಿರಬಹುದು ಆತ ? ಆಕೆಯ ಗಂಡ? ಆಗಿರಲಾರ. ಇಲ್ಲ, ಆಗಿರಲಿಕ್ಕೆ
ಶಕ್ಯವೇ ಇಲ್ಲ....