“ಏನು ವರ್ಮಾ ಮ್ಯಾಡಮ್ ಪಿಂಕುಪಿಂಕಾಗಿ ಬಂದುಬಿಟ್ಟಿದ್ದೀರಿ, ಏನು
ಸಮಾಚಾರ ?"
“ಬಂದಿರಾ ವರ್ಮಾ ಬಾಯಿಯವರೆ, ಈ ರಿಪೋರ್ಟ್ಸ್ಸ್ ಬರೆಯೋ ಕೆಲ್ಸ ಹಾಗೇ
ಉಳ್ಕೊಂಡಿದೆ. ನೀವು ಬಂದನಂತರವೇ ಫೈನಲೈಜ್ ಮಾಡೋದು ಅಂದ್ರು
ಪ್ರಿನ್ಸಿಪಾಲ್ರು. ಸ್ವಲ್ಪ ಗೈಡ್ ಮಾಡ್ರಿ.”
“ಸ್ಟಾಫ್ ರೂಮೆಲ್ಲಾ ಜೀವ ಕಳಕೊಂಡ ಹಾಗಾಗಿತ್ತು ನೀವಿಲ್ಲದೇ. ಇಡೀ
ಸ್ಕೂಲೇ ಪ್ಯಾರಲೈಜ್ ಆದಹಾಗಿತ್ತು."
ಹೀಗೇ....
ಅಂದು ಸ್ಕೂಲು ಬಿಟ್ಟು ರಜನಿ ಮನೆಗೆ ಹೊರಟಾಗ ಸ್ಕೂಲಿನ
ಕಾಂಪೌಂಡಿನಾಚೆ ನೀಲಿ ಮರ್ಸಿಡಿಸ್ ಕಾಯುತ್ತಿದ್ದುದು ಕಾಣಿಸಿತು.
ಅದೇ ತಿಂಗಳು ಇನ್‌ಸ್ಪೆಕ್ಕನ್ ಇತ್ತು. ಬರಲಿರುವ ಇನ್‌ಸ್ಪೆಕ್ಟರ್‌ರ ಹೆಸರು
ಕೇಳಿದಾಗ ರಜನಿಗೆ ಹಾಯೆನಿಸಿತು. ಅವಳಿಗೆ ಸಾಕಷ್ಟು ಪರಿಚಯವಿದ್ದ, ಅವಳಿಂದ
ಸಾಕಷ್ಟು ಪ್ರಭಾವಿತರಾಗಿದ್ದ ಇನ್‌ಸ್ಪೆಕ್ಟರ್. ಎರಡು ಮೂರು ಸಲ ಅವರ
ಭೆಟ್ಟಿಯಾಗಿತ್ತು. ರಜನಿಯ ಕ್ಲಾಸಿನ ಹುಡುಗರನ್ನು, ಅವಳ ಕಲಿಸುವಿಕೆಯ
ವಿಧಾನಗಳನ್ನು ಅವರು ಬಹಳ ಶಿಫಾರಸ್ಸು ಮಾಡಿದ್ದರು. ಬರಲಿ, ಈಗಲಾದರೂ
ತನ್ನ ಮಹತ್ವ ಉಳಿದವರಿಗೆ ಗೊತ್ತಾದೀತು. ಮತ್ತು ಯಾರಿಗೆ ಗೊತ್ತು, ಗಾಳಿ ಬೀಸುವ
ದಿಕ್ಕು ಬದಲಾದರೂ ಆದೀತು.
ರಜನಿ ಆಸ್ಥೆಯಿಂದ ಇನ್‌ಸ್ಪೆಕ್ಟನ್‌ಗಾಗಿ ಕಾಯ್ದಳು. ತನ್ನ ತರಗತಿಯ
ಹುಡುಗರನ್ನು ಶ್ರಮವಹಿಸಿ ತಯಾರು ಮಾಡಿದಳು. ಕ್ಲಾಸ್‌ರೂಮನ್ನು ಸ್ವತಃ ನಿಂತು
ಬಗೆಬಗೆಯಾಗಿ ಶೃಂಗರಿಸಿದಳು. ಇನ್‌ಸ್ಪೆಕ್ಷನ್ ದಿನ ತನ್ನ ಮದುವೆಯ ರಿಸೆಪ್ಶನ್‌ಗೆ
ಕೊಂಡಿದ್ದ ಸೀರೆಯನ್ನುಟ್ಟಳು. ಆದರೆ ಕಾರಿನಿಂದಿಳಿಯುತ್ತಿದ್ದಂತೆ ಇನ್‌ಸ್ಪೆಕ್ಟರ್
ಸಾಹೇಬರು ರಜನಿಯನ್ನು ಹೋಗಲಿ, ಕೈಮುಗಿದು ಹಲ್ಕಿರಿಯುತ್ತ ನಿಂತಿದ್ದವ
ಪ್ರಿನ್ಸಿಪಾಲರನ್ನೂ ನೋಡದೆ ಸೀದಾ “ಹಲೋ, ಮಿಸೆಸ್ ವರ್ಮಾ" ಅಂತ ಅವಳ
ಕಡೆಗೇ ಹೆಜ್ಜೆ ಹಾಕಿ, ಕ್ಯಾಮರಾದೆದುರು ನಿಂತ ಹಾಗೆ ಸ್ವರ್ಗೀಯ ಸ್ಮಿತ ಬೀರುತ್ತಿದ್ದ
ಅವಳ ಕೈಕುಲುಕಿ, ಕೈಹಿಡಿದುಕೊಂಡೇ ಮೇಲೆ ನಡೆದರು.
ಅವರು ಬಂದಿದ್ದು ಸ್ಕೂಲಿನ ಇನ್‌ಸ್ಪೆಕ್ಕನ್‌ಗೆಂದೇ ಆದರೂ ಹಾಗೆ
ಕ್ಲಾಸುಕ್ಲಾಸಿಗೆ ಹೋಗಿ ತನಿಖೆ ಮಾಡದೆ ಇಡೀ ದಿನ ವರ್ಮಾಳೊಂದಿಗೆ ಮಾತಾಡುತ್ತ
ಪ್ರಿನ್ಸಿಪಾಲರ ರೂಮಿನಲ್ಲೇ ಕಳೆದರು. ಸ್ಕೂಲಿನ ಬಗ್ಗೆ ಅವರು ಬಹಳ ಒಳ್ಳೆಯ