ಪುಟ:ನಡೆದದ್ದೇ ದಾರಿ.pdf/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನಷ್ಟು ಕತೆಗಳು/ಸಮಾಧಾನ

೫೦೩

ರಿಪೋರ್ಟ್ ಬರೆದರೆಂದೂ ಎಲ್ಲ ವರ್ಮಾ ಮ್ಯಾಡಮ್‍ನ ಪ್ರಭಾವವೆಂದೂ
ಸ್ಟಾಫ್‍ರೂಮಿನಲ್ಲಿ ಗುಜುಗುಜು. ಸಂಜೆ ಸ್ಕೂಲು ಬಿಡುವ ಹೋತ್ತಿಗೆ ವರ್ಮಾಳನ್ನು
ಕರೆದೊಯ್ಯಲು ಬಂದ ನೀಲಿ ಮರ್ಸಿಡಿಸ್‍ನಲ್ಲೇ ಇನ್‍ಸ್ಪೆಕ್ಟರೂ ಭರ್ರ್....

***


ಆ ರಾತ್ರಿ ರಜನಿ ಗಂಡನಿಗೆ ಬರೆದಳು:"ನನಗಿನ್ನು ಇಲ್ಲಿ ಇರಲು ಆಗುವುದಿಲ್ಲ.
ಇಲ್ಲಿ ಬಂದಾಗಿನಿಂದ ನನಗೆ ಮೈಯಲ್ಲಿ ಒಂದು ದಿನವೂ ನೆಟ್ಟಗಿಲ್ಲ.ಸದಾ ತಲೆನೋವು,
ಸುಸ್ತು,ಬೇಸರ.ನಮ್ಮ ಸ್ಕೂಲಿನ ಜನ ಬಹಳ ಇಮ್ಮೋರಲ್‍ ಆಗಿದ್ದಾರೆ.ಸ್ಕೂಲಿಗೆ
ಸ್ವಲ್ಪವೂ ಒಳ್ಳೆಯ ಹೆಸರಲ್ಲಿ.ನಾನು ಮುಂದಿನ ವಾರದಿಂದ ರಜೆ ಹಾಕುತ್ತೇನೆ.ನಿಮ್ಮ
ಆರ್ಡರ್‌ ಬರುವುದು ಇನ್ನೂ ಎಷ್ಟು ದಿನವೋ ಏನೋ.ನಾನು ಬಂದುಬಿಡುತ್ತೇನೆ.
ನನಗೇಕೋ ನೌಕರಿಯೇ ಬೇಸರವಾಗಿದೆ.ನಿಮ್ಮ ಬಹಳ ದಿನಗಳ ಇಚ್ಛೆಯಂತೆ ಇನ್ನು
ನಾನು ನೌಕರಿಗೆ ರಾಜೀನಾಮೆ ಕೊಟ್ಟುಬಿಟ್ಟು ಮನೆ ನೋಡಿಕೊಂಡಿರುತ್ತೇನೆ.ಒಟ್ಟು
ನನ್ನ ಮನಸ್ಸಿನ ಸ್ವಾಸ್ಥ್ಯವೇ ತಪ್ಪಿಹೋಗಿದೇರೀ.ಎಂದೂ ಹೀಗಾಗಿರಲಿಲ್ಲ...."

***


ನಾಲ್ಕು ದಿನಗಳ ನಂತರ ಒಮ್ಮೆ ಅದೇ ಬೇಸರದಲ್ಲೇ ರಜನಿ ಹುಡುಗರ
ಟ್ಯುಟೋರಿಯಲ್ಸ್ ತಿದ್ದುತ್ತ ಸ್ಟಾಫ್‍ ರೂಮಿನಲ್ಲಿ ಕೂತಿದ್ದಳು.ಎದುರಿಗೇ
ಪೇಪರೋದುತ್ತ ಕೂತಿದ್ದ ಮಿಸೆಸ್ ವರ್ಮಾಳ ಕಡೆ ಬೇಕೆಂದೇ ನೋಡದೆ,ಆಚೆಯ
ಟೇಬಲಿಗೆ ಕೂತಿದ್ದ ಅಲಮೇಲಮ್ಮ ಮ್ಯಾಡಂ ಜೊತೆ ಮಾತಾಡುತ್ತ ಕೆಲಸ
ನಡೆಸಿದ್ದಳು.ಅವಳಿಗೇಕೋ ಇತ್ತೀಚೆ ವರ್ಮಾ ಉಸಿರಾಡಿಸಿದ ಗಾಳಿಯೇ
ಉಸಿರುಗಟ್ಟಿಸುತ್ತಿತ್ತು.
"ಬಾಯೀ ಸಾಬ,ರಾವ್‍ಸಹೇಬ್ರ ಫೋನು ಬಂದೈತೆ."ಪ್ಯೂನ್‍ನ ಧ್ವನಿ ಕೇಳಿ
ಮೂವರು ಒಮ್ಮೆಲೆ ತಲೆಯೆತ್ತಿ ನೋಡಿದರು.ಯಾರಿಗೆ ಫೋನು ಅಂತ ರಜನಿ
ಕೇಳಬೇಕೆಂದುಕೊಳ್ಳುವಷ್ಟರಲ್ಲಿ ವರ್ಮಾ ತಟ್ಟನೆ ಎದ್ದು ಓಡುತ್ತಲೆ ಆತನನ್ನು ಹಿಂದೆ
ಹಾಕಿ ಹೊರಗೆ ಹೋದಳು.
ಒಂದು ಕ್ಷಣದ ಮೌನದ ನಂತರ ತಡೆಯದೆ ರಜನಿ ಕೇಳಿದಳು,"ಅಲ್ರೀ
ಅಲಮೇಲಮ್ಮ,ಈ ರಾವ್‍ ಸಾಹೇಬ ಯಾರು?"ಓದುತ್ತಿದ್ದ ಪುಸ್ತಕವನ್ನು
ಮೂಚ್ಚಿಟ್ಟುಬಿಟ್ಟು ರಾಗವಾಗಿ ಅಕಳಿಸತ್ತ ಅಲಮೇಲಮ್ಮ ಹೇಳಿದಳು:"ಅದೇ
ವರ್ಮಾ ಬಾಯಿನ್ನ ದಿನಾ ಕಾರ್ನಲ್ಲಿ ಕಳಿಸಲು,ಕರಕೊಂಡು ಹೋಗಲು ಬರ್ತಾರಲ್ಲ.
ಆ ಉದ್ದನೆಯ ಹ್ಯಾಂಡ್‍ಸಮ್‌ ಮನುಷ್ಯ,ನೀವು ನೋಡಿಲ್ಲವೇ?"