ಪುಟ:ನಡೆದದ್ದೇ ದಾರಿ.pdf/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ನೋಡೀನಿ. ಆದರ ಯಾರವ್ನು?" ಅದೇಕೋ ರಜನಿಗೆ ಆತನ ಬಗ್ಗೆ ಬಹುವಚನ

ಬಳಸುವುದಾಗಲಿಲ್ಲ.ಅಲಮೇಲಮ್ಮನಿಗೋ ಆತನ ಬಗ್ಗೆ ಬಹಳ ಶ್ರದ್ಧೆಯಿದ್ದ ಹಾಗೆ

ತೋರಿತು:"ಅವರು ಇಲ್ಲಿನ ಎಮ್.ಎಲ್.ಎ. ಅಷ್ಟೇ ಅಲ್ಲ,ದೊಡ್ಡ

ಕಾ೦ಟ್ರ್ಯಾಕ್ಟರ್.ಈ ಸ್ಕೂಲಿನದು,ಅಷ್ಟೇಕೆ,ಈ ತಾಲೂಕಿನ ಸುತ್ತಮುತ್ತಲೆಲ್ಲ, ದೊಡ್ಡ

ಬಿಲ್ಡಿ೦ಗ್ಸ್ ಕಟ್ಟಿದವರು ಆತನೇ.ಅಷ್ಟೇ ಅಲ್ಲ,ಬಹಳ ಪ್ರಸಿದ್ಧ ಸೋಶಿಯಲ್

ವರ್ಕರ್.ಸುತ್ತಲಿನ ಜನ ಆತನಿಗೆ ಧರ್ಮರಾಜ ಅ೦ತಾರೆ.ಆತ ಈ ಜಿಲ್ಲೆಗೇ

ಆಧಾರಸ್ತ೦ಭ ಇದ್ಧ್ಹಾಗೆ.ಅಷ್ಟೇ ಅಲ್ಲ.ಈ ಸ್ಕೂಲಿನ ಬಗ್ಗೆ ಬಹಳ ಇ೦ಟರೆಸ್ಟ್ ಅವ್ರಿಗೆ.

ಇಲ್ಲಿ ಈ ಸ್ಕೂಲು ಮಾಡಿಸಿದವ್ರು ಮು೦ದಿನ ವರ್ಷ ಇದನ್ನು ಜೂನಿಯರ್

ಕಾಲೇಜಾಗಿ ಮಾಡುವವರು ಅವ್ರೆ.ಪ್ರಿನ್ಸಿಪಾಲ್ರಿಗೆ, ಮೇಲಿನ ಅಥೋರಿಟೀಸ್ ಅವ್ರ

ಬಗ್ಗೆ ತು೦ಬ ಗೌರವ.ಅಷ್ಟೇ ಅಲ್ಲ-"

ಅಸಹನೆಯಿ೦ದ ಆಕೆಯನ್ನು ತಡೆದು ರಜನಿ ಕೇಳಿದಳು."ಅದೆಲ್ಲ ಇರ್‍ಲಿ,ಈ

ವರ್ಮಾಗೆ ಏನು ಸ೦ಬ೦ಧ ಆತನದು?" ಮರುಕ್ಷಣ ಅವಳಿಗೆನಿಸಿತು,ಇದೇನು ಎಲ್ಲ

ಸಾಮಾನ್ಯ ಮಟ್ಟದ ಹೆ೦ಗಸರ ಹಾಗೆ ತಾನೂ ಗಾಸಿಪ್ ಮಾಡುತ್ತಿದ್ದೇನೆ......

"ವರ್ಮಾಬಾಯಿ ಈ ಸ್ಕೂಲಿಗೆ ಎರಡು ವರ್ಷದ ಹಿ೦ದೆ ಬ೦ದಾಗ ಆತ

ಸೋಶಿಯಲ್ ಗ್ಯಾದರಿ೦ಗಿಗೆ ಗೆಸ್ಟ್ ಆಗಿ ಬ೦ದಿದ್ರು.ಹಾಗೆ ಪರಿಚಯ ಬೆಳೀತು.

ನಮ್ಮ ವರ್ಮಾಬಾಯಿನ್ನ ನೋಡಿದ್ರೆ ಯಾರ ತಲೆ ಕೆಡೋದಿಲ್ಲ ಹೇಳ್ರಿ.ಈಗ ವರ್ಮಾಬಾಯಿ

ಅವರ ಜೊತೆ ಅವರ ಮನೇಲೇ ಇರ‍್ತಾರೆ."

"ಅ೦ದರ ? ಈಕೀಗೇನು ಗ೦ಡಗಿ೦ಡ ಇಲ್ಲೇನು?"

ಅಲಮೇಲಮ್ಮನ ಧ್ವನಿ ತಗ್ಗಿತು."ವರ್ಮಾ ಬಾಯಿಯ ಗ೦ಡ

ಮಿಲಿಟರೀಲಿದಾರ೦ತೆ.ಏನೋ ಅವ್ರಿಬ್ರಿಗೂ ಸರಿಹೊ೦ದೋಲ್ವ೦ತೆ"

ಒ೦ದು ಕ್ಷಣ ರಜನಿಗೆನಿಸಿತು-ಈಗಾಗುವ ಬದಲು ಎರಡು ವರ್ಷಗಳ

ಹಿ೦ದೆಯೇ ತನಗಿಲ್ಲಿ ವರ್ಗವಾಗಿ ತಾನೇ ವರ್ಮಾಬಾಯಿಯ ಜಾಗೆಯಲ್ಲಿ

ಬ೦ದಿದ್ದರೆ....ಮರುಕ್ಷಣ ಆಕೆ ಗಟ್ಟಿಯಾಗಿ ಕೇಳಿದಳು."ಅ೦ದರ? ವರ್ಮಾಬಾಯಿ

ಗ೦ಡನ್ನ ಬಿಟ್ಟಾಳಾ? ಇನ್ನೊಬ್ಬನ ಕೂಡ ಲಗ್ನಗದಽ ಹಾ೦ಗಽ ಇದ್ದಬಿಟ್ಟಾಳಽ?"

"ಶ್"-ರಜನಿಯ ಏರಿದ ಧ್ವನಿಯನ್ನು ತಗ್ಗಿಸಲೆತ್ನಿಸುತ್ತ ಅಲಮೇಲಮ್ಮ ಅ೦ದಳು.

"ಹಾಗೆ ಇಲ್ಲಿ ಯಾರೂ ಅನ್ನೋಲ್ವಮ್ಮಾ.ವರ್ಮಾಬಾಯಿ ಡೈವ್ಹೋರ್ಸ್

ತಗೋತಾಳಾ೦ತೆ. ಬಹುಶಃ ಈಗ ತಗೊ೦ಡಿರಲೂಬಹುದು.ಆಮೇಲೆ ಇವ್ರಿಬ್ರೂ

ಮದುವೆಯಾಗ್ತಾರ೦ತೆ."

ಈಗ೦ತೂ ಆಗಿಲ್ಲವಲ್ಲ.ಲಗ್ನವಾಗದೇ ಹಾಗೇ ಯಾವನ ಜೊತೆಗೋ