ಈ ಪುಟವನ್ನು ಪರಿಶೀಲಿಸಲಾಗಿದೆ
ಇನ್ನಷ್ಟು ಕತೆಗಳು / ಸಮಾಧಾನ
೫೦೫
ಇದ್ದಾಳಲ್ಲ. ಈಕೆ ಎಂಥ ಹೆಂಗಸು ಬಿದ್ದ ಹೆಂಗಸು... ಛೀ ಛೀ...
ಆ ರಾತ್ರಿ ರಜನಿ ಗಂಡನಿಗೆ ಬರೆದಳು : “ನಾನೀಗ ಅಗದೀ ಆರಾಮ ಇದ್ದೀನ್ರೀ.
ನೀವು ಏನೂ ಕಾಳಜಿ ಮಾಡಬಾರದು. ಹೊಸದಾಗಿ ಬಂದಾಗ ಏನೋ ಬೇಸರವೆನಿಸಿತ್ತು.
ಈಗ ಅಗದೀ ಫ್ರೆಶ್ ಆಗಿರುವೆ. ಈ ಊರು, ಇಲ್ಲಿನ ಹವೆ, ಜನ, ನಮ್ಮ ಸ್ಕೂಲು
-ಎಲ್ಲ ನನಗೆ ತುಂಬ ಹಿಡಿಸಿವೆ. ನನಗಿಲ್ಲಿ ಯಾವ ತರದ ಅನಾನುಕೂಲತೆಯೂ ಇಲ್ಲ.
ಇಷ್ಟು ಒಳ್ಳೆಯ ನೌಕರಿ ಬಿಡುವ ವಿಚಾರ ಮಾಡುವುದೇ ಮೂರ್ಖತನ. ನಿಮ್ಮ
ಟ್ರಾನ್ಸ್‌ಫರ್ ಆರ್ಡರ್ ಬೇಕಾದಾಗ ಬರಲಿ. ನೀವು ನಿಧಾನವಾಗಿ ಬರ್ರಿ. ನಾನು ತೀರ-
ತೀರ ಆರಾಮಿದ್ದೇನೆ. ಏಕ್‌ದಂ ಖುಶ್ ಇದ್ದೇನೆ.
ಅಂದಹಾಗೆ ನಿಮಗೆ ಮಿಸೆಸ್ ವರ್ಮಾ ಅನ್ನುವ ಕೆಟ್ಟ ಹೆಂಗಸಿನ ಬಗ್ಗೆ
ಬರೆದಿದ್ದೆನಲ್ಲವೆ ? ಆಕೆ..."