ಆಕೆ ಶ್ರೀಮತಿ ಯಶಸ್ವಿನಿ ದೇಸಾಯಿ.
ರಾಮನಗರದ ಹೊಸ ಚೀಫ್ ಜ್ಯುಡೀಶಿಯಲ್ ಮನ್ಯಾಜಿಸ್ಟ್ರೇಟ್. ಬಹಳ
ಸ್ಟ್ರಿಕ್ಟ್, ಬಹಳ ಸಿನ್ಸಿಯರ್, ಬಹಳ ದಿಟ್ಟೆಯಾದ ಹೆಣ್ಣು ಮಗಳು ; ಜಡ್ಜ್ ಅಂದರೆ
ಹೀಗಿರಬೇಕು ; ಯಾವ ಕೇಸನ್ನೂ ಸುಮ್ಮಸುಮ್ಮನೆ ಪೆಂಡಿಂಗ್ ಇಡುವುದಿಲ್ಲ,
ಅಡ್ಜರ್ನ್ ಮಾಡುವುದಿಲ್ಲ. ಯಾವ ವಕೀಲರಿಗೂ ನ್ಯಾಯದೊಂದಿಗೆ ಆಟವಾಡಲು
ಬಿಡುವುದಿಲ್ಲ. ನ್ಯಾಯಾಲಯವೆಂದರೆ ನಿಜವಾಗಿ ನ್ಯಾಯದೇವತೆಯ ಮಂದಿರ
ಅನಿಸುವಂತೆ ವಾತಾವರಣ ನಿರ್ಮಿಸಿದ್ದಾಳೆ ; ಆಕೆ ಇಲ್ಲಿಗೆ ಬಂದಾಗಿನಿಂದ ಅಪರಾಧಿಗಳ
ಸೊಲ್ಲು ಬಹಳ ಮಟ್ಟಿಗೆ ಅಡಗಿದೆ ; ಜನರಿಗೆ ಕೋರ್ಟು-ಕಚೇರಿ ಬಗ್ಗೆ ಸಾಮಾನ್ಯವಾಗಿ
ಇರುವ ಕೆಟ್ಟ ಭಾವನೆ ಗಣನೀಯವಾಗಿ ಕಡಿಮೆಯಾಗಿದೆ ; ಸತ್ಯ-ನ್ಯಾಯಗಳಲ್ಲಿ ನಂಬಿಕೆ
ಬರತೊಡಗಿದೆ ; ಹೀಗಂತ ರಾಮನಗರದ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಶ್ರೀಮತಿ ಯಶಸ್ವಿನಿ ದೇಸಾಯಿ, ಸಿ. ಜೆ. ಎಮ್.
ಆಕೆಯದು ಮೊದಲಿನಿಂದಲೂ ಯಶಸ್ಸಿನ ದಾರಿ. ಪ್ರತಿಭಾವಂತ
ವಿದ್ಯಾರ್ಥಿನಿಯಾಗಿದ್ದ ಆಕೆ ಸ್ನಾತಕೋತ್ತರ ಪದವಿಯೊಂದಿಗೆ ಬಂಗಾರದ
ಪದಕಗಳನ್ನು ಪಡೆದವಳು. ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ನೇರವಾಗಿ ಮ್ಯಾಜಿಸ್ಟ್ರೇಟ್
ಹುದ್ದೆಗೆ ಆಯ್ಕೆಯಾದವಳು. ಕಾಲೇಜು ದಿನಗಳಿಂದಲೂ ಮಹಿಳಾ ವಿಮೋಚನೆಯ
ಸಲುವಾಗಿ ಹೋರಾಡುತ್ತ ಬಂದವಳು. ಸತತವಾಗಿ ಅನ್ಯಾಯ, ಶೋಷಣೆ, ದಬ್ಬಾಳಿಕೆಗೆ
ಒಳಗಾಗುತ್ತಿರುವ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಲೆಂದೇ ಕಾನೂನು ಓದಿ
ನ್ಯಾಯಾಧೀಶಳಾದವಳು ; ತನ್ನ ಪರಿಮಿತಿಯಲ್ಲಿ ಬರುವ ಮಹಿಳೆಯರಿಗೆ
ಸಂಬಂಧಿಸಿದ ಯಾವುದೇ ಕೇಸು ಇರಲ್ಲಿ ಸಂಬಂಧಿಸಿದ ವಕೀಲರಿಗಿಂತ ಹೆಚ್ಚಾಗಿ ಸ್ವತಃ
ತಾನೇ ಕೇಸು ಅಭ್ಯಸಿಸಿ ಶೋಷಿತ ಮಹಿಳೆಗೆ ಪೂರ್ಣ ನ್ಯಾಯ ಸಿಗುವಂತೆ ತೀರ್ಪು
ನೀಡುತ್ತಾಳೆ. ಆಕೆಯ ಕೋರ್ಟಿನಲ್ಲಿ ಯಾವ ವಕೀಲನೂ ಮಹಿಳಾ ಕಕ್ಷಿದಾರರ ವಿರುದ್ಧ
ಕೇಸು ಹಿಡಿಯಲು ಸಾಮಾನ್ಯವಾಗಿ ಮುಂದೆ ಬರುವುದಿಲ್ಲ. ತನ್ನ ಸರ್ವ್ಹೀಸಿನ
ಹದಿನಾರು ವರ್ಷಗಳಲ್ಲಿ ಆಕೆ ಸಾವಿರಾರು ವಂಚಿತ ಮಹಿಳೆಯರಿಗೆ ಅವರ ಪಾಲಿನ