ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು/ಪ್ರಶ್ನೆ
೪೫

ಸರ್ವಸ್ವವನ್ನೂ ಕಸಿದುಕೊಂಡು, ನಿನ್ನ ಎದೆಯ ಉರಿಯಲ್ಲಿ ಅದನ್ನು ಸುಟ್ಟು, ಆ
ಬೂದಿಯಲ್ಲಿ ಹೇಳಹೆಸರಿಲ್ಲದಂತೆ ಗಾಳಿಗೆ ತೂರಿ, ಈಗ ನೀನು ಹೇಳುತ್ತಿರುವಿ-
"ಕ್ಷಮಿಸು ಶಶೀ, ನಿನ್ನ ಸಹವಾಸದಿಂದ ನನಗೆ ದೊರೆತಿರುವ ತಣ್ಪನ್ನು ನಾನು
ಅಲ್ಲಗಳೆಯುವದಿಲ್ಲ; ಆದರೆ ಅದಕ್ಕೆ ನನ್ನಲ್ಲಿ ಭೂತಕಾಲದ ಬೆಂಕಿಯನ್ನು ಆರಿಸುವ
ಸಮರ್ಥ್ಯವಿಲ್ಲ" ಬೆಂಕಿ_ಆರಲಾರದ ಬೆಂಕಿ....ನಿನ್ನಲ್ಲಿ ನಿನ್ನ ಅವಳು
ಹೋತ್ತಿಸಿಬಿಟ್ಟು ಹೋದ ಬೆಂಕಿ....ನನ್ನನ್ನೇಕೆ ಎಳೆದುತಂದು ಈ ಬೆಂಕಿಯಲ್ಲಿ
ಅರ್ಧಮರ್ಧ ಬೇಯಿಸಬೇಕಾಗಿತ್ತು? ಬಹುಶಃ ನಾನೂ ಇಂಥದೆ ಬೆಂಕಿಯನ್ನು
ನಿನ್ನಲ್ಲಿ ಹೋತ್ತಿಸಿ ಅವಳಂತೆ ದೂರವಾಗಿದ್ದರೆ ನಿನ್ನಲ್ಲಿನ ನನ್ನ ನೆನಪಿಗೆ ತುಕ್ಕು
ಹಿಡಿಯುತ್ತಿರಲಿಲ್ಲವೇನೋ! ನಿನಗೆ ತಂಪು ನೀಡಬಯಸಿದ್ದೇ ನನ್ನ ತಪ್ಪೇನು
ಹಾಗಾದರೆ? ಹೀಗೆ ಮಾಡಲು ನನ್ನನ್ನು ಪ್ರೆರೇಪಿಸಿದ ಅ ಅವ್ಯಕ್ತ ದುಷ್ಟ ಶಕ್ತಿ
ಯವುದು? ಎಲ್ಲಿದೆ?
-ಸುತ್ತಲೆಲ್ಲ ಕತ್ತಲೋ ಕತ್ತಲಾಗಿರುವಾಗ ಈ ಪ್ರಶ್ನೆಗೆ ಉತ್ತರ ಸಿಗುವುದು
ಬಹಳ ಕಷ್ಠತಮವೆಂದು ತೋರಿತು ಶಶಿಗೆ. ಬೇಗನೆ ಬೆಳಗಾದರೂ ಆಗಬಾರದೇ ಎಂದು
ಅವಳಿಗೆ ಕಸಿವಿಯಾಯಿತು. ಬೆಳಗಾದರೆ ಮಾಡಲು ಕಾದಿರುವ ಕೆಲಸಗಳು ನೂರು.
ಮೋದಲು ಮನೆಗೆ ಪತ್ರ ಬರೆಯಬೇಕು. ಅರುಣನ ತಂದೆ ಬಹಳ
ಆತುರಪಡಿಸುತ್ತಿದ್ದಾರೆಂದು ಮೋನ್ನೆಯೇ ಊರಿಗೆ ಹೋಗಿದ್ದಾಗ ತಿಳಿದುಬಂದಿತ್ತು.
ಅವರಾದರೂ ಎಷ್ಟೆಂದು ಕಾಯಬೇಕು ? ತಾನೀಗ ಒಂದು ನಿರ್ಧಾರ ಮಾಡಲೇಬೇಕು.
-ಬಹಳ ದಿನಗಳ ಹಿಂದೆಯೆ ಮಾಡಬೇಕಾಗಿದ್ದ ನಿರ್ಧಾರ. ಯಾಕೆ ಇಷ್ಟು
ತಡವಾಯಿತು..........?
ಏ No.IV, ನನ್ನ ಬಗೆಗಿನ ನಿನ್ನ ಪ್ರೀತಿ, ನಿನ್ನ ಸಾಹಿತ್ಯದಂತೆ, ಎಷ್ಟೇ
ಪ್ರಾಮಾಣಿಕವೆಂದು ನೀನು ತಿಳಿದಿದ್ದರೂ ತಳಬುಡವಿಲ್ಲದ್ದೆಂದು, ಅದರೆ ಕೊನೆ
ಶೂನ್ಯವೆಂದು, ಅದರಿಂದ ನಮ್ಮಿಬ್ಬರಿಗೂ ಹಿತವಿಲ್ಲವೆಂದು ನನಗೆ ಗೋತ್ತಿತ್ತು;
ಗೋತ್ತಿದ್ದರು ನಿನ್ನಿಂದ ದೂರ ಹೋಗುವ ನಿರ್ಧಾರ ಕೈಗೊಳ್ಳುವದು ಇಷ್ಟು ದಿನ
ನನಗೆ ಸಾಧ್ಯವಾಗಲಿಲ್ಲ. ಅಗಲುವ ಗಳಿಗೆ ಒಮ್ಮಿಲ್ಲೊಮ್ಮೆ ಬರುವುದೆಂದು ಕೂಡುವ
ಮೊದಲೇ ಗೋತ್ತಿದ್ದೂ, ಕೂಡಿದ್ದಷ್ಟು ದಿನ ಎಂದೂ ಅಗಲುವದಿಲ್ಲೆಂಬ ಭ್ರಮೇಯೇ
ಇತ್ತು. ಆದರೆ ನಿನ್ನೆ ಸಂಜೆಯ ನಿನ್ನ ವರ್ತನೆ ಕೊನೆಗೊಮ್ಮೆ ಆ ಭ್ರಮೆಯನ್ನು
ನಿರಸನಗೊಳಿಸಿತು. ನಾನು ಮುಂದೂಡತೊಡಗಿದ್ದ, ಭಯಪಟ್ಟುಕೊಂಡಿದ್ದ,
ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ ಈ ಗಳಿಗೆ ಈಗ ಭೂತದಂತೆ ಥೈ ಎಂದು ನನ್ನೆದುರು
ನಿಂದೆ...