ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ಇಲ್ಲಿಂದ ಮುಂದೆಲ್ಲಿ ? ೫೧೫

ರಿಟಾಯರ್‌ಮೆಂಟ್‌ ಈಜ್‌ ಇಂಪಾಸಿಬಲ್‌. ಆ ವಿಚಾರ ಮರೆತುಬಿಡು.

- ಮನೋಹರ ಸ್ಪಷ್ಟವಾಗಿ ಹೇಳಿದ.

ಇನ್ನೂ ಒಂದು ವಾರ ರಜೆ ಇದೆಯಲ್ಲಮ್ಮಾ, ಅದೇಕೆ ಇಷ್ಟು ಬೇಗ ತಿರುಗಿ

ಹೊರಟಿದ್ದೀ, ರಜೆ ಮುಗಿಯುವ ವರೆಗೆ ಇದ್ದರಾಗಿತ್ತು, ಅಂದರು ಯಶಸ್ವಿನಿಯ ಅತ್ತೆ.

ಇಲ್ಲ, ಕೆಲಸಗಳಿವೆ. ಕೋರ್ಟು ಸುರುವಾಗುವ ಮೊದಲೇ ಮಾಡಬೇಕಾದ

ಕೆಲಸವಿದೆ. ಮತ್ತೆ ದೀಪಾವಳಿಗೆ ಬರುತ್ತೇನೆ ಅಂತ ಹೇಳಿ ಯಶಸ್ವಿನಿ ರಾಮನಗರದ

ಬಸ್ಸು ಹತ್ತಿದಳು.

ಸೋತವರಂತೆ ಬಸ್ಸು ನಿಧಾನವಾಗಿ ಹೊರಟಿತು.