ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨೦ ನಡೆದದ್ದೇ ದಾರಿ

ಮತ್ತೆ ಸುತ್ತೆಲ್ಲ ಕಲ್ಲುಗಳು, ಇಟ್ಟಿಗೆಗಳು ಬಂದುಬಿದ್ದವು. ನನ್ನಲ್ಲಿ ಏನೋ ಒಳಗುದಿ

ಸುರುವಾಗಿತ್ತು. ಏನೋ ತಳಮಳ, ಆತಂಕ. ಹಲವಾರು ರಾತ್ರಿ ನನಗೆ ನಿದ್ರೆಯೇ

ಬರಲಿಲ್ಲ. ತುಂಬ ಬಳಲಿಕೆ, ಅಸ್ವಸ್ಥತೆ. ಅಮಾವಾಸ್ಯೆಯ ಒಂದು ರಾತ್ರಿ ನಾನು ದಣಿದು

ಒಣಗಿ ಒಂದು ಥರಾ ಎಚ್ಚರತಪ್ಪಿ ದಂತಹ ನಿದ್ರೆಗೊಳಗಾದೆ. ಏನೇನೋ ಕೆಟ್ಟ

ಕನಸುಗಳು. ಹಳವಂಡ, ಮಂಪರು. ಹೀಗೆ ಎಂಥದೋ ಕಸಿವಿಸಿ ಅನುಭವಿಸುತ್ತ ಅದೆಷ್ಟು

ಹೊತ್ತು ಕಳೆಯಿತೋ....

ಎಚ್ಚರಾಗಿ ಕಣ್ಣು ಬಿಟ್ಟಾಗ, ಅಯ್ಯೋ, ನೀನಿರಲಿಲ್ಲ. ನನ್ನ ವರುಷಗಳ ಸಂಗಾತಿ

ನೀನು ಬುಡ ಕಡಿಸಿಕೊಂಡು ಧೂಳು ತುಂಬಿದ ಮಣ್ಣಿ ನಲ್ಲಿ ಜೀವವಿಲ್ಲದೆ ಬಿದ್ದಿದ್ದೆ.

ಏನು ನಡೆಯುತ್ತಿದೆ ಎಂದು ತಿಳಿಯದೆ ದಿಗ್ಭ್ರಮೆಯಲ್ಲಿದ್ದ ನಾನು

ನೋಡುತ್ತಿದ್ದಂತೆಯೇ ನಿನ್ನ ಅವಶೇಷಗಳನ್ನು ಹೇರಿಕೊಂಡು ಬೃಹದಾಕಾರದ

ಲಾರಿಯೊಂದು ಅದೆತ್ಮಲೋ ಹೊರಟುಹೋಯಿತು.

ನಾನು ಇದ್ದಲ್ಲೇ ಕಲ್ಲಾದೆ.

ಸುತ್ತಲಿನ ಸಾವಿರ ಸದ್ದುಗಳು, ಹೊಲಸು ವಾಸನೆ, ಗದ್ದಲ ಈ ಯಾವುದೂ

ನನ್ನನ್ನು ತಟ್ಟಲಿಲ್ಲ. ನಾನು ಎಲ್ಲ ಸಂವೇದನೆಗಳನ್ನೂ ಕಳೆದುಕೊಂಡಿದ್ದೆ.

ನೀನಿಲ್ಲದಿದ್ದರೆ ನಾನೂ ಇರುವುದಿಲ್ಲ ಅಂತ ಅಂದುಕೊಂಡಿದ್ದ ಕಾಲವೂ

ಒಂದಿತ್ತು. ವಸಂತ ಹುತುವಿನ ಮುಂಜಾವುಗಳಲ್ಲಿ ಉಲಿಯುತ್ತಿದ್ದ ಕೋಗಿಲೆಗಳು,

ಸಂಜೆಯಲ್ಲಿ ಹಾಡುತ್ತಿದ್ದ ಹಕ್ಕಿಗಳು, ಮಲ್ಲಿಗೆ-ಸಂಪಿಗೆಗಳು, ಸ್ವಚ್ಛಂದವಾಗಿ ಸುತ್ತೆಲ್ಲ

ಓಡಾಡಿಕೊಂಡಿದ್ದ ಆಡುಗಳು, ಕುರಿಗಳು, ಕೋಳಿಗಳು, ಆಕಳುಗಳು, ದೂರದ

ಹನುಮಂತನ ಗುಡಿಯಿಂದ ಕೇಳಿಬರುತ್ತಿದ್ದ ಗಂಟೆಯ ನಿನಾದ, ದಪ್ಪ-ದಪ್ಪ

ಪುಸ್ತಕಗಳನ್ನೆತ್ತಿಕೊಂಡು ಗಂಭೀರ ಮುಖಭಾವದಿಂದ ಓಡಾಡುತ್ತಿದ್ದ ಶಿಕ್ಚಕರು,

ವಿದ್ಯಾರ್ಥಿಗಳು. ಈ ಎಲ್ಲ ನೋಟಗಳು ಈಗ ಕಾಣಸಿಗುವುದಿಲ್ಲ.

ನೀನೇ ಇಲ್ಲದ ಮೇಲೆ ಇಲ್ಲಿ ಯಾವ ಕೋಗಿಲೆಯೂ, ಹಕ್ಕಿಯೂ ಬರುವುದಿಲ್ಲ.

ಇಲ್ಲಿ ಬರೀ ಹಂದಿಗಳು ತುಂಬಿವೆ. ಎಲ್ಲ ಕಡೆ ಕಾಂಕ್ರೀಟು ಕಟ್ಟಡಗಳೆದ್ದು ದರಿಂದ ಯಾವ

ಹೂಗಿಡಗಳೂ ಇಲ್ಲಿ ಅರಳುವುದಿಲ್ಲ. ಕೋಳಿಗಳನ್ನಂತೂ ಪೆಟ್ಟಿಗೆಗಳಲ್ಲಿ ಕೂಡಿ

ಹಾಕಿರುತ್ತಾರೆ, ನಾಳೆ ಬರಲಿರುವ ಸಾವು ನೆನೆದು ಅವು ಆಕ್ರಂದಿಸುತ್ತಲೇ ಇರುತ್ತವೆ.

ಯಾರ ಕೈಯಲ್ಲೂ ಪುಸ್ತಕಗಳೇ ಇರುವುದಿಲ್ಲವಾದ್ದ ರಿಂದ ಯಾರು ಯಾವ ಧಂಧೆ

ಮಾಡುತ್ತಾರೋ ತಿಳಿಯುವುದೇ ಇಲ್ಲ. ಯಾರು ಶಿಕ್ಬಕರೋ-ವಿದ್ಯಾರ್ಥಿಗಳೋ,