ಪುಟ:ನಡೆದದ್ದೇ ದಾರಿ.pdf/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨೪ ನಡೆದದ್ದೇ ದಾರಿ

ಕುತೂಹಲಕಾರಿಯಾಗಿದೆ. ನಾಯಿಕೆಯನ್ನು ಬರೇ ಟೀಕಿಸಲು ಹೊರಟಂತಿದ್ದ ಕತೆ

ಮುಂದೆ ಹೋದಂತೆ ಸಹಾನುಭೂತಿಯಿಂದ ಮಿಡಿಯುವದನ್ನು ನೋಡಿದರೆ, ಕತೆ

ಬರೆಯುವದೇ ಒಂದು ಸತ್ಯಶೋಧನೆಯ ಸಾಧನವಾಗಬಹುದು ಎಂಬ ಮಾತನ್ನು

ಮನಗಾಣಬಹುದು.

'ಪ್ರಶ್ನೆ'ಯಲ್ಲಿ ಕತೆ ತನ್ನ ಜೀವವನ್ನೂ, ತನ್ನ ದೇಹವನ್ನೂ ತಾನೇ ಹುಡುಕುತ್ತ

ನಡೆದಂತೆ ತೋರುತ್ತದೆ. ಕತೆಯ “ದೇಹದ ದೃಷ್ಟಿಯಿಂದ ಶಶಿಯ ಮನಸ್ಸಿನ

ತೀಕ್ಷ್ಣ ಉದ್ವೇಗ, ಭಾಷೆ, ಲಯಗಳ ಮುಖಾಂತರ ಚನ್ನಾಗಿ

ಅಭಿವ್ಯಕ್ತಗೊಂಡಿದೆಯೆನ್ನಬಹುದು. ಆದರೆ ಕತೆಯಲ್ಲಿ ಬರುವ ಅನುಭವದ ಮೂಲ

"ಆತ್ಮ" ಮಾತ್ರ ಪ್ರತ್ಯಕ್ಷ ರೂಪು ತೆಗೆದುಕೊಳ್ಳಲು ಹಿಂಜರಿದಂತಿದೆ. ಹೀಗಾಗಿ ಕತೆಯಲ್ಲಿ

ಬರುವ ಪ್ರಶ್ನೆಗಳಲ್ಲಿ ಬಹಳಷ್ಟು ಕತೆಯನ್ನು ಹೆಣೆಯಲು ಸಹಾಯಕವಾಗುವ

ಯಾಂತ್ರಿಕ ಸಾಧನಗಳಾಗಿ ಪರಿಣಮಿಸಿದಂತೆ ಅಲ್ಲಲ್ಲಿ ಅನಿಸಿಬಿಡುವದು. ಇಲ್ಲಿಯ

ವಸ್ತುವಿನಲ್ಲಿ, ತಂತ್ರದಲ್ಲಿ, ಭಾಷೆಯಲ್ಲಿ ಒಂದು ವಿಶಿಷ್ಟ ನವ್ಯದೃಷ್ಟಿ ತನ್ನ

ತನ್ನತನವನ್ನು ಶೋಧಿಸಲು ಯತ್ನ ಮಾಡುತ್ತಿರುವದನ್ನು ನೋಡಿದಾಗ ಪ್ರೊ. ವೀಣಾ

ಅವರ ಕಲೆಗಾರಿಕೆ ಕಠಿಣವಾದರೂ ಅನಿವಾರ್ಯವಾದ ಬೆಳವಣಿಗೆಯ ಮಾರ್ಗವನ್ನು

ಹಿಡಿದಿದೆ ಎಂದೆನ್ನ ಬಹುದು.

“ನೆನಪು... ಬರಿ ನೆನಪು" ಈ ಸಂಕಲನದಲ್ಲಿಯ ಆತ್ಯಂತ ಯಶಸ್ವಿಯಾದ ಕತೆ.

ಸಣ್ಣಕತೆಯಲ್ಲಿ ರಬೇಕಾದ ಎಲ್ಲ ಗುಣಗಳೂ ಇಲ್ಲಿ ಒಂದು ಹೊಂದಾಣಿಕೆಯನ್ನು

ಪಡೆದಿವೆ : ಒಂದು ಕೇಂದ್ರ ನಾಟಕೀಯ ಸನ್ನಿವೇಶ ; ಅದರಿಂದ ಉಂಟಾಗುವ

ಅನಪೇಕ್ಷಿತ ಪರಿಣಾಮ : ಕೊನೆಗೆ ಕತೆ ಅನಿವಾರ್ಯವಾಗಿ, ಆದರೂ

ನಾಟ್ಯಪೂರ್ಣವಾಗಿ, ಮುಕ್ತಾಯಗೊಳ್ಳುವ ರೀತಿ -ಇವು ಈ ಕತೆಯಲ್ಲಿ ಅಚ್ಚುಕಟ್ಟಾಗಿ

ಸಾಧಿಸಲ್ಪಟ್ಟಿವೆ. ಇಷ್ಟರಲ್ಲಿಯೇ ಲಗ್ನವಾಗಲಿರುವ ನಾಯಿಕೆ ತನ್ನ ಹಳೆಯ

ನೆನಪುಗಳನ್ನು ತನ್ನ ಬೆಳೆದ ಮನಸ್ಸಿನ ಮುಖಾಂತರ ಅರಗಿಸಿಕೊಂಡು ಒಂದು ಹೊಸ

ಸಂಕೀರ್ಣವಾದ, ಸ್ತಿಮಿತವಾದ ಸ್ಥೈರ್ಯವನ್ನು ಸಾಧಿಸುವ ಚಮತ್ಕಾರ ಈ ಕತೆಯ

ವಸ್ತು. ಇಲ್ಲಿ ಅನುಭವದ ಸಂಕೀರ್ಣತೆಯನ್ನೂ ಸಂದಿಗ್ಧತೆಯನ್ನೂ ಒಪ್ಪಿಕೊಳ್ಳುವ

ರೀತಿಯಲ್ಲಿ, ದೃಷ್ಟಿಕೋನದಲ್ಲಿ ನವ್ಯತೆ ಇದೆ.

“ನೀನೇ ತಂತಿ" ಪ್ರಾಮುಖ್ಯವಾಗಿ "ರೊಮ್ಯಾಂಟಿಕ್‌" ಕತೆ. ಅಲ್ಲಿ ಬರುವ

ಸರಯೂ, ಅವಳ ಮುಂಚಿನ "ಪ್ಲೇಟೋನಿಕ್‌' ಪ್ರೇಮಿ, ಅವಳ ಗಂಡ ಹರೀಶ, ಅವಳ

ವೈವಾಹಿಕ ಜೀವನಕ್ಕೆ ಅಡ್ಡಿ ಮಾಡುವ ಹಳೆಯ ಪ್ರೇಯಸನ ನೆನಪು -ಇವು ಹಳೆಯ

ತ್ರಿಕೋಣಾಕೃತಿಯನ್ನೇ ಸೂಚಿಸುತ್ತವೆ. ಕತೆಯಲ್ಲಿ ಬರುವ ಪಂಜರದ ಗಿಳಿ, ಆ