ಪುಟ:ನಡೆದದ್ದೇ ದಾರಿ.pdf/೫೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೫೩೦
ನಡೆದದ್ದೇ ದಾರಿ
 

ವೀಣಾ ಅವರ ಬರವಣಿಗೆ ಹೊಸ ಬಗೆಯದು ಎಂದು ಸಾದಾರಪಡಿಸಿದವು. ಎಳೆಯ
ಮನಸ್ಸಿನ ಅನುಭವ ಚಿತ್ರಗಳನ್ನು ಪ್ರಬುದ್ಧ ತರುಣಿಯೊಬ್ಬಳು ಎದುರಿಸುವ,
ಪ್ರತಿಕ್ರಿಯಿಸುವ ಸನ್ನಿವೇಶಗಳನ್ನು ಅವಳ ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆಯ ಮೂಲಕ
ಅಭಿವ್ಯಕ್ತಿಸಿದ ರೀತಿ ಅನನ್ಯ.ಶಾಂತಿನಾಥ ದೇಸಾಯಿ 'ಇಲ್ಲಿಯ ವಸ್ತುವಿನಲ್ಲಿ,
ತಂತ್ರದಲ್ಲಿ, ಭಾಷೆಯಲ್ಲಿ ಒಂದು ವಿಶಿಷ್ಟ ನವ್ಯ ದೃಷ್ಟಿ ತನ್ನತನವನ್ನು ಶೋಧಿಸಲು
ಯತ್ನ ಮಾಡುತ್ತಿರುವುದನ್ನು ನೋಡಿದಾಗ ವೀಣಾ ಅವರ ಕಲೆಗಾರಿಕೆ ಕಠಿಣವಾದರೂ
ಅನಿವಾರ್ಯವಾದ ಬೆಳವಣಿಗೆಯ ಮಾರ್ಗವನ್ನು ಹಿಡಿದಿದೆ ಎನ್ನಬಹುದು" ಎಂದು
ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಮುಳ್ಳುಗಳು ಸಂಕಲನದ ಮುನ್ನುಡಿಯಲ್ಲಿ)
ಕನ್ನಡ ಲೇಖಕಿಯರ ಆತ್ಮಕಥೆಗಳ ಸಂಪುಟ 'ಲೇಖ-ಲೊಕ"ದಲ್ಲಿ ವೀಣಾ
ತಮ್ಮ ಸ್ತ್ರೀಪಾತ್ರಗಳ ಕುರಿತು ಹೀಗೆ ಬರೆದಿದ್ದಾರೆ- "ಏಕಾಕಿಯಾಗಿ ಗಂಡಸಿನ ಹಾಗೂ
ಸಮಾಜದ ಅನ್ಯಾಯಗಳ ವಿರುದ್ಧ ಹೋರಾಡುವ ಮಹಿಳೆಯ ದಾರಿ ಇನ್ನೂ
ಸುಗಮವಾಗಿಲ್ಲ. ಪರಿಪೂರ್ಣ ಮಹಿಳಾ ಸ್ವಾತಂತ್ರ್ಯಕ್ಕೆ ಕಾಲವಿನ್ನೂ ಪಕ್ವವಾಗಿಲ್ಲ.
ಆಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಥವಾ ತನ್ನ ತತ್ವಗಳಿಗಾಗಿ ನೋವು
ಅನುಭವಿಸುತ್ತ ಬದುಕಿರಬೇಕು. ಹೋರಾಡಿ ಜಯಗಳಿಸಿಯೂ ಸುಖವಾಗಿರುವ
ಭಾಗ್ಯ ತೀರಾ ಕಡಿಮೆ ಸಂಖ್ಯೆಯ ಮಹಿಳೆಯರಿಗಿದೆ. ಉಳಿದವರನ್ನು ಈ ಸಮಾಜ
ಒತ್ತಾಯದಿಂದ ಹೊಂದಾಣಿಕೆ ಮಾಡಿಕೊಳ್ಳಲು ಹಚ್ಚುತ್ತದೆ. ಈ ಮಹಿಳೆಯರು
ಅಂಜುಬುರುಕರಲ್ಲ,ಹೇಡಿಗಳಲ್ಲ,ಕಟುವಾಸ್ತವದ ಅರಿವುಳ್ಳವರು, ಇವರು
ಸೋತವರಲ್ಲ,ಪಕ್ವತೆ ಹೊಂದಿದವರು." (ಲೋಖಲೋಕ: ೨-ಡಾ.ವೀಣಾ
ಶಾಂತೇಶ್ವರ; ಪು.೧೦೯)
ವೀಣಾ ಶಾಂತೇಶ್ವರ ಈ ಮಾತುಗಳನ್ನು ಬರೆದ ಕೆಲವೇ ವರ್ಷಗಳ ನಂತರ
ಈಗ ನಾವು ಮತ್ತೆ ತಿರುಗಿ ನೋಡಿದರೆ ಸಾಹಿತ್ಯ,ಸಂಸ್ಕೃತಿ,ರಾಜಕೀಯ ಕ್ಷೇತ್ರಗಳಲ್ಲಿ
ಸಾಧನೆ ಮಾಡಿದ ಕೆಲವು ಮಹಿಳೆಯರು ತಮ್ಮ ವಿಶಿಷ್ಟ ವ್ಯಕ್ತಿತ್ವ ಮತ್ತು
ಸೀಮೋಲ್ಲಂಘನೆಗಳ ಜೊತೆಗೆ ಮನ್ನಣೆ, ಗವ್ರವ ಪಡೆದುಕೊಂಡಿರುವುದೂ, ಜೊತೆಗೇ
ನೌಕರಿ ಮಾಡುವ- ಮಾಡದ ಮಹಿಳೆ ಶೋಷಣೆಗೆ ಒಳಗಾಗುವ ಸನ್ನಿವೇಶವೂ
ಕಾಣುತ್ತದೆ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಹೆಂಗಸರು ತಮ್ಮ ತನವನ್ನು
ಸ್ಥಾಪಿಸಿಕೊಳ್ಲಲು ಸಾಧ್ಯವಾಗದೇ ಹೊಂದಾಣಿಕೆ ಮಾದಿಕೊಂಡೇ ಬದುಕು
ಸಾಗಿಸುತ್ತಿಲ್ಲವೇ?
ವೀಣಾ ಅವರ ಬರವಣಿಗೆಯ ಸತ್ವವನ್ನೂ ಜೀವಂತಿಕೆಯನ್ನೂ ಗಮನಿಸಿದಾಗ
ನನಗೆ ಬೆಲ್ಲ-ಸಕ್ಕರೆಗಳನ್ನು ಕುರಿತ ನುಡಿಯೊಂದು ಜ್ಣಾಪಕಕ್ಕೆ ಬರುತ್ತಿದೆ. "ಬೆಲ್ಲಕ್ಕೆ