ಪುಟ:ನಡೆದದ್ದೇ ದಾರಿ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು/ ಪ್ರಶ್ನೆ

೪೭

ದುಃಖ, ಆತೃಪ್ತಿ. ಇದರ ಕೊನೆ?- ತಿಳಿಯದು. ಈ ಪ್ರಶ್ನೆಗುತ್ತರ ಅರಸುವುದರ ಬದಲು,ಇದೆಲ್ಲಕ್ಕೆ ತಾನು ಕಲ್ಪಿಸಿದ್ದ ಆ ರೊಮ್ಯಾಂಟಿಕ್ ಕೊನೆಯನ್ನು ಸುಮ್ಮನೆ ನೆನಪಿಸಿಕೊಳ್ಳುತ್ತಾ ಬಿದ್ದುಕೊಂಡಿದ್ದರೆ ಪೂರಾ ಬೆಳಗಾಗುವವರೆಗೂ ಹೇಗಾದರೂ ಹೊತ್ತು ಕಳೆಯಬಹುದು....

ನಿನ್ನೆ ಸಂಜೆ... ಸುಳ್ಳೇ ನನ್ನನ್ನು ವಂಚಿಬಾರದೆಂದು,ಪ್ರಾಮಾಣಿಕವಾಗಿ ನಿನ್ನ ಮನಸ್ಸಿನಲ್ಲಿದ್ದುದನ್ನು(ನಿನಗೇ ಆಸ್ಪಷ್ಟವಾದ ಕಲ್ಪನೆಯನ್ನು)ನನಗೆ ಹೇಳಬೇಕೆಂದು ಹೀರೋನ ಉತ್ಸಾಹದಿಂದ ನೀನು ಬಂದೆ:"ಕ್ಷಮಿಸು ಶಶೀ, ನನ್ನ ಪ್ರಶ್ನೆಯ ಉತ್ತರ ನೀನಲ್ಲ-ನೀನಾಗಲಾರೆ"ಎಂದೆ: ಆಗ ಒಂದು ಕ್ಷಣ, ಯಾರು ನಿನ್ನ ಪ್ರಶ್ನೆಯ ಉತ್ತರವೆಂದು ನಿನಗೆ ಆನ್ನಿಸುತ್ತಿತ್ತೋ ಮತ್ತು ಯಾರು ಎಂದೂ ಉತ್ತರ ರೂಪದಲ್ಲಿ ನಿನ್ನೆಡೆ ಬರುವುದು ಸಾಧ್ಯವಿಲ್ಲವೋ ಮತ್ತು ಯಾರ ಉತ್ತರಕ್ಕಾಗಿ ಕಾದು-ಕಾದು ಒಂದು ದಿನ ನಿನ್ನ ಪ್ರಶ್ನೆ ಸಹಿತವಾಗಿ ನೀನು ಸಾಯಬೇಕಾಗಿದೆಯೋ,ಆ ನಿನ್ನ ಆವಳ ಬಗ್ಗೆ ನನಗೆ ವಿಪರೀತ ಮತ್ಸರ ಆನ್ನಿಸಿತು-ತಿಳುವಳಿಕೆಯಿಲ್ಲದ ಸಣ್ಣ ಹುಡುಗಿಯ ಹಾಗೆ.ರಕ್ತ ತಕತಾಕನೆ ಕುದುಯಿತು.

-ಒಂದು ಕ್ಷಣ,ಆಷ್ಟೇ,ಒಂದೇ ಕ್ಷಣ.ಈಗ ಆತನಿಂದ ದೂರ ಈ ರಾತ್ರಿ ಹಾಸಿಗೆಯ ಮೇಲೆ ಒಬ್ಬಳೇ ಮಲಗಿ, ಆತನ ತಲೆಯೆಣ್ಣೆಯ ವಾಸನೆಯನ್ನು ನೆನೆನೆನೆದು ತಲೆದಿಂಬನ್ನು ಮೂಸಿ ನೋಡುತ್ತ,ಕಿಡಿಕಿಯ ಹೊರಗಿನ ಆಕಾಶದಲ್ಲಿ ನಿಧಾನವಾಗಿ ಮೂಡಿ ಬರುತ್ತಿರುವ ಬೆಳ್ಳಿಚಿಕ್ಕೆಯತ್ತ ನೋಡುತ್ತಿರುವಾಗ ತನ್ನ ಮನಸ್ಸು ತಿಳಿಯಾಗಿದೆ ಎನ್ನಿಸಿತು ಶಶಿಗೆ.ತಾನೆಂದೂ ಕಾಣದ ಆ ಅವಳ ಬಗ್ಗೆಯೇಕೆ ಮತ್ಸರ? ಒಂದು ರೀತಿಯಿಂದ ಹೀಗಾದುದು ಒಳ್ಳೆಯದೇ ಆಯಿತು. ಇಲ್ಲವಾದರೆ ತಾನು ತಮ್ಮಿಬ್ಬರ ಸಂಬಂಧದ ಕೊನೆಯ ಬಗ್ಗೆ ಕಲ್ಪಸಿದ್ದ ಆ ರೊಮ್ಯಾಂಟಿಕ್ ರೀತಿಯಲ್ಲಿ ಎಲ್ಲಾ ನಡೆದುಹೋಗಿದ್ದರೆ.... ಆಗ ತಾನೂ ದ್ರೋಹಿಯಾಗುತ್ತಿರಲಿಲ್ಲವೆ?

-ನಾನೇನೆಂದು ಕಲ್ಪಿಸಿದ್ದೆ ಗೋತ್ತೇ No IV? ಹೇಳಿದರೆ ಸ್ವಾರ್ಥಿ ಅನ್ನುವಿಯೇನೋ!ಅನ್ನು.ನಿನ್ನೆ ಸಂಜೆ ಹೃದಯದಲ್ಲಿ ಹತ್ತಿಕ್ಕಿಟ್ಟದ್ದನ್ನೆಲ್ಲ ನನ್ನೆದುರು ಪ್ರಾಮಾಣಿಕತೆಯ ಸೋಗಿನಲ್ಲಿ ಕಾರಿಕೊಂಡುಬಿಟ್ಟೆಯಲ್ಲ,ಆಗಲೇ ನಿನಗೆ ಹೇಹೇಳೋಣವೆಂದುಕೊಂಡಿದ್ದೆ.ಯಾಕೋ ಬೇಡವೆನ್ನಿಸಿತು.ಈಗ ಸ್ಟಷ್ಟವಾಗಿ ಹೇಳುತ್ತಿರುವೆ:ನನಗಾಗ ಆನ್ನಿಸಿತ್ತು-ನನ್ನ ಬಗೆಗಿನ ನಿನ್ನ ಹುಚ್ಚು-ಸೆಳೆತ ಹೀಗೆಯೇ ಇರಲಿ,ಇಷ್ಟೇ ತೀವ್ರವಾಗಿರಲಿ,ಕುದಿಯುತ್ತಿರಲಿ,ಉರಿಯುತ್ತಿರಲಿ; ಆಗ ಸದ್ದಿಲ್ಲದೆ ನಿನ್ನ ಹುಚ್ಚಿಗೆ-ತೀವ್ರತೆಗೆ-ಬೆಂಕಿಗೆ ನೀರು ಹಾಕಿ,ಕಲ್ಲು ಹಾಕಿ,ಮಣ್ಣು ಹಾಕಿ,ಗೋರಿ ಕಟ್ಟಿ ನಾನು ಎಲ್ಲಾದರೂ ದೂರು ಹೋಗಬೇಕು;ಆಗ ಹಾಗಾದ ನಂತರ,ನಿನ್ನಲ್ಲಿ