ಪುಟ:ನಡೆದದ್ದೇ ದಾರಿ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು /ಪ್ರಶ್ನೆ

೪೯

ಮಾಡಿದಳು.ಕಿಡಿಕಿಯಾಚೆ ಬೆಳ್ಳಿಚಿಕ್ಕೆ ಸ್ಪಷ್ಟವಾಗಿ ಮೂಡಿತ್ತು. ಇನ್ನೇನು, ಬೆಳಗಾಗಲು
ತಡವಿಲ್ಲವೆನಿಸಿ ಅವಳಿಗೆ ಸಮಾಧಾನವೆನಿಸಿತು.
-ಕಣ್ಣುಮುಚ್ಚಿ ಜಿಗಿ ಹೊಡೆಯುತ್ತಿರುವೆ, ಅರುಣ, ನಿನ್ನ ಜೀವನದಲ್ಲಿ. ಇದರ
ರಭಸಕ್ಕೆ ಏಳಬಹುದಾದ ತೆರೆಗಳ ಭಯವಿಲ್ಲದಿಲ್ಲ ನನಗೆ. ವರ್ತುಲಾಕಾರವಾಗಿ ಏಳುವ
ತೆರೆಗಳು....ಆದರೆ ಕ್ರಮೇಣ ಶಾಂತವಾಗಿ-ಸ್ತಬ್ಧವಾಗಿ ಹೋಗುವ ತೆರೆಗಳು....
-ಕೊನೆಯ ಪ್ರಶ್ನೆ,
ನಿಜವಾಗಿಯೂ ಶಾಂತವಾಗುವವೆ? ಶಾಂತಿಯೆಂಬುದಾದರೂ
ಅಸ್ತಿತ್ವದಲ್ಲಿದೆಯೆ?
ನನಗೆ ಗೊತ್ತಿಲ್ಲ ;
ನಿನಗೆ ಗೊತ್ತಿದೆಯೇ No.IV?
***