ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

________________

ಮುಳ್ಳುಗಳು/ಬರಿ ನೆನಪು
೫೧


-ಮೆಟ್ಟಲೇರಿ ಬಾಗಿಲಿಗೆ ಬಂದಿದ್ದ ಎಲಿಸನ್ ಸ್ವಲ್ಪ ಆಶ್ಚರ್ಯದಿಂದ ಎದುರಿಗೆ
ನಿಂತಾಕೆಯನ್ನು ನೋಡಿದ.
“ಬರಿ ಒಳಗ ಎಂದವಳೇ ಪಾವನಾ ಒಳಗೋಡಿದಳು. ನಡುಮನೆಯಲ್ಲಿ
ಗೋಡೆಗೆ ಹಾಕಿದ್ದ ದೊಡ್ಡದಾದ ನಿಲುವುಗನ್ನಡಿಯೆದುರಿನಿಂದ ಹಾಯ್ದು
ಹೋಗುವಾಗ ಅವಳಿಗೆ ಒಮ್ಮೆಲೆ ಅನ್ನಿಸಿತು-ಮುಂಜಾನೆ ಎದ್ದು ಸರಿಯಾಗಿ
ಮುಖ ಸಹ ತೊಳೆದುಕೊಳ್ಳಲಿಲ್ಲ ತಾನು. ಛೆ, ಕೆದರಿದ ಕೂದಲಿನ ತನ್ನ ಗುರುತು ಎಲಿಸನ್‌ಗೆ
ಸಿಕ್ಕಿತೇ ?
ಪಾವನಾಳ ತಾಯಿ ಸೀತಮ್ಮ ನಗುಮುಖದಿಂದ ಹೊರಬಂದು ಬಂದಾತನನ್ನು
ಸ್ವಾಗತಿಸಿದರು, “ಇದೇನಪಾ, ಇಷ್ಟದಿನದ ಮ್ಯಾಲ ನಮ್ಮ ನೆನಪು ಬಂತು ?"
“ನೆನಪು ಇದ್ದೇ ಇತ್ತು, ಬರೂದಾಗಿರಲಿಲ್ಲ ಅಷ್ಟS. ನನ್ನ ಮಮ್ಮಿಗೆ ಸ್ವಲ್ಪ
ವಯಸ್ಸಾಗಿ ಮೈಯಾಗ ಆರಾಮ ಇಲ್ಲಂತ ನಾ ಈಗ ಕಾರವಾರದಾಗೇ ಇದ್ದೀನಿ.
ಡಾಕ್ಟರ್ ಇಲ್ಲೇನು ?" -ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತ ಎಲಿಸನ್ ಕೇಳಿದ.
ಒಳಬಾಗಿಲಲ್ಲಿ ನಿಂತು ಆತನ ಮಾತಿಗೆ ಕಿವಿಗೊಟ್ಟಿದ್ದ ಪಾವನಾ ತನ್ನ ನೆನಪು
ಆತನಿಗೆ ಇದೆಯೋ ಇಲ್ಲವೋ ತಿಳಿಯದೆ ಚಡಪಡಿಸಿದಳು.
ಸೀತಮ್ಮ ಉತ್ತರಿಸುತ್ತಿದ್ದರು, ಅವರು ಬೆಳಗಾವಿಗೆ ನಮ್ಮ ಹಿರೇಮಗನ
ಮನೀಗೆ ಹೋಗಿ ಎಂಟ ದಿನಾ ಆತು. ನಿಮ್ಮ ಮನ್ಯಾಗ ಎಲ್ಲಾರೂ ನೆಟ್ಟಗಿದ್ದಾ ರಿಲ್ಲೊ ?
ನಿನ್ನ ಲಗ್ನ ಆತೇನು ?"
ತಾಯಿಯ ಕೊನೆಯ ಪ್ರಶ್ನೆಗೆ ಆತನೇನು ಉತ್ತರಿಸುವನೋ ಎಂದು ಕಿವಿ
ನಿಮಿರಿಸಿದ ಪಾವನಾಗೆ ಆತನ ಉತ್ತರದಿಂದ ಯಾಕೋ ಸಮಾಧಾನವಾದಂತೆನಿಸಿತು.
“ನನ್ನದಿನ್ನೂ ಲಗ್ನ ಆಗಿಲ್ಲ. ನಾ ಪೂನಾದಾಗ ನಾಕು ವರ್ಷ ಸರಕಾರಿ ಡಾಕ್ಟರಂತ
ಕೆಲಸಾ ಮಾಡಿದೆ. ಮಮ್ಮಿಯ ಹತ್ತಿರ ಯಾರೂ ಇಲ್ಲ ಅಂತ ಕಾರವಾರಕ್ಕ ಬಂದು
ಎರಡ ವರ್ಷಾತು. ಗೋಪಿ ಎಷ್ಟ ದೊಡ್ಡಾ ವಾಗ್ಯಾನ ! ಆಗ ನಾಲ್ಕ ವರ್ಷದ ಹುಡುಗ
ಇದ್ದ. ಈಗ ನನಕಿಂತ ಎರಡ ಇಂಚು ಎತ್ತರಾಗ್ಯಾನ. ನನಗ ಗುರುತು ಸಿಗಲಿಲ್ಲ.*
ಹನ್ನೆರಡು ವರ್ಷಗಳ ಹಿಂದೆ ಗೋಪಿ ನಾಲ್ಕು ವರ್ಷದ ಹುಡುಗನಾಗಿದ ನಿಜ :
ಆದರೆ ಗೋಪಿಗಿಂತಲೂ ಮೂರು ವರ್ಷಕ್ಕೆ ದೊಡ್ಡವಳಾದ ತನ್ನ ನೆನಪು ಎಲಿಸನ್‌ಗೆ
ಏಕಿಲ್ಲ ? ಅಥವಾ ತನ್ನ ಬಗ್ಗೆ ಕೇಳಲು ಆತನಿಗೇನು ಸಂಕೋಚವೆ ?
ಸೀತಮ್ಮನೇ ಮಗಳ ಬಗ್ಗೆ ವಿವರವಿತ್ತರು, “ನಮ್ಮ ಪಾವನಾ ಈ ವರ್ಷ
ಬಿ.ಎಸ್ಸಿ. ಮುಗಿಸಿದಳು.*
“ಹಿಂಗೇನು ?" ಎಂದಷ್ಟೇ ಹೇಳಿ ಸುಮ್ಮನಾದ ಎಲಿಸನ್.