ಪುಟ:ನಡೆದದ್ದೇ ದಾರಿ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨

ನಡೆದದ್ದೇ ದಾರಿ

ಸದ್ಯ ತಾಯಿ ಮದುವೆಯ ಬಗ್ಗೆ ಹೇಳಲಿಲ್ಲವಲ್ಲ ಎಂದುಕೊಂಡಳು
ಪಾವನಾ. ಎಲಿಸನ್ ಗಾಗಿ ಚಹಾ ಮಾಡೆಂದು ಅಡುಗೆಯವನಿಗೆ ಹೇಳಲೆಂದು ಆಕೆ
ಒಳಗೋಡಿದಳು.
ಎಲಿಸನ್ ಪಿಂಟೋ.........
ಹನ್ನೆರಡು ವರ್ಷಗಳ ಹಿಂದೆ.....
ಎಲಿಸನ್ ನ ತಾಯಿ ಮಿಸೆಸ್ ಪಿಂಟೋ ಪಾವನಾಳ ತಂದೆ ಡಾ.ರಾಮಚಂದ್ರರ
ಸ್ನೇಹಿತೆ. ಹನ್ನೆರಡು ವರ್ಷಗಳ ಹಿಂದೆ ತನ್ನ ಮಗ ಎಲಿಸನ್ ನನ್ನು ಆಕೆ ಧಾರವಾಡದಲ್ಲಿ
ಕಾಲೇಜಿಗೆ ಸೇರಿಸಿದ್ದಳು, First year ಗೆ. ಎಲಿಸನ್ ಅಗ ಹದಿನೇಳು - ಹದಿನೆಂಟರ
ಹುಡುಗ.
-ಹೌದು, ಪಾವನಾಗೆ ಸರಿಯಾಗಿ ನೆನಪಿದೆ.
ಆಕೆ ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಿದ್ದಾಗ, ಸುಂದರವಾದ ಒಂದು
ಮುಂಜಾನೆ ಮನೆಯೆದುರು ತೆಳುನೀಲಿ ಬಣ್ಣದ ಒಂದು ಫೋರ್ಡ್ ಕಾರು ಬಂದು
ನಿಂತಿತು.
ಮೊದಲು ಇಳಿದುದು ಸ್ಥೂಲಕಾಯದ ಓರ್ವ ಸ್ತ್ರೀ; ನಂತರ ಅವಳ ಹಿಂದೆ
ಸುಂದರವಾಗಿ ಡ್ರೆಸ್ ಮಾಡಿದ, ನಗುಮುಖದ, ತುಂಟನೆಂದು ತೋರುತ್ತಿದ್ದ ಒಬ್ಬ
ಹುಡುಗ. "ನೀನು ಡಾ. ರಾಮಚಂದ್ರರ ಮಗಳೇನು ಮಗು? "-ಬಂದಾಕೆ
ಇಂಗ್ಲೀಷಿನಲ್ಲಿ ಕೇಳಿದರು. ಆಡುತ್ತಿದ್ದ ಆಟದಿಂದ ತಲೆಯೆತ್ತಿ, ಎದೆಸೆಟೆಸಿ ನಿಂತು
ಸ್ಟೈಲಿಶ್ ಆಗಿ "yes" ಎಂದು ಪಾವನಾ ಉತ್ತರಿಸಿದ ಬಗೆ ಆ ಹುಡುಗನನ್ನು ಬಹುವಾಗಿ
ಸೆಳೆದಿತು.ಆತ ಮುಂದೆ ಬಂದು ಅವಳನ್ನೆತ್ತಿ ಮುದ್ದಿಟ್ಟು, "ಸ್ವೀಟ್ ಬೇಬಿ" ಎಂದು
ನಕ್ಕ.
ಅಷ್ಟರಲ್ಲಿ ಹೊರಬಂದ ಪಾವನಾಳ ತಂದೆಯನ್ನು ಕಂಡು, ಬಂದಾಕೆ, 'ಹಲೋ
ಡಾಕ್ಟರ್' ಎಂದು ಕೈಚಾಚಿದಳು.
"ಹಲೋ ಮಿಸೆಸ್ ಪಿಂಟೋ" ಎಂದು ಅವರು ಅವಳ ಕೈ ಕುಲುಕಿ ಇಬ್ಬರಿಗೂ
ಸ್ವಾಗತ ಬಯಸಿದರು.
ತಮ್ಮ ಮನೆಯಲ್ಲಿ ಆಕೆ ಇದ್ದುದು ನಾಲ್ಕು ದಿನ. ಆ ಅವಧಿಯಲ್ಲಿ ಪಾವನಾಗೆ
ಎಲಿಸನ್ ಬಹಳ ಸಮೀಪದ ಗೆಳೆಯನಾಗಿಬಿಟ್ಟಿದ್ದ. ನಂತರ ಮಿಸೆಸ್ ಪಿಂಟೋ ತನ್ನ
ಮಗನನ್ನು ಹಾಸ್ಟೆಲಿಗೆ ಸೇರಿಸಿ ಕಾರವಾರಕ್ಕೆ ಮರಳಿದ್ದರು.
ತನಗಾಗ ಏಳು ವರಷ್ ಮಾತ್ರ ವಯಸ್ಸೇ ? ತಾನೇಕೆ ಆಗ ಇನ್ನೂ ಸ್ವಲ್ಪ
ದೊಡ್ಡವಳಾಗಿರಲಿಲ್ಲ ? ಎಲಿಸನ್ ಗೂ ತನಗೂ ಹತ್ತು ವರುಷದ ಬೃಹದಂತರ