ಪುಟ:ನಡೆದದ್ದೇ ದಾರಿ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೪

ನಡೆದದ್ಡೇ ದಾರಿ

ಏನಿರಬಹುದಗಿತ್ತು?ಆದರೆ ಒಮ್ಮೆ ಏಲಿಸನ್ ಆವಳ ಗುಟ್ಟನ್ನು ಬಯಲು ಮಾಡಿದ.ಗುಲಾಬಿಯ ಗಿಡದಡಿ ಪಾವನಾ ಕವಿತೆ ಬರೆದ ತನ್ನ ಸ್ಲೇಟನ್ನು ಆಡಗಿಸಿಟ್ಟೂ ಒಳಗೆ ಹೋದಾಗ,ಎಲಿಸನ್ ಆದನ್ನು ತೆಗೆದುಕೊ೦ಡು ಓದಿದ್ಡಲ್ಲದೆ ಡಾಕ್ಟರರಿಗೂ ಸೀತಮ್ಮನವರಿಗೂ ಓದಿ ತೋರಿಸಿಬಿಟ್ಟಿದ್ಡನು.ಆವರೆಲ್ಲ ಸೇರಿ ನಕ್ಕಾಗ ಪಾವನಾಳಿಗಾದುದು ಭಾರಿ ಅವಮಾನ.ಆಕೆ ಎಲಿಸನ್ ನೊಡನೆ ಮಾತುಬಿಟ್ಟಳು.

ಆಗಲೂ ಆತ ಮನೆಗೆ ಬರುತ್ತಿದ್ದ.ಗೋಪಿಯೊಡನೆ ಆಟವಾಡಿ, ಸೀತಮ್ಮನೊಡನೆ ಮಾತನಾಡಿ ತಿರುಗಿ ಹಾಸ್ಟೆಲಿಗೆ ಹೋಗುತ್ತಿದ್ಡ.ಆತನಾಗಿಯೇ ಬ೦ದು ಮಾತನಾಡಿಸಬಹುದು ಎ೦ದು ಕಲ್ಟಿಸಿ ಪಾವನಾ ಕಾದಿರುತ್ತಿದ್ಡಳು.ಆದರೆ ಆತ ಮಾತಾಡುತ್ತಿರಲೇ ಇಲ್ಲ. ಆತ ಹೋದ ನಂತರ ಅವಳಿಗೆ ಅಳು ಬರುತ್ತಿತ್ತು. ಆತನ ಪರೀಕ್ಷೆ ಮುಗಿದಿತ್ತು. ಮೊದಲ ವರ್ಷದ ಬೇಸಿಗೆ ರಜೆಗಾಗಿ ಕಾರವಾರಕ್ಕೆ ಹೊರಟಾಗ ಡಾಕ್ಟರರಿಂದ ಬೀಳ್ಕೊಳ್ಳಲು ಆತ ಅವರ ಮನೆಗೆ ಬಂದಿದ್ಡ. ಹದಿನೈದು ದಿನ ಸತತವಾಗಿ ತನ್ನ ಪುಟ್ಟ ಗೆಳತಿಯೊಂದಿಗೆ ಮಾತು ಬಿಟ್ಟ ಕಾರಣವಾಗಿ ಆತನಿಗೇನೂ ಕೆಡುಕೆನಿಸಿರಲಿಲ್ಲವೆ?

"ಎಲಿಸನ್ ಊರಿಗೆ ಹೋಗತಾನ. ಇನ್ನ ಎರಡ ತಿಂಗಳು ಬರೋದಿಲ್ಲ. ಮಾತಾಡೋದಿಲ್ಲೇನು ಪಾವನಾ?"- ಡಾಕ್ಟರರು ಮಗಳ ಹೆಗಲ ಮೇಲೆ ಕೈಯಿರಿಸಿ ಕೇಳಿದ್ದರು. ಪಾವನಾಳ ಕಣ್ಣು ಒಮ್ಮೆಲೆ ತುಂಬಿಬಂದವು. ಮಗುವಿನೊಂದಿಗೆ ಎಂತಹ ಹಟ ಎನ್ನಿಸಿತೇನೋ, ಎಲಿಸನ್ ನಗುತ್ತ ಮುಂದೆ ಬಂದು ಹೇಳಿದ, "ಬಿಡು ಮಹಾರಾಯಳ, ನಾನ ಸೋಲತೀನಿ ಆತ?"

ನಂತರ ಆತ ತನ್ನ ವಿಶಿಷ್ಟ ಪದ್ಧತಿಯಂತೆ ಎಡಗೈಯನ್ನು ಅವಳ ಬೆನ್ನ ಹಿಂದಿರಿಸಿ ಬಲಗೈಯಿಂದ ಅವಳ ಬೆನ್ನ ಹಿ೦ದಿರಿಸಿ ಬಲಗೈಯಿ೦ದ ಅವಳ ಮುಖಾ ಮೇಲೆತ್ತಿ,ಮ್ಮದುವಾಗಿ ಆವಳ ಹಣೆಯನ್ನು ಮುದ್ಧಿಸಿದನು. ಎಲಿಸನ್ ತನ್ನನ್ನು ಮುದ್ದುಸಿದ್ದು ಆದೇ ಕೊನೆಯ ಸಲ....ಹೌದು.ಮು೦ದಿನ ಸಲ ಆತ ಬ೦ದಾಗ ಪಾವನಾಗೆ ಆತನೊಡನೆ ಬೆರೆಯಲು ಸ೦ಕೋಚವಾಗುತ್ತಿತ್ತು.ಎಲಿಸನೆ,"ಎಷ್ಟು ದೊಡ್ಡಾಕಿ ಆದೆವಾ ಮೂರೇ ತಿ೦ಗಳಾಗ!"ಎ೦ದಾಗ ಆಕೆ ಚಿಗರಿಯ೦ತೆ ಒಳಗೆ ನೆಗೆದಿದ್ಡಳು.

ಈಗಲು ಆಕೆ ರವಿವಾರದ ಪ್ರತೀಕ್ಷೆ ಮಾಡುತ್ತಿದ್ಡಳು.ಆದರೆ ಈಗಿನ ಪ್ರತೀಕ್ಷೆಯಲ್ಲಿ ಎದೆಯ ಬಡಿತ ಹೊಸದಾಗಿ ಸೇರಿತ್ತು.ಎಲಿಸನ್ ಬೆನ್ನು ಚಪ್ಪರಿಸಿದಾಗ ಆತನಿಗೆ ಆ೦ಟಿಕೊಳ್ಳುವ ಇಚ್ಛೆಯಗದೆ ದುರ ಓಡಬೇಕು ಎನ್ನಿಸುತ್ತಿತ್ತು.ಆತನೂ ಈ ವರ್ಷ ಬಹಳವಾಗಿ ಓದಬೇಕಾದುದರಿ೦ದ ಪಾವನಾಳ ಕಡೆ ಆಷ್ಟಾಗಿ