ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು /ಬರಿ ನೆನಪು
೫೫

ಗಮನವೀಯುವುದಾಗಿರಲಿಲ್ಲ.ಆ ವರ್ಷದ ಪರೀಕ್ಷೆಯಾದ ನಂತರ ಎಲಿಸನ್
ಹೊರಟುಹೋದ.ಆತನ ಕೊನೆಯ ಭೇಟಿ ಹೀಗಾಯಿತೋ ಅವಳಿಗೆ ನೇನಪಿಲ್ಲ ಅದು
ನೆನಪಾದರೇ ಒಂದು ಸುಂದರವಾದ ಕವಿತೆ ರಚಿಸಬಹುದು...ಆದರೆ ಊಹೂ, ಅದು
ನೆನಪೇ ಆಗಲೋಲ್ಲದು...
ಮಿಸೆಸ್ ಪಿಂಟೋ ಆಗಾಗ ಡಾ. ರಾಮಚಂದ್ರರಿಗೆ ಪತ್ರ ಬರೆಯುತಿದ್ದರು.
ಕೆಲವು ವರ್ಷಗಳ ನಂತರ ಎಲಿಸನ್ ಮೆಡಿಕಲ್ ಕೋರ್ಸ್ ಮುಗಿಸಿ ಡಾಕ್ಟರಾದುದೂ
ಅವರಿಂದ ತಿಳಿದಿತ್ತು ಆದರೆ ನಂತರ ವಿಶೇಷವದುದೇನನೂ ತಿಳಿದಿರಲಿಲ್ಲ. ಆದರೂ
ಎಲಿಸನ್ನ ನೆನಪು ನನಗೆ ಆಗಾಗ ಬರುತಿತ್ತು...
-ತನಗೂ ಹಿಂದೆ ಆದರ್ಶಗಳಿದ್ದವು.ಶಂತಿನಿಕೆತನಕ್ಕೆ ಹೋಗಿದ್ದುಕೊಂಡು
ಕಾವ್ತರಾದನೆ ಮಾಡಬೇಕು ಎಂದು.ಆದರೆ ಈಗ ಆದಾವುದು ಬೇಡವಾಗಿತ್ತು.
ಸಾಕಿನ್ನು ಆ ಭೂತಗಾತ್ರದ ಪುಸ್ತಕಗಳ ಒಡನಾಟ. ಬಾವನೆಗಳನೆಲ್ಲಾ ಹತ್ತಿಕ್ಕೆ, ಆ
ಪುಸ್ತಕಗಳಲ್ಲಿ ವ್ಯಕ್ತವಾದ ಹಾಳು ವಿಚಾರಗಳನ್ನು ಒತ್ತಾಯವಾಗಿ ತಲೆಯಲ್ಲಿ ತುಂಬಿಕೊಳ್ಳುವ
ಆನಿವಾರ್ಯವೆ? ಕನಸು ಕಾಣುತ ಹಾಯಾಗಿ ಮಲಗಿಕೊಳ್ಳುವ
ಅವಕಾಶವು ಇಲ್ಲದೆ ಆಲರಾಮ್ ಇಟ್ಟು ಮುಂಜಾನೆ ಏಳುವುದು.ತುಕಡಿಕೆ
ಬರುತ್ತಿದ್ದರು ಕಣ್ಣಿಗೆ ನೀರು ಹಾಚಿ ಪುಸ್ತಕದಲ್ಲಿ ದೃಷ್ಟಿ ನೀಡುವುದು - ಯಾಕೆ
ಅದೆಲ್ಲ ವೃಥಾ ಕಷ್ಟ ? ಪರೀಕ್ಷೆಯ ಸಮಯದಲ್ಲಿನ ಪರಿಸ್ತಿತಿಯಂತೂ ಇದಕ್ಕೂ
ಶೋಚನಿಯ.ಕೆಲಸದ ಒತ್ತಡದಿಂದಾಗಿ ಪತ್ರ ಬರೆಯಲು ಮೂರ್ತಿ ಒಂದೆರಡು
ದಿನ ತಡ ಮಾಡಿದರೇ ಮುಗಿಯಿತು ತನ್ನ ಅವಸ್ಥೆ ...ಯಾರು ಹೇಳಿದರೆ ಈ ಗೋಳು?
ಯಾವುದು ಬೆಡ. ಎಲ್ಲವು ಸಾಕು.ಇನ್ನು ತನ್ನ ಬಹಳ ಪ್ರೀತಿಯ "ಸ್ವೀಟ್ ಹಾರ್ಟ್ "
ಮೂರ್ತಿಯೊಂದಿಗೆ ಮದುವೇಯಾಗಿ ಸುಖವಾಗಿರಬೇಕು ಎಂಬ ನೀರಣಯಕ್ಕೇ ಆಕೆ
ಬಂದು ತಲುಪಿದ್ದಳು.
ಬರುವ ತಿಂಗಳು ಅವಳ ಮದುವೆ ಆಗಲಿತ್ತು. ಜೂನ್ ದ ನಿರಿಕ್ಷೇಯಲ್ಲಿ ಆಕೆ
ಸುಖಿಯಾಗಿದ್ದಳು.ಮೊನ್ನೆ ಯಸ್ಟೇ ಬಂದ ಪತ್ರದಲ್ಲಿ ಮೂರ್ತಿ ಬರೆದಿದ್ದ,
"ಹೃದಯರಾಣಿ,ನಮ್ಮ ಒಂದೂ ವರ್ಷದ ಕನಸು ಷೆಗರದಲ್ಲಿ ನನಸಾಗಲಿದೇ. ಈ
ಇಡಿಯ ವರ್ಷ ನಾವೂ ಭವಿಷ್ಯದ ಬಗೆಗೆ ಅಸಂಖ್ಯ ಕನಸುಗಳನ್ನು ಕಟ್ಟಿದ್ದೇವೆ.
ಅವೆಲ್ಲವನ್ನು ನಿಜವಾಗಿಸುವುದು ಯೂಚಿಸಿದಷ್ಟು ಸುಲಭವಲ್ಲ ಎಂದು ನಾನು
ಬಲ್ಲೆ. ನಿನಗೂ ಅದು ಗೊತ್ತು .ಆದರೆ ನಾವೂ ನಮ್ಮ ಹೃದಯ -ಬಲದಿಂದ
ಜೀವನವನ್ನು ಸುಂದರವಾಗಿಸೋಣ".
-ಮೂರ್ತಿಯದು ದೊಡ್ಡ ಮನಸು ...ನಿಜಕ್ಕೂ