ಪುಟ:ನಡೆದದ್ದೇ ದಾರಿ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೦

ನಡೆದ್ದೇ ದಾರಿ

"ನೀನೇ ತಂತಿ"

"ಹರಿ, ಹರಿ, ಹರಿ..."
-ಪಂಜರದಲ್ಲಿನ ಗಿಳಿ ಒಂದೇ ಸಮನೆ ಕಿರುಚುತ್ತಿದೆ. ಈ ಹಾಳು ಗಿಳಿಗೆ
ಮಾತಾಡಲು ಬರುತ್ತಿದ್ದುದು ಇದೊಂದೆ ಶಬ್ದ. ಯಾವಾಗ ನೋಡಿದರೂ 'ಹರಿ,
ಹರಿ'. ಹಸಿವೆಯಾದಾಗ ರೆಕ್ಕೆಗಳನ್ನು ಫಡಫಡಿಸುತ್ತ ತನ್ನ ಪುಟ್ಟ ಪಂಜರದಲ್ಲಿ
ಹಾರಾಡುವ ವಿಫಲ ಯತ್ನ ಮಾಡುತ್ತ ಅದು 'ಹರಿ ಹರಿ' ಅನ್ನುತ್ತದೆ; ಹೊಟ್ಟೆ
ತುಂಬಿದಾಗ ಸುಮ್ಮನೆ ಬಿದ್ದುಕೊಂಡು 'ಹರಿ ಹರಿ' ಆನ್ನುತ್ತದೆ; ಆದೇನು ಹರೀಶನನ್ನು
ತನ್ನ ಬಳಿಗೆ ಬಾ ಎಂದು ಕರೆಯುತ್ತದೆಯೋ ಆಥವಾ ತಾನೇ ಈ ಪಂಜರದಿಂದ
ಹೋಗಬಯಸಿ ತನ್ನನ್ನು ಹೋಗಗೋಡು ಎಂದು ಕೂಗುತ್ತದೆಯೋ
ಗೊತ್ತಾಗುವುದಿಲ್ಲ. ಹರೀಶ ಅದಕ್ಕೆ ಹಣ್ಣು ತಿನ್ನಿಸುತ್ತ ಮುದ್ದು ಮಾಡುತ್ತಿರುವಾಗ
ಸುಮ್ಮನಿರುತ್ತದೆ; ಸೋತುಹೋದ ಹಾಗೆ ತೆಪ್ಪಗೆ ಬೆದ್ದಿರುತ್ತದೆ. ಆದರೆ ಹರೀಶ
ಇಲ್ಲ ದಾಗ ಮತ್ತೆ 'ಹರಿ ಹರಿ' ಎಂದು ಒದರಲು ಸುರು ಮಾಡುತ್ತದೆ. ಒಂದೊಂದು
ಸಲ ಆದರ ಈ ಹರಿನಾಮ-ಜಪ ಕೇಳುವುದು ತೀರ ಅಸಹ್ಯವಾಗಿ ಪಂಜರದ ಬಾಗಿಲು
ತೆರೆದು ಅದುನ್ನು ಬಿಟ್ಟುಬಿಡಲೇ ಎಂದು ವಿಚಾರ ಬರುತ್ತದೆ. ಆದರೆ ಹರೀಶನ ಪ್ರೀತಿಯ
ಗಿಳಿ ಅದು. ಅದನ್ನು ಹಾರಿಬಿಟ್ಟರೆ ಆತ ಬಹಳ ನೊಂದುಕೊಳ್ಳುತ್ತಾನೆ. ಈ ಗಿಳಿಯ
ಮೇಲಿನ ಆತನ ಪ್ರೀತಿ ಎಷ್ಟೊಂದು ಕುರುಡಾಗಿದೆಯೆಂದರೆ ತಾನಿಲ್ಲದಾಗ ಈ
ಪಂಜರದ ಒಳಗೆ ಈ ಗಿಳಿ ಆನುಭವಿಸುತ್ತಿರಬಹುದಾದ ಮೂಕವ್ಯಥೆಯ ಬಗ್ಗೆ ಆತನಿಗೆ
ಕಲ್ಪನೆಯೇ ಬರುವುದಿಲ್ಲ...
ಈ ಗಿಳಿ ತನಗೆ ಸಿಕ್ಕ ಬಗೆಯನ್ನು ಕತೆಯಾಗಿ ಬಣ್ಣಿಸಿ ಹೇಳುವುದರಲ್ಲಿ
ಆತನಿಗೆಷ್ಟು ಉತ್ಸಾಹ!
'ನಾ ಹಿಂದಕ ಫೈನಲ್ ಬಿ.ಇ.ಕ್ಲಾಸಿನಲ್ಲಿದ್ದಾಗ ಇಂಡಸ್ಟ್ರಿಯಲ್ ಟೂರಿಗೆ
ಅಂತ ದಾಂಡೇಲಿಗೆ ಹೋಗಿದ್ವಿ. ಸಂಜೀನ್ಯಾಗ ಆಡಿವ್ಯಾಗ ತಿರಗ್ಯಾಡಿಕೋತ ಹೋದಾಗ
ಈ ಗಿಳೀ ಭೆಟ್ಟಿ ಆತು. ಆದೂ ಎಷ್ಟ ಮಜಾ ಅಂತೀ ಸರೂ, ಗಿಡದ ಕೆಳಗೆ ಹುಲ್ಲಿನ
ಮ್ಯಾಲ ಇದು ಸುಮ್ಮನ ಕೆಟ್ಟ ಧ್ವನಿಯೊಳಗ ಒದರಿಕೋತ ಬಿದ್ದಿತ್ತು. ನಾ ಸಮೀಪ
ಹೋದಾಗ ಹಾರೋ ಪ್ರಯತ್ನಾನೂ ಮಾಡಲಿಲ್ಲ. ನನಗ್ಯಾಕೋ ಭಾಳ ಕೆಟ್ಟನಿಸಿ