ಈ ಪುಟವನ್ನು ಪರಿಶೀಲಿಸಲಾಗಿದೆ
೬೪ ನಡೆದದ್ದೇ ದಾರಿ
ದೂರದೂರವಾಗಿರುವುದೇ ಸರಿ ಅನಿಸುವುದಂತೆ. ಅನಿಸದೇ ಏನು ಮಾಡೀತು? ಅದು ಅವನೊಬ್ಬನ ತಪ್ಪಲ್ಲ. ಅವನ 'ಸರಿ'-'ತಪ್ಪು'ಗಳ ಬಗೆಗಿನ ನಂಬಿಕೆಗೆ ಸಂಪ್ರದಾಯದ ಭದ್ರ ತಳಹದಿಯಿದ್ದಿ ತಲ್ಲ ! ಆ ನಂಬಿಕೆಯಲ್ಲಿ ನಂಬಿಕೆಯಿಲ್ಲದಿದ್ದರೂ ಅವನದನ್ನು ನಂಬುವ ನಟನೆ ಮಾಡಬೇಕಿತ್ತು. ಆ ನಂಬಿಕೆ ಸ್ವಲ್ಪ ಸಡಿಲಾಯಿತೋ, ಆತ ಬಿದ್ದ. ಬಿದ್ದರೆ ಪೆಟ್ಟಾದೀತೆಂಬ ಅಂಜಿಕೆ ಅವನಿಗೆ. ಕನಿಕರ ಆನಿಸುತ್ತದೆ ಒಮ್ಮೊಮ್ಮೆ ಅವನ ಬಗ್ಗೆ. ಬಿದ್ದ ಪೆಟ್ಟಿಗೆ ಅಂಜುವ ಮನುಷ್ಯನ ಭಾವನೆಗೆ ಬೆಲೆಯೇನು?
ಎದೆಯಲ್ಲಿ ಸಂಕಟದ ಪರ್ವತವನ್ನು ಹುದುಗಿಟ್ಟುಕೊಂಡು ಎಷ್ಟು ಸೊಗಸಾಗಿ
ನಟಿಸುತ್ತಿದ್ದ ಆತ! ಅದಕ್ಕೇನು 'ಆತ್ಮವಂಚನೆ' ಎಂದು, 'hypocrisy' ಎಂದು ಕರೆದು ಹೊಲಸು ಮಾಡಬಹುದಾಗಿತ್ತೆ? ಛೇ ಇಲ್ಲ. ಅದರ ಬದಲು ಅದಕ್ಕ 'ಪ್ಲೆಟೋನಿಕ್ ಪ್ರೇಮ' ಎಂದು ಚೆಂದು ಹೆಸರು ಕೊಟ್ಟದ್ದೇ ಒಳ್ಳೆಯದಾಯಿತು. ಅವನು ತನಗೆ ಎಂದೂ ಏನೂ ಹೇಳಲಿಲ್ಲ. ತನ್ನಿಂದ ಏನೂ ಬಯಸಲಿಲ್ಲ, ತನ್ನೊಂದಿಗೆ ಕೇವಲ ಒಳ್ಳೆಯ ವ್ಯಕ್ತಿಯ ಹಾಗೆ ನಡೆದುಕೊಂಡ, ಯಾರೆದುರಿಗೂ ತನ್ನ ಬಗ್ಗೆ ಚಕಾರ ಎತ್ತಲಿಲ್ಲ; ಆದರೆ ಅವನ ಕಣ್ಣಲ್ಲಿ ಒತ್ತಿ ಹಿಡಿದ ಎಂಥದೋ ಎನೋ ಇತ್ತು. ರಾತ್ರಿ ಆತ ನಿದ್ರೆಗೆಡುತ್ತಿದ್ದ. ಹಗಲು ಕನಸು ಕಾಣುವಂತಿದ್ದ, ಅವನ ಉತ್ಕಟ- ತೀವ್ರ-ಅಸ್ಪಷ್ಟ ಅನಿಸಿಕೆಯನ್ನು ತಡೆಯಲಾರದೆ ಹೇಳಲು ಹೊಗಿ ಒಮ್ಮಲೆ ತಡೆಹಿಡಿಯುತಿದ್ದ; ಮತ್ತೆ ಯಥಾಪ್ರಕಾರ ಇರುತಿದ್ದ. ಇದಕ್ಕಲ್ಲದ್ದರೆ ಇನ್ನಾವುದಕ್ಕನ್ನುವುದು ಪ್ಲಟೋನಿಕ್ ಪ್ರೇಮವೆಂದು? ಸಾಯುವ ವರೆಗೂ ಕೊಲ್ಲುತ್ತಿರಬಹುದಾದ ಈ ಪ್ರಜ್ನ್ಯೆಗೆ ಮರ್ಯಾದಿಗಾಗಿ 'ಪ್ಲಟೋನಿಕ್ ಪ್ರೆಮ' ವಿಶೇಷಣವನ್ನು ಹಚ್ಚಿ ಅವನು ಸ್ತಿತಪ್ರಜ್ನ ನಾಗಿದ್ದ; ಅಥವಾ ಆದಂತೆ ತೋರಿಸಿಕೊಳ್ಳುತ್ತಿದ್ದ. ಆದರೆ ತಾನು? ತನ್ನಲ್ಲಿ ಈ ಪ್ಲಟೊನಿಕ್ ದ ಬೆಂಕಿ ಹತ್ತಿ ಕ್ರಮೇಣ ಉರಿಯಾಗತೊಡಗಿತ್ತು. ಅವನಿಗದರ ಝಳ ತಾಗಿದರೂ ಆವನು ಸುಮ್ಮನಿದ್ದ; ಅವನ ಮೈ ಅದರಿಂದ ಸುಡತೊಡಗಿದ್ದರೂ ಏನೂ ಆಗದವನಂತಿದ್ದ. ಅದೇನು ತಾಳ್ಮೆಯೇ ಅಥವಾ ಹೇಡಿತನವೇ? ಎರಡೂ ಒಂದೇ. ಏನೋ ಅಂತೂ ಒಟ್ಟು ತನ್ನ ಆನಿಸಿಕೆಯೇನೂ ಈ 'ಪ್ಲೆಟೋನಿಕ್' ವಿಶೇಷಣದ ಡ್ಡೊಂಗೀ ನೈತಿಕ ಬಲ ಪಡೆದು ಜೀವಿಸಬೆಕಾಗಿದ್ದಿಲ್ಲ. ಆಗಿನದು ಹೋಗಲಿ, ಈಗಲೂ ತನಗೆ ಸ್ಪಷ್ಟವಾಗಿ ಅನಿಸುವುದು; ಅವನಿಂದ ತಾನೇನೂ ಬಯಸುವುದಿಲ್ಲೆಂದು ಸುಳ್ಳೇಕೆ ಹೇಳಬೇಕು? ಹರೀಶನ, ತನ್ನ ಗಂಡನ ತೊಳುಗಳಲ್ಲಿ ಮೈಮರೆತಿದ್ದಾಗ ಎಲ್ಲಿಂದಲೋ ಅವನ ಮೈಯ ವಾಸನೆ ಮೂಗಿಗೆ ಹೊಡೆಯುವುದು... ಕಣ್ಣು ಗಟ್ಟಿಯಾಗಿ ಮುಚ್ಚಿ ಹರೀಸಶನೆ ಅವನು, ತಾನಿರುವುದು ಹರೀಶನ ಮನೆಯ ಬೆಡ್ ರೂಮಲ್ಲ-ಮೂರು ವರ್ಶಗಳ ಹಿಂದಿನ ಆಮಾವಾಸ್ಯೆಯ