ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೬೬
ನಡೆದದ್ದೇ ದಾರಿ

ಗೂಡು ಸೇರಿಯೇನೋ ಎನ್ನಿಸಿಬಿಡುತ್ತಿತ್ತು ಅವನಿಗೆ.
ಅವನು ಅವನ ಕೋಟೆಯೊಳಗೇ ಇರಲಿ. 'ಸುಖ'ವಾಗಿರಲಿ. ಹೇಗಾದರೂ ಇರಲಿ.
ತನಗೇನೂ? ತನ್ನ ದಾರಿ ಬೇರೆ, ಅವನದು ಬೇರೆ. ಆ ಕತ್ತರಿಯಲ್ಲಿ ಒಂದು ಕ್ಷಣ
ಸಂಧಿಸಿದಾಗ ತಾವಿಬ್ಬರೂ ಕೈಕುಲುಕಿ ನಕ್ಕು ಆಡಿದ್ದೇ ತಪ್ಪು. ಅವನ ಪ್ಲೇಟೋನಿಕ್
ವಿಚಾರಗಳ ಪ್ರಕಾರ ಇದೆಲ್ಲ ತಪ್ಪಲ್ಲ. ಎಲೆಕ್ಟ್ರಿಕ್ ದೀಪದ ಕಂಭಕ್ಕೆ ಬಿಗಿದ
ತಂತಿಯಾದರೇನಾಯಿತು. ಪ್ರೇಮಗೀತೆ ಹಾಡಲು ಸಾಧ್ಯವಾಗದಿದ್ದರೂ
ಸತ್ತ ತುಟಿಗಳಲ್ಲಿ ಗುನುಗುನಿಸಬಹುದು.....
ಹೀಗೆಂದುಕೊಂಡೇ ಅವನು ಪ್ಲೇಟೋನಿಕ್ ದ ಶರಾಣುಹೋಗಿದ್ದ; ಒಳಗೆ
ಮುಚ್ಚಿಟ್ಟುಕೊಂಡಿದ್ದ; ಅಳುತ್ತದ್ದ; ಆದರೂ ನಗುತ್ತಿದ್ದ;
ಮುಂದೆ? ಮುಂದೇನು??
****
'ಹರಿ ಹರಿ' ಎನ್ನುತ್ತ ಈ ಗಿಳಿ ಯಾಕೋ ಬಹಳ ಹೊತ್ತಿನಿಂದ ರೆಕ್ಕೆ
ಫಡಫಡಿಸತೊಡಗಿದೆ. ನೋವಾಗುವ ಭಯವೂ ಇಲ್ಲದೆ ಪಂಜರದ ಸಲಾಕೆಗಳಿಗೆ,
ಬಾಗಿಲಿಗೆ ತನ್ನ ಮೂತಿ-ಕಣ್ಣು-ಚುಂಚುಗಳನ್ನು ಒಂದೇ ಸಮನೆ ಅಪ್ಪಳಿಸತೊಡಗಿದೆ.
ಅದಕ್ಕೆ ಯಾವ ವ್ಯಥೆಯೋ ಬಲ್ಲವರು ಯಾರು? ಬಹುಶಃ ಅದಕ್ಕೆ ಹಿಂದಿನ
ನೆನಪಾಗಿರಬಹುದೆ? ದಾಂಡೇಲಿಯ ಅಡವಿಯ ನೆನಪಾಗಿರಬಹುದೆ? ಅಲ್ಲಿ ತಾನು
ಹಾರಾಡಿದ ಗಿಡಗಳ, ಕುದುಕಿದ ಹಣ್ಣುಗಳ, ಜೊತೆಯ ಗಿಳಿಯ ನೆನಪಾಗಿರಬಹುದೆ?
ಹರೀಶ ಇನ್ನೂ ಆಫೀಸಿನಿಂದ ಬಂದಿಲ್ಲ. ಅಷ್ಟರಲ್ಲೇ ಪಂಜರದ ಬಾಗಿಲು
ತೆರೆದು ಈ ಗಿಳಿಯನ್ನು ಮುಕ್ತಗೊಳಿಸಿದರೆ.....
-ತೀವ್ರ ಇಚ್ಛೆಯಿಂದ ಸರಯೂ ಎದ್ದು ನಿಂತಳು. ಆದರೆ ಯಾಕೋ ತಲೆ
ತಿರುಗಿದಂತಾಗಿ ನಿಂತಲ್ಲೇ ಕೂತು ಬಿಟ್ಟಳು.
ಇತ್ತೀಚೆ ಈ ವಿಚಿತ್ರ ಜಡ್ಡು ಸುರುವಾಗಿದೆ. ಹರೀಶನ ಪ್ರೀತಿ ಉಸಿರು-
ಕಟ್ಟಿಸುವಂತೆನಿಸಿದಾಗ, ಅವನೇ ತಂತಿಯೆಂಬ ನಂಬಿಕೆಯನ್ನು ಅವನಲ್ಲಿ ಹುಟ್ಟಿಸಲು
ತಾನು ಅಸಮರ್ಥಳಾದಾಗ, ಆ ಹಿಂದಿನ ಪ್ಲೇಟೋನಿಕ್ ದ ಕನಸಿಗೇ ಜಿಗಿಯಲು ಮನಸ್ಸು
ತೀವ್ರವಾಗಿ ತವಕಿಸಿದಾಗ, ಮತ್ತೊಮ್ಮೆ ಆ ಮಾವಿನ ಮರದ ಕೆಳಗೆ ಹೋಗಿ ಆ ಅವನ
ತೋಳುಗಳ ಆಶ್ರಯದಲ್ಲಿ ಮಲಗಿ ಆ ಅದೇ ಹಳೇ ಹಾಡು ಹಾಡಬೇಕೆನಿಸಿದಾಗ, ಛೇ.....
ಇದೇನು ಜಡ್ಡು? ಅಶಕ್ತತೆ? ಆಲಸ್ಯ?
ಇದೂ ಸಹ ತನ್ನ ಭ್ರಮೆಯೇ ಇರಬೇಕು ಎನ್ನಿಸಿತು ಸರಾಯೂಗೆ. ಇದನ್ನು
ಕಿತ್ತೊಗೆಯಬೇಕು;ಎಲ್ಲಾ ಬಂಧನಗಳನ್ನೂ ಕಡಿದೊಗೆಯಬೇಕು; ಏನಾದರೊಂದನ್ನು