ಇಂದು ಇಡಿಯ ದಿನ ತಿರುಗಾಡೀ ಸಾಕಾಯಿತು. ಆಬ್ಬ, ಎಂತಹ ಹಸಿವು ಆ
ಗೋವಿಂದಮೂತಿರ್ವಗೆ! ಎಷ್ಟೆ ಲ್ಲ ತಿಳಕೊಂಡಿದ್ದಾನೆ ಅವನು ಈ ವಿಷಯದ ಬಗ್ಗೆ!
ಡಾಕ್ಟರ್ ಆಲ್ಲವೆ? ಛಿ, ಈ ಡಾಕ್ಟರರೆಲ್ಲಾ ಹೊಲಸು್ ಜನವಪ್ಪ. ಮನುಷ್ಯನ
ದೇಹವನ್ನು ಕೊಯ್ದು-ಕೊಯ್ದು ಎಲ್ಲ analyse ಮಾಡಿ ಎಲ್ಲ ನೋಡಿದವರು
ಇವರು. ಅದಕ್ಕೇ ಗೋವಿಂದಮೂತಿ೯ಗೆ ಈ ಬಗ್ಗೆ ಏನು ಮಾತಾಡಲಿಕ್ಕೂ
ನಾಚಿಕೆಯಿಲ್ಲ. ಇದು ಹೀಗೆ, ಆದು ಹಾಗೆ ಅಂತ ನನಗೇ ವಿವರಿಸಿ ಹೇಳುತ್ತಾನೆ.
'ಲಿಲಿ, you are a perfect woman'- ಅಂದ ನನಗೆ ಇವತ್ತು, ಕೆರೆಯ ಪಕ್ಕದ ದಿನ್ನೆಯ
ಆಚೆ ಕೂತಿದ್ದಾಗ, ನನಗೆ ಆಭಿಮಾನ ಅನ್ನಿಸಿತೆ ನನ್ನ ಬಗ್ಗೆ ? ಹೌದು ಅಂತ ಕಾಣುತ್ತದೆ.
ಯಾಕನ್ನಿಸಬಾರದು? ನಿನ್ನ ದೇಹ ರಚನೆ ಚೆನ್ನಾಗಿದೆ, ಪೊಣ೯ವಾಗಿದೆ ಅಂತ ಹೇಳಿದಾಗ
ಯಾವ ಹೆಂಗಸಿಗೆ ಅಭಿಮಾನ ಅನ್ನಿಸುವುದಿಲ್ಲ?
ಅದರೆ ಛೆ, ಗೋವಿಂದಮೂತಿ೯ಯೊಂದಿಗೆ ಇಡೀ ದಿನ ತಿರುಗಿ ಕೂತು ಮಲಗಿ
ಏನು ಮಾಡಿದರೂ ಒಮ್ಮೆ ಸಹ ಮೈ ಜುಮ್ ಅನ್ನಲಿಲ್ಲ.
ನನಗೆ ಇಂಥವರ ಗೆಳೆತನ
ಈಗ ಬೇಡವಾಗಿದೆ. ಇವರಿಂದ ಏನೂ ಉಪಯೋಗವಿಲ್ಲ. ಭಯಂಕರ ಮನುಷ್ಯ ಈ
ಗೋವಿಂದಮೂತಿ೯. ಎಂದೂ ತೀರದ ದಾಹ ಅವನದು. ಬೇರೆ ಮಾತಿಗೆ ಅವಕಾಶವೇ
ಕೊಡುವುದಿಲ್ಲ ಅವನು. 'ಜೀವನ ಇರೋದೇ ಸುಖ ಅನುಭವಿಸೋದಕ್ಕೆ ಲಿಲಿ,
ಈಗಲ್ಲದಿದ್ದರೆ ಇನ್ಯಾವಾಗ ನಾವು ಮಜವಾಗಿರುವುದು? ಮುದುಕರಾದ
ಮೇಲೆಯೇ? ಏನು ? ಪಾಪ? ಪಾಪ ಬಂದೀತು ಅನ್ನುತ್ತಿಯಾ?' - ಅಂತ ಅಂದು
ಅವನು ಭಯಂಕರವಾಗಿ ನಕ್ಕದ್ದು ಇನ್ನೂ ನೆನಪಿದೆ ನನಗೆ. 'ಇಲ್ಲಿ ಕೇಳು ಲಿಲಿ, ಪಾಪ
ಪುಣ್ಯ ಎಲ್ಲಾ ಸುಳ್ಳು. ನನ್ನ ಪಾಲಿಗಂತೂ ಇದೊಂದೇ ಖರೆ- ಇದೊಂದೇ ಖರೆ'
ಅನ್ನುತ್ತಾನೆ ಅವನು. ಅವನಂದದ್ದು ಖರೆ ಅಂತ ನನಗೂ ಅನ್ನಿಸಿತಲ್ಲ!
ಈ ಗೋವಿಂದಮೂತಿ೯ಗೂ ಆ ವಿನಯ ಸಾಳಕರಗೂ ಎಲ್ಲಿಂದೆಲ್ಲಿಯ
ಹೋಲಿಕೆ! ಮಾತೆತ್ತಿದರೆ ಪಾಪ-ಪುಣ್ಯ, Morality-ethics ದ ಗಂಟನ್ನೇ
ಬಿಚ್ಚುತ್ತಾನೆ ಅವನು. ಕಾಲೇಜಿನಲ್ಲಿ ಹುಡುಗರಿಗೆ ಫಿಲೊಸೊಫಿ ಕಲಿಸಿ-ಕಲಿಸಿ ಅಭ್ಯಾಸ.
ಪುಟ:ನಡೆದದ್ದೇ ದಾರಿ.pdf/೮೦
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೭೩
ಕೊನೆಯ ದಾರಿ
೨೪ ಜುಲೈ, ೧೯೫೮