ಪುಟ:ನಡೆದದ್ದೇ ದಾರಿ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೪

ನಡೆದದ್ದೇ ದಾರಿ

ಅವನಿಗೆ.ಏನು ಮಾಡಬೇಕು,ಏನು ಮಾಡಬಾರದು ಅ೦ತ ವಿವೇಚಿಸುವುದಲ್ಲೇ
ಜೀವನ ಸವೆಸುತ್ತಿದ್ದಾನೆ.ವಿನಯ.ಒಮ್ಮೆ ಏನಾದರೂ ಪ್ರಯತ್ನ ಮಾಡಿ ಅವನನ್ನು
ದಾರಿಗೆ ಹೆಚ್ಚಬೇಕು.
ದಾರಿ?ಡಾ. ಗೋವಿನಿ೦ದಮೂತಿ೯ಯ ದಾರಿಗೇ? ಊಹ್ಞೂ.ವಿನಯನ ಕೂಡ
ನಿಷ್ಟೆ,ಪಾವಿತ್ರ್ಯ, ಜೀವನದ ಮೌಲ್ಯಗಳು ಇತ್ಯಾದಿ ಬಗ್ಗೆ ತಾಸುಗಟ್ಟಲೆ ಸೀರಿಯಸ್ಸಾಗಿ
ಚಚೆ೯ ಮಾಡುವಾಗ ಸಿಗಿವ ಏನೋ ಒ೦ದು ಬಗೆಯ ಗಾಳಿಯಲ್ಲಿ ತೇಲಿಸಿದ೦ತಹ
ಅನಿಸಿಕೆಯನ್ನು ವ್ಯಥ೯ ಕಳೆದುಕೊಳ್ಳಲು ಮನಸ್ಸಿಲ್ಲ ನನಗೆ.
ನಿದ್ದೆ ಬರುತ್ತಿದೆ ಮೈ-ಕೈ ನೋವು....ಛೆ,ಇನ್ನು ಈ ಗೋವಿ೦ದಮೂತಿ೯ಯ
ಜೊತೆಗೆ outing ಗೆ ಹೋಗಬಾರದು.ಅವನ ಸಹವಾಸವೇ ಸಾಕು ಇನ್ನ.ಅವನೆ೦ದೂ
ನನಗೆ ಬೇಕಾದದ್ದು ಕೊಡಲಾರ.
ನಾಳೆ ಬಾಸ್ ಗೆ ಕಳೆದ ತಿ೦ಗಳು accounts ಒಪ್ಪಿಸಬೇಕು. ಆಫೀಸ್ ಬಿಟ್ಟ ಮೇಲೆ
ಸ೦ಜೆ ಮನೆಗೆ ಬಾ ಅ೦ದಿದ್ದರು ನಿನ್ನೆ. ಯಾಕೆ ಬರಲಿಲ್ಲ ಅ೦ತ ಕೇಳಬಹುದು ನಾಳೆ.
ಹೇಳಿಬಿಡುತ್ತೇನೆ ಸ್ಪಷ್ಟ್ ವಾಗಿ-ನಿಮ್ಮ ಹೆ೦ಡತಿ ಊರಿಗೆ ಹೋದಾಗ ಇನ್ನು ನಿಮ್ಮ
ಮನೆಗೆ ಬರುವುದಿಲ್ಲ ಎ೦ದು.ಇವರಿಗೆ ತಮ್ಮ ಆ ಟಿ. ಬಿ. ಹೆ೦ಡತಿ ಬುಖಾ೯
ಹಾಕಿಕೊ೦ಡು ಏಳೊ ಮಕ್ಕಳನ್ನು ಕಟ್ಟಿಕೊ೦ಡು ತವರಿಗೆ ಹೋದಾಗಲೆಲ್ಲ ಆಫೀಸಿನ
ಕೆಲಸಕ್ಕಾಗಿ ನನಗೆ ಮನೆಗೆ ಬಾ ಅ೦ತ ಹೇಳುವ ಹುಕಿ ಬರುತ್ತದೆ.ಅಯೋ ,ಅವರ ಆ
ಗಡ್ಡ, ಉದ್ದನ್ನ ಟೋಪಿ,ಮಾತಿಗೊಮ್ಮೆ 'ಅಲ್ಲಾ ಕೆ ಕಸಮ್' ಪಲ್ಲವಿ .ಈ ಯಾವುದೂ
ನಾನು like ಮಾಡುವುದಿಲ್ಲ. ಆ ಪುಷ್ಪಾ ಕುಲಕಣಿ೯ ಹೇಗೆ ಸಹಿಸುತ್ತಾಳೋ ? ಟೈಪ್
ಎಲ್ಲಾ ಅವರ ಮನೆಯಲ್ಲಿಯೇ ಕೂತು ಮಾಡುತ್ತಾಳೆ.
ನನಗೆ ಆಗುವುದಿಲ್ಲ ಎ೦ದು ಹೇಳಿಬಿಡುತ್ತೇನೆ ನಾಳೆ. ಮೆಮೊ ಕಳಿಸಿದರೆ ಕಳಿಸಲಿ.
ಕೆಲಸದಿಂದಲೂ ತೆಗೆದುಬಿಡಲಿ ಬೇಕಾದರೆ. 'ನಿನಗ ಬೇಕು ಅನಿಸಿದಾಗ ಬಂದುಬಿಡು.
ನನ್ನ ಎಸ್ಟೇಟು ನೋಡಿಕೋ೦ಡು ಇದ್ದುಬಿಡು. ನನಗರೆ ಬ್ಯಾರೆ
ಯಾರಿದ್ದಾರ?'-ಅ೦ದರು ಶ೦ಕರಗಡರು ಮೊನ್ನೆ.ದೇವೂರು ಸಣ್ಣ ಹಳ್ಳಿಯಾದರೂ
ಅಡ್ಡಿಯಿಲ್ಲಿ. ಈ ಬಾಸ್ ನ 'ಅಲ್ಲಾಕೆ ಕಸಮ್' ನಾನು ತಾಳಲಾರೆ....

೨೮ ಜುಲೈ, ೧೯೫೮

ಬೆಸರ.....ಬೇಸರ ಈ ಬಾಸ್ ಬಹಳ ಕಾಡುತ್ತಿದ್ದಾನೆ. ಇವತ್ತು ಸಂಜೆ ಆ ಎಲ್ಲಾ
accounts ಬರೆದು ಮುಗಿಸುವ ತನಕ ನನ್ನ ಭುಜದ ಮೇಲಿನ ಕೈ ತೆಗೆಯಲೇ ಇಲ್ಲ.
ಮುದುಕನಾದರೂ ಇಷ್ಟು ಚಪಲ ಅವನಿಗೆ. ಚಪಲ-ಹ್ಞಾ, ಬರೇ ಚಪಲ. ಅದಕ್ಕಿಂತ