ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೭೬
ನಡೆದದ್ದೇ ದಾರಿ

-ಥೂ, ಕೆಟ್ಟ ಕನಸು.ಎಲ್ಲ ಹರಿದುಕೊಂಡು ಚೆಲ್ಲಿಕೊಟ್ಟು ಬಿಟ್ಟುಬಿಟ್ಟು ಹೇಗೆ
ಇಷ್ಟು ದೂರ ಬಂದೆ, ಹೇಗೆ ದಿನ ಕಳೆದೆ, ಹೇಗೆ ಹೊಸ ಮನುಷ್ಯಳಾದೆ- ಈ ಎಲ್ಲ
ಎಂದಾದರೂ ಮರೆತೇನೇ?
ಲಗ್ನವಂತೆ ಲಗ್ನ. ಮತ್ತೊಂದು ಪಶುವಿನ ಕೂಡ. ಛಿ...
'ಎಲ್ಲಾ ಗಂಡಸ್ರೂ ಕೆಟ್ಟ ವರಿರೋದಿಲ್ಲ ಲೀಲಾ, ನೀ ಸಣ್ಣ ಹುಡುಗಿ,
ಒಬ್ಬಾಕೀನೇ ಇರಬಾರದು. ಮತ್ತ ಬ್ಯಾರೆ ಲಗ್ನ ಆಗು .ನೀ ಹ ಆಂದರ ನಾ ಅದರ
ವ್ಯವಸ್ಥಾ ಮಾಡ್ತೀನಿ '-ಆನ್ನುತ್ತಾರೆ ಶಂಕರಗೌಡರು.
ಹೌದು. ಶಂಕರಗೌಡರಂಥ ಒಳ್ಳೆಯ ಗಂಡಸರೂ ಇರುತ್ತಾರೆಂದು ನನಗೆ
ಗೊತ್ತು. ಎಂತಹ ಮನುಷ್ಯ! ಮಾಡಿಕೊಂಡ ಹೆಂಡತಿಗೆ ಮದುವೆಯಾಗಿ ಇಪ್ಪತ್ತೈದು
ವರ್ಷಗಳಾದರೂ ಮಕ್ಕಳಾಗದೇ ಇದ್ದರೂ, ಸ್ವಲ್ಪವೂ ಬೇಸರಿಸದೆ ನಿಷ್ಠೆಯಿಂದಿರುವ
ಮನುಷ್ಯ.ಯಾರು ಏನು ಕೇಳಿದರೂ ಇಲ್ಲ ಅಂದವರಲ್ಲ . ಎಂತಹ ಮನುಸ್ಸು!ಅವರ
ಪ್ರೀತಿ-ಅನುಕಂಪ ಎಂದೋ ಸತ್ತುಹೋದ ಆಪ್ಪನ ನೆನಪು ತರುತ್ತದೆ...
ಆದರೆ ಹಾಗೆಂದು ನಾನು ಆವರ ಉಪದೇಶದಂತೆ ಮತ್ತೆ ಮದುವೆಯಾಗಲಿಕ್ಕೆ
ಹೇಗೆ ಶಕ್ಯವಿದೆ? ಒಮ್ಮೆ ಬಿದ್ದು ಎದ್ದ ಬಾವಿಯಲ್ಲೇ ಮತ್ತೆ ಬೀಳಲೊಲ್ಲೆ ನಾನು.
-ಹಾಗಾದರೆ ಮುನ್ನಿ ? ಎಷ್ಟು ಮುದ್ದು ಮಗು. ನನಗೆ ಬೇಕು ಅಂಥ ಒಂದು
ಮಗು. ಬರೇ ಮಗು. ಯಾರಿಂದಲಾದರೂ ಸರಿಯೆ. ಹೇಗಾದರೂ ಸರಿಯೆ. ಆದರೆ
ಹೇಗೆ?
ಮಧ್ಯಾಹ್ನ ಆಫೀಸಿನಲ್ಲಿ ಲೆಕ್ಕ ಬರೆಯುತ್ತಾ ಇದನ್ನೇ ಯೋಚಿಸುತ್ತಿದ್ದಾಗ
ಎದುರಿನ ಟೇಬಲಿಗೆ ಕೂತಿದ್ದ ವಿಲಿಯಮ್ಸ್ ಕಾಣಿಸಿದ. ಇನ್ನು ವಿಲಿಯಮ್ಸ್ ನನ್ನು
ನೋಡಿ ಉಪಯೋಗವಿಲ್ಲ. ಮೊನ್ನ ಸ್ಪಷ್ಟ ಹೇಳಿಬಿಟ್ಟಿದ್ದಾನೆ- ಇನ್ನು ನನ್ನ
ಭೆಟ್ಟಿಯಾಗುವುದಿಲ್ಲ ಅಂತ. ಹಾಗೇನಾದರೂ ಭೆಟ್ಟಿಯಾದರೆ ಅವನ ದಪ್ಪ ಹೊಟ್ಟೆಯ
ಆಂಟಿ ತನ್ನ ಆಸ್ತಿಯಲ್ಲಿ ಚಿಕ್ಕಾಸೂ ಅವನಿಗೆ ಕೊಡುವುದಿಲ್ಲ ಅಂತ. ಅಷ್ಟೇ ಅಲ್ಲ,ಆ
ಆಂಟಿಯ ಮಗಳು ತೆಳು ನಡುವಿನ ಇವನ ಕಸಿನ್ ಇವನೊಂದಿಗಿನ ತನ್ನ
engagement ಸಹ break ಮಾಡಿಕೊಳ್ಳುತ್ತಾಳೆ ಅಂತ. ಇಷ್ಟೆಲ್ಲ ಲುಕ್ಸಾನು
ಎದುರಿಸಿ ಅವನೇಕೆ ನನ್ನನ್ನು ಪ್ರತಿ ರವಿವಾರ ಪಿಕ್ಚರಿಗೆ ಕರೆದೊಯ್ಯಬೇಕು?
ನನ್ನೊಂದಿಗೆ ರಾತ್ರಿ ಕಳೆಯಬೇಕು? ಮತ್ತು ಹೇಗೆ?-"ನಿನ್ನ ಕೂಡ ಕಳೆದ ಸುಖದ
ದಿನಗಳನ್ನ ನಾನೆಂದೂ ಮರೆಯೋದಿಲ್ಲ ಲಿಲಿ, ದಿನಾ ನಿನಗಾಗಿ-ನಿನ್ನ ಒಳ್ಳೆಯದಕ್ಕಾಗಿ
ನಾನು ಜೀಸಸ್ ನಲ್ಲಿ ಪ್ರಾರ್ಥನೆ ಮಾಡುವೆ.God bless you"-ಅಂತ ಹೇಳಿ
ನನ್ನ ಕೈ ಅದುಮಿ ತುಂಬ ಚಿಂತಾಜನಕ ರೀತಿಯಲ್ಲಿ ತಲೆ ಕೊಡವಿ ಹೊರಟು ಹೋಗಿದ್ದ