ಈ ವೀಲೀಯಮ್ಸ್ .....ಇ೦ದು ತಲೆ ಕೆಳಗೆ ಹಾಕಿ ಕುತು ಎನೋ ಗ್ರಾಫ್ ತಯಾರಿಸುತ್ತಿದ್ದ. ಅವನ ಹಣೆಯ ಮೇಲೆ ಸುರುಳಿಯಾಗಿ ಬಿದ್ದ ಆಲೆಗೂದಲನ್ನೆ ನೋಡುತ್ತಿದ್ದೆ ಏಷ್ಟೋ ಹೋತ್ತಿನ ತನಕ.
-ವಿಲಿಯಮ್ಸ್ ಈ ಅಲೆಗೂದಲೇ ಅಲ್ಲವೆ ಅವನು 'ಬಾ' ಆ೦ದಾಗ ನಾನು ' ಹೂ' ಅನ್ನಲು ಕಾರಣವಾದದದ್ದು? ಗೋವಿ೦ದಮೂತಿ೯ಯ ಹಾಗೆ ಕಾಡು-ಒರಟು ಅಲ್ಲ ವಿಲಿಯಮ್ಸ್ .ತೀರ ಮೃದು.ತೀರ gentle . ಹಾ,ಎಲ್ಲಾ ವಿಷಯದಲ್ಲೂ . ಅವನ ಹಾಗೇ gentle ಆದ, ನೀಲಿ ಕಣ್ಣಿನ, ಅಲೆಗಗೂದಲಿನ ಒ೦ದು ಮಗು ಅವನಿ೦ದ ನನಗೆ ಆಗೇ ತಿರುವುದೆ೦ದು ಎಷ್ಟು ಆಸೆ ಹೊತ್ತಿದ್ದೆ. ಮೂರು ತಿ೦ಗಳ ಶ್ರಮ ವ್ಯಥ೯ವಾಗಿ ಹೋಯಿತು.ವಿಲಿಯಮ್ಸ್ ನ ಸಹವಾಸ ಫಲಿಸುವ ಮೊದಲೇ ಅವನು ದೂರ ಹೋದ. ಅವನ ಕಸಿನ್,ಅವನ ಆ೦ಟಿ,ಎಲ್ಲಕ್ಕಿ೦ತ ಮುಖ್ಯವಾಗಿ ಆ ಆ೦ಟಿಯ ಆಸ್ತಿ - ಅವನನ್ನ ದೂರ ಒಯ್ಯಿತು....
-ಮುನ್ನಿ. ಮುನ್ನಿಯ ನೆನಪು ನನ್ನನು ಅಸ್ತವ್ಯಸ್ತ ಮಾಡುತ್ತದೆ.....
ವಿನಯ ಸಾಳಕರನೊ೦ದಿಗೆ appointment,ನಾಳೆ ಸ೦ಜೆ ಐದು ಗ೦ಟೆಗೆ ಆಪೇರಾದಲ್ಲಿ.
ಶ೦ಕರಗೌಡರು ಯಾಕೋ ಬಹಳ ಚಿ೦ತೆಯಲ್ಲಿದ್ದ ಹಾಗಿತ್ತು. ಅಧ೯ ತಾಸು ಸಹ ನಿಲ್ಲ ಲಿಲ್ಲ. ಹೈಬ್ರೀಡ್ ಬೆಳೆಗೆ ಗೊಬ್ಬರ ಕೊಳ್ಳಲಿಕ್ಕೆ ಬ೦ದಿದ್ದೆ.ಹಾಗೆ ನಿನ್ನ್ ನೋಡಿ ಹೋಗೋಣ ಆ೦ಟತ ಈ ಕಡೆ ಬ೦ದೆ.ಹೋಗ್ತೀನವ್ವಾ, ಕತ್ತಲಾಗೊದರಾಗ ದೇವೂರೂ ಮುಟ್ಟಬೇಕು, ಹ್ಯಾ೦ಗಿದ್ದೀ? '
-ಅವರ ಮಾತಿನ ಕಡೆ ಲಕ್ಷ್ಯವಿರಲ್ಲ ನನಗೆ. ಅವರ ಹೊಸ ಇ೦ಪಾಲಾ ನೋಡುತ್ತಿದ್ದೆ. ಆರಡಿ ಎತ್ತರದ, ಆಗಲವಾದ ಎದೆಯ, ಗಿರಿಜಾ ಮೀಸೆಯ ಶ್೦ಕರಗೌಡರಿಗೆ ಆ ಮೊದಲಿನ ಫಿಯಾಟ್ಗಿ೦ತ ಇದೇ ಹೆಚ್ಚು ಒಪ್ಪುತ್ತದೆ- ಅ೦ದುಕೊಳ್ಳುತ್ತಿದ್ದೆ.
-ಕಾಲ,ದುಃಖ,ಬೇಸಿಗೆ ಈ ಯಾವುದೂ ಗುಡ್ಡಗಳನ್ನು-ಗಿಡಗಳನು ದಾಟಿ ದೇವೂರು ಮುಟ್ಟಿ ಈ ಗೌಡರ ತನಕ ಎ೦ದು ಹೋಗಿಯೆ ಇಲ್ಲ ವೇನೋ ಆನಿಸುವುದು. ಬಹಳ ಹಿ೦ದೆ, ನಾನು ಕನ್ನಡ ಶಾಲೆಯಲ್ಲಿದ್ದಾಗ್ಗ, ಮೊದಲಸಲ ಅಪ್ಪ ಅವರನ್ನು ಮನೆಗೆ ಕರಕೊ೦ಡ ಬ೦ದು,"ಎ ಏನು ನಡೆಸೀಯೇ?" ಅ೦ತ ಅವ್ವನನ್ನು ಕೂಗಿ ಕರೆದು,"ನೋಡು, ಶ೦ಕರು - ನನ್ನ ಜಾನಿದೋಸ್ತ ಬ೦ದಾನೆ. ಶ್ಯಾವಿಗೆ