ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೭೮
ನಡೆದದ್ದೇ ದಾರಿ

ಹಾಕು.'-ಅಂತ ಹೇಳಿದಾಗ, ನನ್ನನ್ನ ಆ ಆಜಾನುಬಾಹು ಹೆಗಲಮೇಲೆ ಹೊತ್ತು
ಮೂರು ಸುತ್ತು ಕುಣಿದಾಗ, ಹೇಗಿದ್ದರೋ ಇನ್ನೂ ಹಾಗೆಯೇ ಇದ್ದಾರೆ. ಅವರ
ಜೇವನದಲ್ಲಿ ಎಂದೂ ಏನೂ ಬದಲಾಗಿಲ್ಲ. ಆ ಅರ್ಧಾಂಗವಾಯುವಿನಿಂದ ಹಾಸಿಗೆ
ಹಿಡಿದ ಹೆಂಡತಿ,ಮನೆಯಲ್ಲಿ ನಿತ್ಯದಾಸೋಹ, ನೂರಾಎಂಟು ಕಮಿಟಿಗಳ
ಮೆಂಬರಶಿಪ್ಪು, ತೋಟಕ್ಕೆ ಹೊಸ ಬಾವಿ, ಹೊಲಕ್ಕೆ ಟ್ರಾಕ್ಟರ್, ಆ ಜೋಡುನಳಿಯ
ಬಂದೂಕು-ಎಲ್ಲ ಹಾಗೇ ಇವೆ.ಅದರೊಂದಿಗೆ ಈ ಗೌಡರ ಎತ್ತರ, ಆಗಲ, ಮೀಸೆಯ
ಹುರಿ ಸಹ-ಹಾಗೇ ಇವೆ.
-'ನಿನ್ನ ಜೀವನ ಸುಖೀ ಆಗಲಿಕ್ಕೆ ನನ್ನ ಜೀವಾ ಕೊಟ್ಟೇನು'!ಅಂತ ಎಷ್ಟು
ಸಲ ಹೇಳಿಲ್ಲ ಈ ಗೌಡರು....
ಅಂಥ ಮನುಷ್ಯನಿಗೆ ಏನು ಚಿಂತೆಯೋ.ಇಂದು ಮೊದಲ ಸಹ ಆ ದೊಡ್ಡ
ಹಣೆಯ ಮೇಲೆ ನಿರಿಗೆ ಕಂಡೆ. ಮಾತಾಡದೆ ಆತ ಸುಮ್ಮನೆ ಕೂತಿದ್ದಾಗ ಓಡಿಹೋಗಿ
ಅವರ ತಲೆಯನ್ನೆ ನನ್ನ ಎದೆಯೊಳಗೆ ಬಚ್ಚಿಟ್ಟುಕೊಂಡು ಮಗುವನ್ನು ರಮಿಸುವಂತೆ
ರಮಿಸಾಬೇಕು ಅನ್ನಿಸಿತು.
ಧೂಳೆಬ್ಬಿಸುತ್ತ ಆ ಇಂಪಾಲಾ ಕಣ್ಮರೆಯಾದಾಗ ಕೋಣೆಯ ಕಡೆ ತಿರುಗಿಬರುತ್ತ
ದಾರಿಯೊಳಗೆ ಮತ್ತೆ ಮುನ್ನಿ-'ಆಂಟಿ, ಚಾಕಲೇಟು ತಂದಿಲ್ಲ ?'
ಈ ಮುನ್ನಯನ್ನೇ kidnap ಮಾಡಿಕೂಂಡು ಹೋದರೆ....

೧೪ ಆಗಸ್ಟ್ ೧೯೫೮

ಎಷ್ಟು ದಿನಗಳ ನಂತರ ಇಂದು ವಿನಯ ಸಾಳಕರನ ಭೆಟ್ಟಿ....ದುಃಖಾಂತ
ಸಿನೇಮದ ಹೀರೋನ ಹಾಗೆ ಗದ್ಗದಿತ ಧ್ವನಿಯಲ್ಲಿ ನನ್ನನ್ನು ಬೈಯ್ದು, ಶಪಿಸಿ ಅವನು
ಹೂರಟು ಹೋದ ಮಾತಿಗೆ ಆರು ತಿಂಗಳು ಕಳೆದುಹೋಗಿತ್ತು.
'ನಿನ್ನನ್ನ ದೇವಿಯ ಹಾಗೆ ಪೂಜಿಸಿದ್ದೇ ಲಿಲಿ,ಎಷ್ಟೋ ಜನ್ಮಗಳಿಂದ ನನ್ನ
ಅಂತರಾತ್ಮ ಹುಡುಕುತ್ತಿದ್ದ ವ್ಯಕ್ತಿ ನೀನೇ ಅಂತ ನಂಬಿದ್ದೆ. ನಿನ್ನ ಬಿಟ್ಟು ನನಗೆ ಜೀವನವೇ
ಇಲ್ಲಿ ಅಂತ ತಿಳಿದಿದ್ದೆ,'-ವಿನಯ ಕೆಂಪುಕಣ್ಣು ಮಾಡಿಕೂಂಡು ಹೇಳಿದ್ದ,'ನೀನು ನನ್ನ
ಹೃದಯ ಹೊಸಕಿ ಹಾಕಿದಿ. ನನ್ನ ಕನಸುಗಳನ್ನು ಮಣ್ಣು ಮುಕ್ಕಿಸಿದಿ.ನನ್ನ ಜೀವನಕ್ಕೆ
ಬೆಂಕಿ ಹಚ್ಚಿದಿ...'
-ನಾನು ಸುಮ್ಮನೇ ಇದ್ದೆ. ವಿನಯ ಹೇಳುತ್ತಿದ್ದುದರಲ್ಲಿ ಸತ್ಯಾಂಶ
ಇತ್ತೇನೋ.ಎಷ್ಟು ಸಲ ಅವನು ನನ್ನ ಕಾಲ ಬಳಿ ಕೂತು ನನ್ನ ಪಾದಗಳನ್ನು
ಚುಂಬಿಸಿದ್ದುಂಟು.'ನೀನು ನನ್ನ ಸವಸ್ವ' ಅಂದಿದ್ದುಂಟು.ಕಾಲೇಜು ಬಿಟ್ಟೊಡನೆ