ಅಂತೂ-
ಅಂತೂ ಒಮ್ಮೆ ಎಲ್ಲ ಕೆಲಸ ಮುಗಿಸಿ ಎಲ್ಲರನ್ನೂ ಸಾಗಹಾಕಿ ರೂಮಿನ
ಬಾಗಿಲು ಹಾಕಿಕೊಂಡು ಟೇಬಲಿನ ಸಮೀಪ ಕುರ್ಚಿ ಸರಿಸಿಕೊಂಡು, ಇಂದು ಬರದೇ
ಬಿಡಬೇಕು ಒಂದು ಕವನ ಎಂದುಕೊಂಡು, ಪೆನ್ನು ಎದುರಿಗೆ ಧುತ್ತೆಂದು
ಬಂದು ನಿಂತಿತು, -ಆ ಹೆಣ.
ಅದು ಹೀಗೆ ಎದುರಿಗೇ ನಿಂತಿರುವಾಗ ಬರೆಯುವುದಾದರೂ ಹೇಗೆ? ಅದನ್ನು
ಅತ್ತ ದೂರ ಕಳಿಸಬೇಕು. ನಂತರ ಬರೆಯಬೇಕು. ಇಷ್ಟು ದಿನ ಕೇವಲ ರಾತ್ರಿ ಮಾತ್ರ
ಭೆಟ್ಟಿಯಾಗುತ್ತಿದ್ದ ಈ ಹೆಣ ಇಂದು ಹಗಲುಹೊತ್ತಿನಲ್ಲೇ ಬಂದಿದೆ- ಅದೂ ಕವನ
ಬರೆಯಬೇಕೆಂದು ಕೂತಾಗ; ತನ್ನನ್ನು ನಿರ್ಲಕ್ಷಿಸಿ ಹೇಗೆ ಏನನ್ನು ಬರೆಯುತ್ತೀ
ನೋಡೋಣ ಎಂದು ಸವಾಲು ಹಾಕುವಂತೆ. ಇದನ್ನು ನಿರ್ಲಕ್ಷಿಸಿದರೆ ನಾನು ಏನನ್ನೂ
ಬರೆಯಲಾರೆನೆ? ಯಾಕೆ? ಹೇಳಿಖಕೇಳಿ ಇದೊಂದು ಹೆಣ. ಬರೆಯಲೇಬೇಕೆಂಬ ನನ್ನ
ಸಂಕಲ್ಪಕ್ಕೆ ಅಡ್ಡಿಯಾಗುವಷ್ಟು ಧೈರ್ಯವೇ ಇದಕ್ಕೆ?
ಏ, ನಡೆಯಾಚೆ. ಇವತ್ತು ನಾನು ಎಂಥದೇ ಆಗಲೊಲ್ಲದು, ಕವನದ ಹಾಗೆ
ಕಾಣುವಂಥದನ್ನೇನಾದರೂ ಬರೆದು ನಾಳೆ ಮುಂಜಾನೆ ಆ ಸಂಪಾದಕನಿಗೆ ಪೋಸ್ಟ
ಮಾಡಬೇಕು. ನೀನು ರಾತ್ರಿ ಬಾ ಬೇಕಾದರೆ, ಮಾತಾಡೋಣಂತ. ನೀನು ಹೀಗೆ ನಿಂತಿದ್ದರೆ
ನನಗೇನು ಮಣ್ಣೂ ಹೊಳೆಯುವುದಿಲ್ಲ ಹೋಗು.
-ಊಹ್ಞೂ, ಅದು ಮಿಸುಕಿದರೆ ಆಣೆ.
ಬಿಡಲಿ. ನಿಂತಿರಲಿ. ನನಗೇನು? ನಾನು ಅತ್ತ ನೋಡುವುದೇ ಇಲ್ಲ.
ನಿನ್ನೆ ಸಂಜೆ ಮತ್ತೆ ಬಂದಿದ್ದ ಆ ಸಂಪಾದಕ, ಅವನು ಕೊಟ್ಟ ತಿಂಗಳಿನ ಅವಧಿ
ಮುಗಿದು ವಾರವಾಯಿತೆಂದು ನೆನಪಿಸಲು. ಹಾಳಾಗಿ ಹೋಗೆಂದು
ಹೇಳಿಕಳಿಸಬಹುದಿತ್ತು. ಆದರೆ ಗೆಳತಿ ಶಶಿಯ ಗಂಡ ಅವನು. ಹೊಸದೊಂದು ಪತ್ರಿಕೆ
ಸುರು ಮಾಡಿದ್ದ. 'ಮೊದಲ ಸಂಚಿಕೆಯಲ್ಲಿ ನಿಮ್ಮದೊಂದು ಕವನ ಬೇಕೇಬೇಕು'
-ಎಂದು ಆಗ್ರಹಪೂರ್ವಕ ಕೇಳಿಕೊಂಡಿದ್ದ.
ಕವನ... ಹ್ಹ, ನಾನು ಬರೆಯುವುದನ್ನು ಬಿಟ್ಟು ಯುಗವಾಯಿತೆಂದು
ಗೊತ್ತಿರಲಿಲ್ಲ ಅವನಿಗೆ.
ಪುಟ:ನಡೆದದ್ದೇ ದಾರಿ.pdf/೯೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೮೩
ಹೆಣ