ಇನ್ನೂ ಅವನೆದೆಯ ಮೇಲಿದ್ದ ಸ್ಟೆಥೋಸ್ಕೋಪನೂಂದಿಗೆ ಆಟವಾಡುತ್ತ
ಉತ್ತರಿಸಿದ್ದೆ.'ಶ್ರೀ,ಇವತ್ತ ಶಶಿ ಬಂದಿದ್ದಳು. ಆಕೀ ಗಂಡ ತನ್ನ ಪತ್ರಿಕಾಕ್ಕ
ನನ್ನದೊಂದು ಕವಿತಾ ಬೇಕೂಂತ ಕೇಳ್ಯಾನ.'
'ಓಹೋ ಹಿಂಗೇನು? ಕವಿತಾದ ಮೂಡಿನ್ಯಾಗ ಇದ್ದೀ ಅಂಧಾಂಗಾತು. ನನಗೇನ
ಇವತ್ತ ಚಹಾಗಿಹಾ ಸಿಗುತದೋ ಇಲ್ಲೋ?'
ಚಹಾ, ಊಟ, ಪೇಶಂಟ್ಸ-ಇಷ್ಟನ್ನು ಬಿಟ್ಟರೆ ಬೇರೇನನ್ನೂ ವಿಚಾರಿಸಲಾಗದ
ಅವನ ಬಗ್ಗೆ ಕೋಪ ಬಂದಿತು. ತೀರ materialistic,ತೀರ prosaic ಆಗಿದ್ದಾನೆ
ಈ ಗಂಡ-ಅನ್ನಿಸಿ ಜುಗುಪ್ಸೆಯಾಯಿತು.
'ಕವಿತಾ-ಗಿವಿತಾ ಬರಿಯೂದಿದ್ರ ಮಧ್ಯಾಹ್ನದಾಗ ಬರೀ ನೀನು. ನಾನೂ
ಡಿಸ್ಪೆನ್ಸರಿಗೆ ಹೋಗಿರ್ತೀನಿ. ನಿನಗ ಡಿಸ್ಟಬರ್ಹ ಮಾಡ್ಲಿಕ್ಕೆ ಇರೊದಿಲ್ಲ. ನಾ
ಮನ್ಯಾಗಿದ್ದಾಗ ಮಾತ್ರ ಅಂಥಾದೆಲ್ಲಾ ಉಸಾಬರಿ ಮಾಡಬ್ಯಾಡ.'
'ಉಸಾಬರಿ'ಯಂತೆ.ಸ್ವಾರ್ಥಿ ಎಂದು ಕೂಗಬೇಕೆನಿಸಿತು.ಅವನ ಅಜ್ಞಾನನಕ್ಕಾಗಿ
ಕನಿಕರವಾಯಿತು.
ಕವನದ ಬಗೆಗೇ ಯೋಚಿಸುತ್ತಿದ್ದೆ ಅಂದು ಸಂಜೆ-ರಾತ್ರಿಯಿಡೀ. ಮಧ್ಯ ರಾತ್ರಿ
ಯಾರೋ ಅಲುಗಾಡಿಸಿ ಎಬ್ಬಿಸಿದಂತಾಯಿತು.ಕಣ್ಣು ತೆರೆಯಲೂ ಆಗದಷ್ಟು ನಿದ್ರೆ.
ಆದರೂ,'ಏಳು-ಏಳು'ಎಂದದ್ದು ಕೇಳಿಸಿ ಎಚ್ಚರಾಯಿತು.ಯಾರು ನಿದ್ರೆ
ಕೆಡಿಸಿದವರೆಂದು ಸಿಟ್ಟಾಗಿ ನೋಡಿದ್ದೆ-ಮಂಚದ ಪಕ್ಕದಲ್ಲಿ ಉದ್ದಕ್ಕೆ ನಿಂತಿತ್ತು,
-ಇದೇ ಹೆಣ
ಎಲ್ಲೋ ಭೆಟ್ಟಿಯಾದ ನೆನಪು. ಏನೋ ಆತ್ಮೀಯಭಾವ ಅನ್ನಿಸಿತು. ಆದರೂ
ಯಾಕೋ ಅದರ ಗುರುತು ನನಗೆ ಹತ್ತಿದ್ದು ಅದಕ್ಕೆ ತಿಳೀಯಬಾರದು ಅನ್ನಿಸಿತು.
ಮಲಗಿದ್ದ ಹಾಗೆಯೇ ಕೇಳಿದೆ,
'ಯಾರು ನೀನು?'
'ನಾನು ಹೆಣ.'
-ಹೌದು.ಗೊತ್ತಾಗುತ್ತಿದೆ.ಅದು ಏನು,ಎಂಥದು ಎಂದೆಲ್ಲ
ಗೊತ್ತಾಗುತ್ತಿದೆ. ಆದರೆ ಈ ಗೊತ್ತಾಗುವಿಕೆ ತೀವ್ರವಾಗಿ ಬೇಡವಾಗುತ್ತಿದೆ. ಮತ್ತೆ
ಕೇಳಿದೆ.
'ಎಲ್ಲಿದ್ದಿ ಇಷ್ಟು ದಿನ?'
'ಇಲ್ಲೇ ಇದ್ದೆ'
'ಮತ್ತೇಕೆ ಒಮ್ಮೆಯೂ ಕಾಣಲಿಲ್ಲ?'
ಪುಟ:ನಡೆದದ್ದೇ ದಾರಿ.pdf/೯೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ದಾರಿ/ಹೆಣ
೮೫