ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ದಾರಿ / ಹೆಣ
೮೯

'ಏನು ಮೊಡುತ್ತಿದ್ದೀ.'
ಯಾಕೋ ಆ ಹೆಣದ idle curiosity ಬಗ್ಗೆ ವಿಪರೀತ ಸಿಟ್ಟು ಬಂದಿತು.
ಮಲಗಿದ್ದ ಶ್ರೀಗೆ ಎಚ್ಚರವಾದೀತೆಂದು ಹವುರಗೆ ಆದರೂ ಕಟುವಾಗಿ ಕೇಳಿದೆ.
'ನೀ ಹಾಳಾಗಿ ಹೋಗಬಾರದು ? ಯಾಕ ಹಿಂಗ ಕಾಡಲಿಕ್ಹತ್ತೀ' ? ಯಾವ
ಕೆಲಸಾನೂ ಮಾಡಿಕೊಡವಲ್ಲಿ. ಹೊತ್ತಿಲ್ಲದ ಹೊತ್ತಿನ್ಯಾಗ ಬಂದು ಹಿಂಗ್ಯಾಕ ಡಿಸ್ಚಬ೯
ಮಾಡಲಿಕ್ಹತ್ತೀ ?'
'ಕವನ ಬರೀಬೇಕು ಅನ್ನುತ್ತಿದ್ದೀ-'
'ನೀ ಆತ್ಲಾಗ ಹಾಳಾಗಿ ಹೋದರ ಬರದೇನು.'
'ಇಲ್ಲ, ನಾ ಇಷ್ವ ದಿನಾ ಹಾಳಾಗೇ ಹೋಗಿದ್ದೆ. ಏನು ಬರೆದಿ ? ನಿನ್ನ
ಸುದ್ಧಿ ಗೇ ಬಂದಿದ್ದಿಲ್ಲ ನಾನು. ಆದರ ಈಗ ನೀ ಕವಿತಾ ಬರೀಬೇಕು ಆಂತೀಯಂತ
ಬಂದೀನಿ. ನೀ ಬರೀಬೇಕಾದರ ನಾ ಜೀವಂತ ಆಗಬೇಕು.'
-ಹಾಡಿದ್ದೇಹಾಡು. ಹೆಣವಾಗಿದ್ದೇ ಇಷ್ಟು ಕಾಡುವ ಇದು ಇನ್ನು ಬದುಕಿದರೆ
ನಾನೇ ಹೆಣವಾಗುವಷ್ಟು ಕಾಡೀತು. ಇದರ ಮಾತು ಕೇಳುತ್ತಿದ್ದರೆ ಏನೋ ಸೆಳೆತ,
ಏನೋ ಕಾತರ ಏನೋ ಧುಂಧಿ....
'ಇವತ್ತ ಬಾ ನನ್ನ ಜೊತಿಗೆ, ನಮ್ಮೂರಿಗೆ ಹೋಗೋಣ.'
'....' -ನಾನು ಮೌನವಾಗಿದ್ದೇ .
'ನಡೀ ಹೋಗೋಣ. ಬರೀಯಲ್ಗ ಹಂಗಾರ....?'
'..........'
'ಏಳು. ಬೆಳಗಾಗೊದರಾಗ ತಿರಿಗಿ ಬಂದಬಿಡೂಣಂತ: -ಹೆಣ ನನ್ನ ಉತ್ತರಕ್ಕೆ
ಕಾಯದೆ ಹೊರಟು ನಿಂತಿತು.
ನಾನು-
-ಸದ್ದಾಗದ ಹಾಗೆ ಹೆಜ್ಜೆಯಿಡುತ್ತ ಹಿಂಬಾಲಿಸಿದೆ....
-ದೂರ ದೂರ.... ಗಾಳಿಯಾಗಿ. ಮಿಂಚಾಗಿ. ಸಿಡಿಲಾಗಿ, ಬೆಳಕಾಗಿ.
ಕತ್ತಲೆಯಾಗಿ. ಹೊಗೆಯಾಗಿ, ಹಾಗೇ ದೂರ..
-ದಾರಿಯಲ್ಲೆಲ್ಲ ಎಂಥಂಥವೋ ಗಿಡಗಳು. ಬಂಡೆಗಳು. ಮಡುಗಟ್ಟಿದ
ಕೊಳಚೆ ನೀರು. ತಾರುಕಂಬಗಳಿಗೆ ಜ್ದ್ದಿಜೋತುಬಿದ್ದಿದ್ದ ತೊಗಲುಚಾವಲಿಗಳು ..... ಎಲ್ಲಾ,
ಎಲ್ಲೋ ಕಂಡ ನೆನಪು. ಮಸುಮೆಸುಕಾಗಿ. ಕವನದ ಒಂದೊಂದೇ ಸಾಲು
ರೂಪುಗೊಳ್ಳುತ್ತಿರುವ ಹಾಗೆ.... ಮೌನ ಭೇದಿಸಿ ಮಾತನಾಡಿತು ಹೆಣ. 'ಈ ಗುಡ್ಡಾ
ನೋಡಿದ ನೆನಪು ಇರಬೇಕಲ್ಲ ನಿನಗೆ ?'