ಪುಟ:ನಡೆದದ್ದೇ ದಾರಿ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೦

ನಡೆದದ್ದೇ ದಾರಿ

-ಹ್ಞೂ. ಬಣ್ಣ ಬಣ್ಣದ ನೆನಪು,ಕಾಮನಬಿಲ್ಲಿನಂತೆ ಮೂಡತೊಡಗಿತ್ತು....

ಬೇಡವಾಗಿದ್ದ ನೆನಪು. ಈ ಸತ್ತಂಥ ಬದುಕಿನಿಂದ ದೂರ ಆ ಜೀವಂತ ಸಾವಿನ
ದಿನಗಳೆಡೆ ಎಳೆದೊಯ್ಯತೊದಡಗಿದ್ಡ ನೆನಪು....ಹೌದು,ಇದೇ ಗುಡ್ಡದ ವಾರೆಗೆ ಆ
ಮರದ ನೆರಳಲ್ಲಿ ಆದದ್ದು,
-ಮೊದಲ ಭೆಟ್ಟಿ.
'ನಾ ಇಲ್ಲೇ ಹುಟ್ಟಿದ್ದು' -ಹೆಣ.
ಕಾಲು ಸೋಲುತ್ತಿವೆ.ಇನ್ನಿದನ್ನು ಏರುವುದಾಗದು.ತಿರುಗಿ ಹೋಗಬೇಕು.
....ಆದರೆ ಎಲ್ಲ ಮಂಜಮಂಜಾಗಿದೆ....
'ಈಗ ನಾವು ಗುಡ್ಡದ ತುದೀಗೆ ಬಂದೆವು. ಈ ಜಾಗಾ ನನಗ ಭಾಳ ಸೇರತದ.
ನಾ ಬೆಳದದ್ದು, ಕಣ್ಣು ಮುಚ್ಚಣಿಕಿ ಆಟಾ ಆಡಿದ್ದು,ಕುಡಿದು ಕುಣಿದಾಡಿದ್ದು ಎಲ್ಲಾ
ಇಲ್ಲೇ.ನಿನಗ ಗುರ್ತು ಸಿಗತದೇನು ?'
-ನನಗೆ ಗುರುತು ಸಿಗದೆ ಏನು?ನನ್ನ ಜೀವದ ಬಯಕೆಗಳು ಆರಳಿ
ಹೂವಾದದ್ದು-
ಇದೇ ಜಾಗ.
ಎತ್ತರವಾಗಿದ್ದ ಜಾಗ. ಮುಗಿಲಿಗೆ-ಮೋಡಗಳಿಗೆ ಎಷ್ಟೋಂದು ಹತ್ತಿರವಿದ್ದ ಜಾಗ !
'ಸಾವಕಾ‌‌‍‍‍ಶ ಇಳಿ.ಕಾಲು ಜಾರೀತು.ಇಲ್ಲಿಂದ ಕೆಳಗೆ ಕಾಣಿಸುವ ಆ ನದೀ ತನಕಾ
ಇರೋ ದಾರಿ ಏಕದಂ ಸ್ಲೋಪ್ ಆದ.'
-ಯಾಕಿಷ್ಟು ಕಾಳಜಿ ನನ್ನ ಬಗ್ಗೆ ಈ ಹೆಣಕ್ಕೆ?...ನಾನರಿಯೆನೇ ಈ
ದಾರಿಯನ್ನ? ನನ್ನ ಕನಸುಗಳು ನನ್ನೆದುರೇ ಹೋಮವಾಗುತ್ತಿರುವುದನ್ನು
ನೋಡುತ್ತ,ಪ್ರತಿದಿನ ಪ್ರತಿಕ್ಷಣ ನಿಧಾನವಾಗಿ ಸಾಯುತ್ತ-
-ಸವೆಸಿದ್ದ ದಾರಿ.
ಓಹ್, ಉಸಿರು ಕಟ್ಟುತ್ತಿದೆ. ಓಡಿಹೋಗಬೇಕು ಇಲ್ಲಿಂದ. ದೂರ-ದೂರ
ಹೋಗಿ ಆರಾಮವಾಗಿರಬೇಕು.ಕವನ ಬೇಡ, ಏನು ಮಣ್ಣೂ ಬೇಡ, ತಿರುಗಿ ಮನೆ
ಮುಟ್ಟಿದರೆ ಸಾಕು....ಶ್ರೀ-
'ನದಿ ಬಂತು ನೋಡು.'
-ಅನಿರೀಕ್ಷಿತವಾಗಿ ಹೆಣದ ದನಿಯಲ್ಲಿ ಮೂಡಿದ ಕಂಪನ ನನ್ನೆದೆಯಲ್ಲಿನ
ಎಲುಬುಗಳೊಳಗೆ ಎಂಥದೋ ನಡುಕ ಹುಟ್ಟಿಸಿತು. ಕನಸುಗಳ ಪೂರ್ಣತೆ
ಆಸಾಧ್ಯವೆಂಬ ಆರಿವಾದದ್ದು : ಜನ್ಮಾಂತರಗಳಿಂದ ನನ್ನ ಅತೃಪ್ತ ಆತ್ಮ ಆರಸುತ್ತಿದ್ದ.