ಪುಟ:ನನ್ನ ನಲ್ಲ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬

ನನ್ನ ನಲ್ಲ

ಹೊಳಿಬೀಳ ಹೋದೀವ | ಹೊಳಿ ಸರಿದು ಇಳಿದೀತ ಹೊಳಿ ನಮಗ ಹಾಸನೆಲವಾಯ್ತು | ತಂಗೆಮ್ಮಾ ಬ್ಯಾಗೀಯ ಬೆಂಕಿ ಬೂದ್ಯಾಯ್ತ ದರಿಹಾರ ಹೋದೀವ | ಮರಬಳ್ಳಿ ತೊಡಕೀತ ಕಮರೀಯ ಕೊಳ್ಳ ಉಡಿಯಾಯ್ತ | ತಂಗೆಮ್ಮಾ ಬೇತಾಳ ಬಾಯಿ ಮುಚ್ಚತ ಹುತ್ತಾನೆ ತಟ್ಟವ | ಹಾವಾನ ಮೆಟೀವ ಹೆಡಿ ಬಜ್ಜಿ ಮಡಿದ ಮಿಡಿನಾಗ | ತಂಗೆಮಾ ನುಂಗೀದ ವಿಷವ ಕತ ಗವಿ ಕಂಡು ಹೊಕ್ಕಿವ | ಹೆಬ್ಬುಲಿಯ ಕೆಣಕೀವ ಹುಲಿ ನಮಗ ಹೋರಿಗರುವಾಯ್ತು | ತಂಗೆಮ್ಮಾ ಮರಣಾವು ಮಟ್ಟಮರೆಯಾಯ್ತು ಹೌಹಾರಿ ಹೋದೀವ | ಹುಚ್ಚಾಗಿ ನಿಂತೀವ ಮುಂದೀನ ಹಾದಿ ಮಂಜಾನ | ತಂಗೆಮಾ ಹಿಂದೆ ಹೈರಾಣದಾಲ್ಯಾಣ ಏನಂತ ಮಾಡೂನ | ಏನಂತ ಬಿಡವೂನ ಹಿಂದಿಲ್ಲ ನಮಗ ಮುಂದಿಲ್ಲ | ತಂಗೆಮ್ಮಾ ಸವಿಯಿಲ್ಲ ಮುಂದ ಸುಖವಿಲ್ಲ ಮಾಡೀದ ಹಂಚೀಕಿ | ನೋಡಟಿಗೆ ಮುರಿದಾವ ನುಗಿಸಿದರು ಹರಣ ಹೊಗಾದ | ತಂಗೆಮಾ ತಟ್ಟಿದರು ಬೆಂಕಿ ಮುಟ್ಟಾದ ಏರೇರಿ ಹೋದೀವ | ಹಾಲ್ದಾರಿ ಹೋದೀತ ಬೆನ್ನತ್ತಿ ಬ್ಯಾಸರಾದೀತ | ತಂಗೆಮ್ಮಾ ಹಿಡಿಹಿಡಿದು ಸೋತುಬಿಟ್ಟಿವ