ಪುಟ:ನನ್ನ ಸಂಸಾರ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 18 ಕಾರ: 'ಗ್ರಹ r > # # # # #

  • * A # +

ಮಂಡಲರಿ. ರೋಹಿಣಿಯು ಸಕಲವೀದಾ ಪಾರಂಗತಳಾಗಿಯೂ ವಿವೇಕಿಯಾಗಿಯೂ ಇರುವು ದನ್ನು ಕರುಣಾಂಬೆಯು ನೋಡಿ ಅನುರೂಪನೂ, ಗುಣವಂತನೂ, ಪ್ರಾಪ್ತ ವಯಸ್ಕನೂ, ವಿದ್ಯಾವಂತನೂ ಆದ ನರಸಿಗೆ ಕೊಟ್ಟು ವಿವಾದವಂ ನೆರವೇರಿಸಬೇಕೆಂದು ಉದ್ದೇಶಿಸಿ ಈ ವಿಚಾರವನ್ನು ತನ್ನ ಸಹೋದರನಾದ ಕರುಣಾಕರನಿಗೆ ತಿಳಿಸುವುದು ಉತ್ತಮವೆಂದು ಯೋಚಿಸಿ ಸುವರ್ಣಪುರಕ್ಕೆ ಕಾಗದವನ್ನು ಬರೆದಳು ಅದರ ಒಕ್ಕಣೆಯು ಹೀಗೆ ಇದ್ದಿತು. ಪ್ರಿಯಸಹೋದರನೇ ! ನೀನು ರೋಹಿಣಿಯನ್ನು ಇಲ್ಲಿ ಬಿಟ್ಟ ಬಹು ದಿನಗಳಾದಾಗ್ಯೂ ಅವಳನ್ನು ನೋಡಲು ಒಂದಾವರ್ತಿಯಾದರೂ ಬರಲಿಲ್ಲ, ಕಾಗದವನ್ನು ಸಹ ಬರೆಯಲಿಲ್ಲ. ಬಹುಶಃ ನೀವು ಯಾವುದೋ ಒಂದು ಪರೋಸಕಾರತರ್ಯದಲ್ಲಿ ನಿರತನಾಗಿರಬಹದು. ಚಿಂತೆಯಿಲ್ಲ. ಪ್ರಕೃತ ರೋಹಿಣಿಗೆ ವಿದಾಹಕಾಲವುಮಿರುತಾ ಬಂದಿತು. ಇನ್ನು ಮೇಲೆ ಸಾವಕಾಶಮಾಡುವುದು ಯುಕ್ತವಾಗಿಲ್ಲ. ಯೋಚಿಸಿ ಅವರೂಪನಾದ ವರನನ್ನು ಗೊತ್ತು ಮಾಡಿ ಬರೆಯಬೇಕಲ್ಲದೆ ಕೂಡಲೆ ಇಲ್ಲಿಗೆ ಬರಬೇಕೆಂದು ಪ್ರಾರ್ಥಿಸುವ, ನಿನ್ನ ಕಲ್ಯಾಣಪ್ರರ. ಜ.ಸುದು ಕರುಣಾಂಬೆ. ಈ ರೀತಿ ಬರೆದು ಅಂಚೆಗೆಹಾಕಿದಳು, ಯಥಾಕಾಲದಲ್ಲಿ ಅದು ಕರುಣಾಕರನ ಹಸ್ತಗತವಾಯಿತು. ಆದರೆ ಆಗ ಕರುಣಾಕರನು ಬರಲು ಅವಕಾಶವಾಗಲಿಲ್ಲ. ಹೀಗೆ ಎರಡುದಿನಗಳು ಕತಿದವು. ಮೂರನೆದಿವಸ ರೋಹಿಣಿಯು ಮನೆಕೆಲಸಗ ಳನ್ನೆಲ್ಲಾ ನೆರವೇರಿಸಿ ಅನಂತರ ಬೀದಿಯಕಡೆಗೆ ಬಂದಳು. ಆಗ ಅವಳಿಗೆ ಯಾವದೋ ಒಂದು ಶಬ್ದವು ಗಟ್ಟಿಯಾಗಿ ಕೇಳಿಸಿತು. ಇದೇ ಇರಬಹುದೆಂದು ಅದನ್ನೇ ಆಲೈಸುತ್ತಲಿ ರುವಾಗ ಶಬ್ಬವು ಇನ್ನೂ ಹೆಚಾಗಿ ಕೇಲಿತ್ತಾಬಂತು. ಅಲ್ಲಿಯೇ ಕಂಭಯೋಪಾದಿ ಯಲ್ಲಿ ನಿಂತುಬಿಟ್ಟಳು. ಕರುಣಾಂಬೆಯು ರೋಹಿಣಿಯು ಹೀಗೆ ಸ್ತಂಭೀಭೂತಳಾಗಿರು ವುದನ್ನು ನೋಡಿ ಅವನನ್ನು ಕುರಿತು ರೋಹಿಣಿ, ಏನು ಮಾಡುತ್ತಲಿರುವೆ? ಎಂದಳು. - ರೋ --ತೈಯವರೆ! ಏನೋ ಒಂದು ಶಬ್ದವು ಕೇಳುತಲಿರುವುದು, ಅದು ಏನಾಗಿರಬಹುದು?