ಪುಟ:ನನ್ನ ಸಂಸಾರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಕಾದಂಬರೀ ಸಂಗ್ರಹ

ಣಗಳಿಂದ ನೀವು ಪತಿಯನ್ನು ಮೋಹಗೊಳಿಸಬೇಕು. ಅವರಿಗೆ ಯಾವ ವಿಷಯದಲ್ಲಿಯೂ ನೀವು ವಂಚನೆಯನ್ನು ಮಾಡಬಾರದು. ಪತಿಗೆ ಸಮನಾದ ಸ್ನೇಹಿತನು ಈ ಜಗತ್ತಿನಲ್ಲಿ ಯಾರೂ ಇಲ್ಲ. ಆತನು ಗುರುವಿನಂತೆ ಸನ್ಮಾರ್ಗವನ್ನು ತೋರಿಸುತ್ತಾನೆ. ತಂದೆಯಂತೆ ಹಿತವನ್ನುಂಟುಮಾಡುತ್ತಾನೆ. ತಾಯಿಯಂತೆ ಪ್ರೀತಿಸುತ್ತಾನೆ. ದೇವರಂತೆ ಪೂಜ್ಯನಾಗಿ ನಿಮ್ಮ ಪ್ರಾಣಕ್ಕಿಂತಲೂ ಪ್ರಿಯನಾಗಿರುತ್ತಾನೆ. ಇಂತಹ ಅದ್ದಿತೀಯನಾದ ಸ್ನೇಹಿತನನ್ನೇ ನೀವು ವಂಚಿಸಿದ ಪಕ್ಷದಲ್ಲಿ ನಿಮಗೆ ಇನ್ನೇತರಿಂದ ಸುಖವುಂಟಾದೀತು? ಪತಿಯನ್ನು ವಂಚಿಸುವ ಹೆಂಗಸು ಎಂತಹ ಅಕೃತ್ಯಮಾಡಲಿಕ್ಕೂ ಹಿಂತೆಗೆಯಳು. ಆದ್ದರಿಂದ ಗೃಹಿಣಿಯಾದವಳು ಪತಿಯ ಸಂಗಡ ನಿರ್ವಂಚನೆಯಿಂದ ನಡೆದುಕೊಳ್ಳಬೇಕು. ನಿಮ್ಮ ಪತಿಗಳಿಗೆ ಅಹಿತವಾದ ಕೆಲಸದಿಂದ ನಿಮಗೆಷ್ಟೇಲಾಭದ್ದಾಗ್ಯೂ ನೀವು ಅದನ್ನು ಮಾಡಬಾರದು. ನಿಮ್ಮ ಪತಿಯು ನಿಮ್ಮಲ್ಲಿ ಹೇಳಿರುವ ಗುಟ್ಟಿನ ಮಾತುಗಳನ್ನು ಇತರರ ಸಂಗಡ ಹೇಳಬಾರದು. ಏಕಾಂತದಲ್ಲಿ ಪತಿಯು ನಿಮ್ಮ ವಿಷಯದಲ್ಲಿ ಸಣ್ಣ ಮಾತನ್ನಾಡಿದ್ದರೆ ಅದನ್ನು ಹೊರಪಡಿಸಬಾರದು. ಈ ಪ್ರಕಾರ ಯಾವ ಹೆಂಗಸು ಆಚರಣೆಯಲ್ಲಿಟ್ಟಿರುವಳೋ ಅವಳಿಗೆ ಯಾರಲ್ಲಿಯೂ ವಿರೋಧವುಂಟಾಗುವುದಿಲ್ಲ. ಚಾಡಿಮಾತನ್ನು ಹೆಂಗಸು ಕಲಿಯಬಾರದು. ಕ್ಷುದ್ರ ಹೇಳುವವರನ್ನಾರೂ ನಂಬುವುದಿಲ್ಲ. ನಿಮ್ಮ ವಿಷಯದಲ್ಲಿ ನಿಷ್ಕಾರಣವಾಗಿ ಯಾರಾದರೂ ಅಪವಾದವನ್ನು ಹೊರಿಸಿದರೆ ಅದನ್ನು ಕೇಳಿಕೊಂಡು ಸುಮ್ಮನಿದ್ದು ನಿಮ್ಮ ಆಚರಣೆಯನ್ನು ನಿರ್ಮಲವನ್ನಾಗಿಮಾಡಿಕೊಂಡು ಸಮಾಧಾನದಿಂದಿರಬೇಕು. ಈ ಅಪವಾದವು ಸುಳ್ಳೆಂಬುದು ಕಾಲಕ್ರಮೇಣ ಎಲ್ಲರಿಗೂ ತಿಳಿದು ಆ ಅಪವಾದವನ್ನು ಹೊರಿಸಿದವರ ಮುಖಭಂಗವಾಗದೆ ಇರುವುದಿಲ್ಲ. ನಿಮ್ಮ ಗಂಡಂದಿರನ್ನು ಯಾರಾದರೂ ದೂಷಣೆ ಮಾಡಿದರೆ ಅದಕ್ಕಾಗಿ ಅವರಸಂಗಡ ವಿವಾದಮಾಡಬಾರದು. ಆ ಅಪವಾದವು ನಿಜವಾಗಿದ್ದ ಪಕ್ಷದಲ್ಲಿ ಅವನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ನಿಮ್ಮ ಗಂಡಂದಿಗೆ ನೀವು ಎಲ್ಲ ಕೆಲಸದಲ್ಲಿಯೂ ಆದಷ್ಟು ಸಹಾಯ ಮಾಡಬೇಕು. ಮನೆಯ ಕೆಲಸಗಳನ್ನು ಪಾಲುಮಾರಿಕೆ ಇಲ್ಲದೆ ಕಾಲಕಾಲಕ್ಕೆ ಸರಿಯಾಗಿ ಮಾಡುತ್ತಾ ನಿಮ್ಮ ಗಂಡಂದಿರನ್ನು ಸಂತೋಷಗೊಳಿಸಬೇಕು. ಯಜಮಾನರು ಹೊರಗಿನಿಂದ ಮನೆಗೆ ಬಂದಾಗ ಅವರೊಡನೆ ಕೆಲಸಕ್ಕೆ ಬಾರದ ಮಾತುಗಳನ್ನಾಡಿ ಕಾಲಕಳೆಯಬಾರದು. ನಿಮ್ಮ ಗಂಡಂದಿರ ಸಂಗಡ ಮಾತನಾಡುವಾಗ ಹೆಚ್ಚು ಹರಟೆಯನ್ನು ಬಿಟ್ಟು, ನೀತಿ, ಜ್ಞಾನ, ಧರ್ಮವಿಚಾರವಾಗಿ ಚರ್ಚೆಮಾಡಬೇಕು. ಸಂಸಾರಕ್ಕೆ ಬೇಕಾ ದವಿಷಯಗಳನ್ನು ಕಾಲವರಿತು ತಿಳಿಸಬೇಕು, ಗಂಡನಮನಸ್ಸು ಬಿನ್ನವಾಗಿದ್ದರೆ ಒಳ್ಳೆ