ಪುಟ:ನಭಾ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

87 ನಭಾ ವಿರುದ್ಧವಾದುದೆಂದು ತಿಳಿ, ಕಾಮ ಕ್ರೋಧರಂತಹ ಪ್ರಬಲ ಶತ್ರುಗಳು ಮತ್ತೊಬ್ಬರಿಲ್ಲ. ಮನವನ್ನು ಬುದ್ಧೀನ ಮಾಡಬೇಕಲ್ಲದೆ, ಸ್ವಚ್ಛಾ ವರ್ತ ನದ ಇಂದ್ರಿಯಗಳಿಗೆ ಮನಕ್ಕೂ ಮನಸ್ಸಿಗೆ ನಾವೂ ಅಧೀನರಾಗೆ ಬರದು, ಇಹಸೌಖ್ಯವು ತುಚ್ಛವು, ಮಾನವ ಜೀವಮಾನವು ನಶ್ವರವು, ಅಸಂಖ್ಯಾ ಕವಾದ ಜಲಬುದ್ಬು ದಗಳು ಏಕಕಾಲದಲ್ಲಿ ಉದ್ಭವಿಸುವವ; ಆದರೆ, ಉತ್ತರಕ್ಷಣದಲ್ಲಿಯೇ ಅವುಗಳೆಲ್ಲವೂ ನಾಶವಾಗುವವು. ಹಾಗೆಯೇ ಸ್ವಷ್ಟ ದೃಶ್ಯವೂ ಆಗಿರುವುದೆಂದು ತಿಳಿ, ಕನಸಿನಲ್ಲಿ ನಾವು ಅನೇಕ ವಿದ್ಯ ಮಾನಗಳನ್ನು ನೋಡುವೆವು: ಅನೇಕ ಕಾರ್ಯಗಳನ್ನು ಮಾಡುವೆವು. ಕಣ್ಣು ಬಿಟ್ಟು ನೋಡಿದರೆ, ಏನೂ ಕಾಣದು; ಹಾಸಿಗೆಯ ಮೇಲೆಯೇ ಮಲಗಿರುವೆವು, ಹಾಗೆಯೇ ಮೋಹಾಂಧಕಾರದಲ್ಲಿ, ಅಭಿಮಾನವೆಂಬ ನಿದ್ರೆಯಲ್ಲಿ, ಕಾಮವೆಂಬ ಸ್ವಪ್ಪಾ ವಸ್ಥೆಯಲ್ಲಿ, ವಿಷಯಲಾಲಸೆಯೆಂಬ ಮೇರೆಯಿಲ್ಲದ ಅನೇಕಾನೇಕ ಕನವರಿಕೆಗಳಿಂದ ಸುತ್ತುವರಿಯಲ್ಪಟ್ಟು ಜಡರಾಗಿರುವೆವು, ಹೀಗಿರುವ ನಾವೇ ಭಗವತ್ಸೆಯ ಮೂಲಕ ವಿವೇಕ ಸೂರ್ಯೋದಯಾನಂತರದಲ್ಲಿ ಎಚ್ಚೆತ್ತು, ವಸ್ತುವಿಚಾರವೆಂಬ ಸುಲೋಚ ನದ ಸಹಾಯದಿಂದ ನೋಡುವೆವಾದರೆ, ಇವುಗಳೆಲ್ಲವೂ ಕ್ಷಣಭಂಗುರಗ ಳಾದ ಜಲಬುುದ ಅಥವಾ ಸ್ವಷ್ಟ ದೃಶ್ಯಗಳೆಂದು ಸ್ಪಷ್ಟವಾಗುವುದು. ಕ್ರಿಮಿಕೀಟಾದಿಗಳ ಸಹವಾಸದಿಂದ ತೊಂದರೆ ಪಡುವುದು ತುಚ್ಛವಾದು ದಾಗಿಯೂ ಕಾಣುವುದು, ಆದುದರಿಂದ, ತುಚ್ಚ ವರ್ಗದಲ್ಲಿರುವ ವಿಷಯ ಲಾಲಸೆಯನ್ನು ಗಮನಿಸದೆ, ಶಾಶ್ವತವೂ ಸಚ್ಚಿದಾನಂದವೂ ಆದ ಮಾರ್ಗ ವನ್ನು ಕಳೆದುಕೊಳ್ಳುವುದೆಂದಿಗೂ ಧರ್ಮವಲ್ಲವು. ಅಣ್ಣಾ ! ರಾಜಶೇಖರ ! ನೀನು ವಿದ್ಯಾವಂತನು ; ಧನವಂತನು; ಪ್ರಾಯಸಮರ್ಥ ನು. ಹೀಗಿದ್ದರೂ, ಈರೀತಿ ಆಕಾರ್ಯಕ್ಕೆರಗು ವುದು ಉಚಿತವಲ್ಲ. ಕುಲ, ಶೀಲ, ವಿದ್ಯಾ, ರೂಪಾದಿಗಳಲ್ಲಿ ನಿನಗನ ಕಲೆಯಾದ ಕನೆಯನ್ನು ವಿವಾಹ ಮಾಡಿಕೊಂಡು ಧರ್ಮ ಮಾರ್ಗದಲ್ಲಿ ಮುಂದುವರಿವುದು ಶ್ರೇಯಸ್ಕರವು, ನೀನು ಕುಮಾರ್ಗದಲ್ಲಿ ಬಿದ ಕುತನಾಗುವುದಾದರೆ, ಬಂಧು ಮಿತ್ರವರ್ಗದಿಂದ ತಿರಸ್ಕೃತನಾಗುವೆ: ಸುಖಬಾಹಿರನಾಗುವೆ! ಚೆನ್ನಾಗಿ ತಿಳಿ.