ಪುಟ:ನಭಾ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$8 ಸತೀಹಿತ್ಯ ಷಿಣಿ ಅಣ್ಣಾ ! ರಾಜಶೇಖರ! ಹೊರಡು, ನಿನ್ನ ದುರಭಿಮಾನವನ್ನು ಬಿಡು. ಪರಲೋಕಗತನಾಗಿದ್ದರೂ ನನ್ನ ಹೃದಯದಲ್ಲಿಯೇ ಇರುವ ನನ್ನ ಸ್ವಾಮಿಯ ಅನುಗ್ರಹದಿಂದ ನಾನು ಕುಕ್ಷಿತ ಬುದ್ಧಿಯನ್ನು ಹೊಂದನು. ಆವಸ್ಥಾತ್ರಯ, ಕರಣತ್ರಯದಿಂದಲೂ ಪರಿಶುದ್ಧವಾಗಿರುವಿಚಿತ್ರವು ಇತರ ಕ್ಷುದ್ರವಿಷಯವಾಸನೆಗಳೆಂಬ ಕ್ರಿಮಿಕೀಟಾದಿಗಳ ಕ್ಷೆಭೆಗೊಳ ಗಾಗದು, ಸ್ಫೂಲ ದೇಹನಿರ್ಮುಕ್ತನಾದ ನನ್ನ ಸ್ವಾಮಿಯು ಸೂಕ್ಷ ದೇಹದಿಂದ ನನ್ನಲ್ಲಿಯೇ ಐಕ್ಯನಾಗಿರುವನು. ಆತನ ಕಟಾಕ್ಷಸುಧೆಯು ನನ್ನ ಸರ್ವಾವಯವಗಳಲ್ಲಿಯೂ ವ್ಯಾಪಿಸಿ, ನಿರತಿಶಯತೇಜೋಬಲ ವನ್ನುಂಟುಮಾಡುತಿರುವುದು, ನಾನು ನನ್ನ ಸ್ವಾಮಿಯಲ್ಲಿ ದ್ರೋಹಿ ಯಾಗೆನು, ರಾಜಶೇಖರ! ಇನ್ನು ಹೊರಡು, ಆದರೆ, ಅಜ್ಜರಂತೆ ಜೀವಿತ ದಲ್ಲಿ ನಿರಾಶನಾಗಬೇಡ; ಕರ್ತವ್ಯವಿಮುಖನಾಗಬೇಡ. (ರಾಜಶೇಖರ! ನಿನ್ನ ಅಕೃತ್ಯಕ್ಕೆ ಪ್ರತಿಫಲವನ್ನು ಕೊಡಲು ನನಗೆ ಇಷ್ಟವಿಲ್ಲ. ಹಾಗೆ ಇಷ್ಟವಿದ್ದಿದ್ದರೆ ಈವರೆಗೆ ನೀನು ಇಲ್ಲಿರುತ್ತಿರಲಿಲ್ಲ, ನಾನು ಪ್ರತೀಕಾರ ಮಾಡಲಪೇಕ್ಷಿಸುವುದಿಲ್ಲ, ನಿನಗೆ ಶಿಕ್ಷೆ ಕೊಡಲು ಬೇರೊ ನಿರುವನು ನನ್ನ ಚಿರವತಕ್ಕೆ ಕ್ಷಮೆಯೇ ಮುಖ್ಯಾವಲಂಬನವು, ಆದು ದರಿಂದ ನಾನು ನಿನಗೆ ಕೆಡಕನ್ನು ಚಿಂತಿಸೆನು, ದುರ್ಭಾವನೆಯನ್ನು ಬಿಡು' ನಿನ್ನ ಆಪ್ತ ಸೋದರಿಯರಲ್ಲಿ ನನ್ನನ್ನು ಮೊದಲನೆಯವಳೆಂದು ಭಾವಿಸಿ ಸನ್ಮಾರ್ಗದಲ್ಲಿ ನಡೆ, ನಿನ್ನ ಇಂದಿನ ಈ ದುಷ್ಟ ವರ್ತನೆಯನ್ನು ಬಹಿರಂಗ ಪಡಿಸುವುದೂ ಇಲ್ಲ. ನೀನು ಇನ್ನು ಇಲ್ಲಿ ನಿಲ್ಲದೆ ಹೊರಟುಹೋಗು. ? ರಾಜಶೇಖರನು ಹತಾಶನಾಗಿ ಅಲ್ಲಿ ನಿಲ್ಲಲಾರದೆ ನಿಂತಲ್ಲಿ ಯೇ ಮೊಣಕಾಲೂರಿ ಕೈಗಳನ್ನು ಜೋಡಿಸಿ ಪ್ರಾರ್ಥಿಸುತ್ತ ಕುಳಿತುಬಿಟ್ಟನು. ನಭೆಯು ಅಲ್ಲಿ ನಿಲ್ಲಲಿಲ್ಲ; ಹೊರಹೊರಟು ಹೋದಳು, ರಾಜಶೇಖರನು ಏನು ಮಾಡಬಲ್ಲನು? - ಹಾ ! ಮೋಸವಾಯಿತು ! ನಾನು ಕುಳಿತುಕೊಳ್ಳಬಾರದಾಗಿದ್ದಿತು. ಇನ್ನು ಏನು ಮಾಡಲಿ ?” ಎಂದು ಆಲೋಚಿಸಿದನು. ಹೊರಹೊರಡಲು ಎದ್ದು ಮುಂದಾದನು. ಮತ್ತೆ ಹಿಮ್ಮೆಟ್ಟ ಯೋಚಿಸಿದನು, ಈಗ ಹೊರಗೆ ಹೋದರೆ, ಮರ್ಯಾ ದೆಯುಳಿವುದಿಲ್ಲ, ಆಗಲಿ, ಹೋಗಲಿ-ಹೇಗೂ ಮತ್ತಾವುದಾದರೂ ಸಮು