ಪುಟ:ನಭಾ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 89 ಯವನ್ನು ಕಾದು ಕಾರ್ಯವನ್ನು ಸಾಧಿಸದೆ ಬಿಡೆನು.” ಎಂದು ಅಲ್ಲಿಯೇ ಮಲಗಿಬಿಟ್ಟನು, ಸುಹೃದಯಗೆ ! ವಿವೇಚನಾಶಕ್ತಿಯಿಲ್ಲದ ಮಾನವ ನಿಗೂ ಪಶುವಿಗೂ ತಾರತಮ್ಯವೇನಾದರೂ ಇದೆಯೇ?” ಸ್ವಲ್ಪವಿದೆಯೆ ನ್ನು ವಿರಲ್ಲವೆ? ನಿಜ! ಪಶುವು ಪ್ರಜ್ಞೆಯಿಲ್ಲದಿದ್ದರೂ ಹಿಂಸ್ರ ಜಿ೦ತುವೆನ್ನಿಸು ವುದಿಲ್ಲ. ಉಚಿತಾನುಚಿತವಿಲ್ಲದ ಮಾನವನು ಹಿಂಸ್ರಕನಾಗಿ ನಿಶಾಚರ ( ಮದಾಂಧ)ನೆನ್ನಿಸಿ ಕೊಳ್ಳುವನು. ಅಲ್ಲವೆ? ವಿ ಕಾ ದ ಶ ಸ ರಿ ಭೈ ದ. ( ಅಂತರಂಗದ ಅನಂತವಿಚಾರ ) -->yಡ:- * ಕಾರ್ಯ ತತ್ಪರರಿಗೆ ಕಾಲವು ಜಾಗ್ರತೆ ಕಳೆವುದು, ಸೋಮಾರಿ ಗಳಿಗೆ ದಿನದ ಇಪ್ಪತ್ತನಾಲ್ಕು ಘಂಟೆಗಳು ನಾಲ್ವತ್ತೆಂಟರಂತಯೇ ಆಗು ವುವ, ಆಲೋಚನೆಯಲ್ಲಿ ಲೀನವಾಗುವವರಿಗೆ ಎಪ್ಪತ್ತೆರಡರಂತೆ ತೋರು ವುದು, ಹಾಗೆಯೇ ದುರಭಿಸಂಧಿಯಲ್ಲಿದ್ದ ರಾಜಶೇಖರನು ಕೂಡ ಉಳಿ ದಿದ್ದ ರಾತ್ರಿಯ ಕೆಲವು ಘಂಟೆಗಳನ್ನು ಯುಗಗಳಂತೆ ಕಳೆದನು, ಮಾರಿ ನೆಯ ಹಗಲನ್ನೂ ಬಹು ಕಷ್ಟದಿಂದ ದಾಟಿದನು. ಮರುದಿನ ರಾತ್ರಿ ಹತ್ತು ಘಂಟೆಯ ಸಮಯ, ರಮಾಮಣಿ ಚಿದಾನಂದರಿಬ್ಬರೇ ಕುಳಿತು ಮಾತ ನಾಡಿಕೊಳ್ಳುತಿದ್ದರು. ಚಿದಾನಂದ:-ಇಂದು ರಾಜಶೇಖರನು ವ್ಯಸ್ತನಾಗಿರುವನು. ಕಾರಣವೇನು, ಬಲ್ಲೆಯಾ ? ರಮಾ:-ಆತನಿಗೆ ದೇಹಸ್ಥಿತಿ ಸರಿಯಾಗಿಲ್ಲವಂತೆ, ಯಾವ ಕೆಲಸ ದಲ್ಲಿ ಯೂ ಶ್ರದ್ಧೆ ಹುಟ್ಟುವುದಿಲ್ಲವೆಂದೂ ತಾಯಿಯ ಬಳಿಗಾದರೂ ಹೋಗುವೆನೆಂದೂ ಹೇಳುತ್ತಿದ್ದನು. ಚಿದಾ:-ನಿಜವಾದ ಸಂಗತಿಯೇನಾದರೂ ಗೊತ್ತಿರುವುದೆ? ರಮಾ-ನನಗೆ ಮತ್ತೇನೂ ತಿಳಿಯದು, ನಿಮಗೇನಾದರೂ ತಿಳಿ ದಿದೆಯೇನು ?