ಪುಟ:ನಭಾ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಸತೀಹಿತೈರ್ಷಿಣಿ ಚಿದಾ:--ನನಗೇನೋ ಸ್ವಲ್ಪ ಅನುಮಾನತೋ ರಿದೆ. ನಿಜವೋ ಸುಳೊ ದೃಢವಾಗಿ ಹೇಳಲಾರೆನು. ರಮಾ:- ಅದೇನು, ಸ್ವಲ್ಪ ಹೇಳಬಾರದೆ ? ಚಿದಾ:- ಈದಿನ ಮಧ್ಯಾಹ್ನ ನಾವೆಲ್ಲರೂ ಒಟ್ಟಿಗೆ ಊಟಕ್ಕೆ ಕುಳ ತಿದ್ದೆವಷ್ಟೆ ! ರಮ:- ಆಹುದು. ಚಿದಾ:- ನಭೆಯಬಳಿ ಕುಳಿತಿದ್ದ ರ€ಜಶೇಖರನು ಥಟ್ಟನೆದ್ದು ರಮಾನಂದನಬಳಿ ಕುಳಿತು, ತನ್ನ ದೈನ್ಯ ದೃಷ್ಟಿಯನ್ನು ಸಭೆಯಕಡೆಗೆ ಬೀರುತಿದ್ದನು. ಅದನ್ನು ನಾನು ನೋಡಿದೆನು, ಅದರಿಂದ ನಿನ್ನೆಯದಿನ ಏನೋ ನಡೆದಿರಬೇಕೆಂದು ಊಹಿಸುವೆನು. ರಮಾ:-ಆನಂತರ ? ಚಿದಾ:-ಆನಂತರವೇನು ? ಅವನೆಷ್ಟಹೊತ್ತ ನೋಡಿದರೂ, ನಭೆ ಯು ಅವನನ್ನು ನೋಡಲಿಲ್ಲ. ಆದುದರಿಂದ ಅವನು ಊಟ ಮಾಡಿ ಏಳುವ ಕಾಲದಲ್ಲಿ ಕಣ್ಣುಗಳಲ್ಲಿ ನೀರು ತುಂಬಿದ್ದಿತು, ಅದನ್ನೂ ನಾನು ಚೆನ್ನಾಗಿ ನೋಡಿದೆನು. ರಮಾ:-ಹಾಗಾಗಲು ಕಾರಣವೇನು ? ಚಿದಾ:-ಹೇಳುವೆನು; ಕೇಳು, ಊಟವಾದ ಬಳಿಕ ನಾವೆಲ್ಲರೂ ಇಲ್ಲಿಗೆ ಬಂದೆವಷ್ಟೆ. ನಾನು ಎದ್ದ ಕೂಡಲೇ ನೀನು ಹೊರಗೆ ಹೋಗ ಅಲ್ಲವೆ ? ನೀನು ಏನುಬೇಕೆಂದು ಕೇಳಿದರೂ ಉತ್ತರ ಕೊಡದೆ ಹೊರಟು ಹೋದೆನಷ್ಟೆ? ಆಗ ನಭೆಯ ಹಿತ್ತಲಕಡೆ ಕೈಯನ್ನು ತೊಳೆದುಕೊಳ್ಳು ತಿದ್ದಳು, ಅಲ್ಲಿಗೆ ರಾಜಶೇಖರನು ಹೋಗಿ ಅವಳನ್ನು ದೈನ್ಯವೃತ್ತಿ ಯಿಂದ ಏನನ್ನೂ ಬೇಡುತಿದ್ದನು, ಅವಳು ಧೈರ್ಯ ವಾಗಿ « ಹಾ | ಇದೀಗ ಪುರುಷರಸ್ಥೆರ್ಯ! ನಿನ್ನಿನದಿನ ಹೇಳಿದುದೆಲ್ಲವೂ ಅರಣ್ಯರೋದ ನವೋ! ಚಿಃ] ಇಂತಹ ಆಲೋಚನೆಯನ್ನು ಬಿಡು ; ಬಿಡು, ನಿನ್ನ ಅಕೃತ್ಯ ವೆಲ್ಲವೂ ತಾಯಿತಂದೆಯರಿಗೆ ತಿಳಿದಿದ್ದರೂ ಇರಬಹುದು; ಹೊರಡು, ನನ್ನಿ ದಿರಿಗೆ ನಿಲ್ಲದೆ ಹೊರಡು, ” ಎಂದು ಹೇಳುತಿದ್ದಳು. ರಮ:-ಈಗ ನಾವು ಬಹುಕಷ್ಟಕ್ಕೆ ಸಿಕ್ಕಿದಂತಾಯಿತು. ಏನು ಮಾಡುವ?