ಪುಟ:ನಭಾ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 91 ಚಿದಾ:-ನಾನು ಈಗ ಅಂತರಂಗದಲ್ಲಿಯೇ ವಿಚಾರಮಾಡುವೆನು ಸಭೆಯು ನನ್ನಿ ದಿರಿನಲ್ಲಿ ಸುಳ್ಳಾಡಳು. ” ಎಂದು ಹೇಳೆ, ಚಿದಾನಂದನು ಆನಂದದಿಂದ ನಭಾ ” ಎಂದು ಕೂಗಿದನು. ನಭೆಯು ಬಂದು ನಿಂತು : ಅಪ್ಪಾ ! ಏಕೆ ಕೂಗಿದೆ? ” ಎಂದಳು. ಚಿದಾ:-ನಭಾ ! ಪಾಠವ ಮುಗಿಯಿತೆ ? ಕುಳಿತುಕೆ ! ನಭೆಯು ? ಪಾಠವು ಆಗಲೇ ಮುಗಿಯಿತು, ” ಎಂದು ಹೇಳಿ, ಅಲ್ಲಿಯೇ ಸಿದ್ದವಾಗಿದೊಂದು ಕುರ್ಚಿಯಮೇಲೆ ಕುಳಿತಳು. ಚಿದಾ:- ಈ ದಿನವೇಕೆ ಸ್ವಲ್ಪ ವ್ಯಸ್ತಳಾಗಿ ಕಾಣುವೆ ? ಯಾರಾ ದರೂ ಏನಾದರ ಕೆಟ್ಟ ಮಾತುಗಳಾಡಿದರೇನು ? ನಭಾ:-ಇಲ್ಲ. ಚಿದಾ:--ರಾಜಶೇಖರನೇಕೆ ಬಹು ವ್ಯಸನದಿಂದಿರುವನು ? ಅವನ ತಲೆಶೂಲೆಗೆ ಕಾರಣವೇನೋ, ಬಟ್ಟೆ ಯಾ ? ನಭಾ:- ಅವನ ತಲೆಶೂಲೆಗೆ ಕಾರಣವೇನೋ ಬಲ್ಲೆನು . ಆದರೆ ಅದಕ್ಕೆ ತಕ್ಕ ಅಂಜನವು ದೊರೆವುದೆಲ್ಲಿ, ನನಗೆ ತಿಳಿಯದು. ಚಿದಾ:- ಈಗ ಹೇಗಿರುವನು ? ಎಲ್ಲಿ ರುವನು ? ಸಭಾ:- --ನನಗೆ ತಿಳಿಯದು, ನಾನು ನೋಡಲಿಲ್ಲ. ರಮಾ... ನಾನು ಈಗ ಅರೆಗಳಿಗೆಯ ಮುಂಚೆ 'ಕಾಫಿ'ಯನ್ನು ಕೊಡಲು ಹೋಗಿದ್ದೆನು, ಆಗ ಅವನು ಹಿತ್ತಿಲಿನಲ್ಲಿದ್ದನು. ಈಗ ಎಲ್ಲರು ವನೋ ತಿಳಿಯದು. ನಭಾ:--ಆಲಸ್ಯದವನು ಹೋಗುವುದಾದರೂ ಎಲ್ಲಿಗೆ ? ಕಿರುಮನೆ ಯಲ್ಲಿಯೇ ಇರಬಹುದು. - ರಮಾ-ನೀನೇಕೆ ಆತನನ್ನು ವಿಚಾರಿಸಲಿಲ್ಲ; ಆತನಲ್ಲಿ ನಿನಗೇಕೆ ಅಷ್ಟು ಉದಾಸೀನ?

  • ನಭಾ:-ನನಗೆ ಉದಾಸೀನವಿಲ್ಲ. ಕೆಲಸವಿದ್ದುದರಿಂದ ಇದುವರೆಗೂ ಹೋಗಲಿಲ್ಲ.

ರಮಾ:- ಅವನು ಈದಿನ ನನ್ನೊಡನೆ ಊರಿಗೆ ಹೋಗುವುದಾಗಿ ಹೇಳಿದನು, ನಾನು ಕೂಡದೆಂದೆನು.