ಪುಟ:ನಭಾ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಸತೀಹಿತೈಷಿಣೀ ಚಿದಾ:- ಏಕೆ, ಬೇಡವೆಂದೆ ? ರಮಾ:- ಸ್ವಲ್ಪ ಗುಣವಾದ ಬಳಿಕ ಹೋಗಲೆಂದುಚಿದಾ:-ನಭಾ! ಅವನ ರೋಗವಾದರೂ ಏನು? ತಿಳಿಯದೆ? ನಭಾ:- ರೋಗವೆಂತಹುದೊ ? ಪ್ರಾಯಃ ಚಿಂತಾರೋಗವಿರ ಬಹುದು, ನೀವು ಇನ್ನೆಷ್ಟು ದಿನ ಆತನನ್ನು ಅವಿವಾಹಿತನನ್ನಾಗಿ ಇಟ್ಟಿರು ವಿರಿ? ಅವನ ಸುಖ ಸಂತೋಷಾದಿಗಳಿಗೆ ನೀವೇ ನಿಮ್ಮ ಕಾರಿಗಳಾಗಿರುವಿ. ಚಿದಾ:-ನಭ) ! ವಿಶೇಷವೇನಾದರೂ ಉಂಟೇನು ? ನನಗೇನೋ ಪ್ರಬಲ ಸಂದೇಹವುಂಟಾಗಿದೆ. ನಭಾ:- ವಿಶೇಷವೇನಿದೆ ? ಅದೇಕೆ ಹೀಗೆ ಹೇಳುವೆ ? ಚಿದಾ:- ಹಾಗಲ್ಲ; ರಾಜಶೇಖರನಿಂದ ಅಕ್ರಮವೇನಾದರೂ ನಡೆ ದಿರುವುದೋ? ನಭಾ:- ಅವನು ಆರಲ್ಲಿ ತಾನೇ ಅಕ್ರಮವನ್ನು ನಡೆಯಿಸಬಲ್ಲನು? ಚಿದಾ:- ( ಬೆಕ್ಕಿನ ಕಣ್ಣು ಹಾಲಿನ ಮೇಲೆಯೇ ” ಎಂಬಂತೆ ಮತ್ತಾರಮೇಲೆ? ನಿನ್ನ ಮೇಲೆಯೇ ನಡೆಯಿಸಿರಬೇಕು. ನಭಾ:- ಹಾಗೆ ಭಾವಿಸಲು ಸಾಧ್ಯವೆ ? ನನ್ನಲ್ಲಿ ಅಂತಹ ಅಕ್ರ ಮವು ತಮ್ಮ ಆಶೀರ್ವಾದ ಬಲವಿರುವವರೆಗೂ ನಡೆಯಲಾರದು. ಚಿದಾ:-ಅವನು ಅವಿವಾಹಿತನಾಗಿರುವುದರಿಂದ ನಷ್ಟವೆಂದಾರಿ ದುದರ ಅರ್ಥವೇನು? ನಭಾ:- ವಿವಾಹಿತರಾಗಿದ್ದರೆ ಒಂದು ಗೃಹರಾಜ್ಯಾಧಿಕಾರಿಯಾಗಿ ಸುಖಪಡುತ್ತಿದ್ದನು, ಅದರಿಂದ ಅವನು ಸುಖಿಯಾಗಿರಲಿಲ್ಲವೇನು? ಪ್ರಾಯ ಸಮರ್ಥರಾದವರು ಇತರ ಸ್ತ್ರೀಯರೊಡನೆ ಮಾತನಾಡಿ ಇಷ್ಟಾರ್ಥವನ್ನು ಹೊಂದುವುದೆಂದರೆ, ಬಹು ಕಷ್ಟಕರವಾದ ಕಾರ್ಯವೇ ಸರಿ. ರವಖ:- ನಾವೇನು ಮಾಡುವ ? ಈವರೆಗೂ ಅವನೇ ಮದುವೆ ಯಾಗಲೊಲ್ಲೆನೆಂದು ಹೇಳುತಿದ್ದುದರಿಂದ ಹೀಗಾಯಿತು. ಇಲ್ಲದಿದ್ದರೆ ಹೆಣ್ಣಿಗೇನು ಕಡಮೆಯೇ? ನಭಾ:- ಇನ್ನು ಮುಂದಾದರೂ ಹೀಗೆ ತಡೆಯಬಾರದು. ರಮ:- ಇನ್ನು ಬಿಡುವರುಂಟೆ? ಅವನೊಪ್ಪಿದರೆ, ಇನ್ನು ಹದಿ