ಪುಟ:ನಭಾ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಸತೀಹಿತೈರ್ಷಿಣಿ ವ್ಯಕ್ತಿಯಲ್ಲಿ ಇಂತಹ ದುರ್ಗುಣವಿರುವಂತೆ ಮಾಡುತ್ತಿದ್ದೆಯಾ?” ಎಂದು. ರಾಜಶೇಖರನು ಮುಖದಮೇಲೆ ಹೊಡೆದಿದ್ದ ಹೊದಿಕೆಯನ್ನು ತೆಗೆದು. 11 ಅಣ್ಣಾ: ರಾಜಶೇಖರ! ಇದೇನು, ನಿನ್ನ ಅವಿವೇಕದ ವ್ಯಾಪಾರ? ಉತ್ತ ರವಿಲ್ಲ! ಕರೆ!” ಎಂದಳು, (ಆದರೂ ಉತ್ತರವಿಲ್ಲ.) ನಭೆಗೆ ಕೋಪಬಂದಿತು. ಅವಳು : ಅಣ್ಣಾ! ಹಾಗಾದರೆ, ನಾನಿನ್ನು ಹೊರಡುವೆನು; ಮಾತನಾಡಿಲ್ಲವೆಂದು ಅಮ್ಮನೊಡನೆ ಹೇಳುವೆನು.” ಎಂದು ಹೇಳಿ ಅಲ್ಲಿಂದ ಹೊರಡಲನುವಾದಳು. ಆಗ ರಾಜಶೇಖರನು ನಭೆಯ ಕೈಯನ್ನು ಹಿಡಿದೆಳೆದು ನಿಲ್ಲಿಸಿಕೊಂಡು ತನ್ನ ಕೆಂಡದಂತಿದ್ದ ಕಣ್ಣುಗಳನ್ನು ಅವಳ ಕಡೆಗೆ ತಿರುಗಿಸಿ ನಭಾ ! ಸ್ವಲ್ಪ ಹಾಲುಬೇಕು” ಎಂದನು, ನಭೆಯು ಹಾಲನ್ನು ತಂದು ಕೊಟ್ಟಳು. ಹಾಲನ್ನು ಕುಡಿವಾಗ ಅನೇಕವಿಧವಾದ ಅಂಗಚೇಷ್ಟೆಗಳನ್ನು ಮಾಡಿದನು. ಅದರಿಂದ ಅವಳಿಗೂ ಭಯವಾಯ್ತು, ಅವಳು ಹಿಂದಕ್ಕೆ ಸರಿದಳು. ರಾಜಶೇಖರನು ಅತಿ ನಮ್ರತೆಯಿಂದ 'ನಭಾ! ಇದೇಕೆ ಹಿಂದಕ್ಕೆ ಸರಿದೆ? ” ಎಂದು ಕೇಳಿದನು. ನಭಾ:-ಹೋಗಬೇಡವೆ? ರಾಜ:- ಹೋಗುವೆನೆಂದು ಹೇಳಲು ಮಾತ್ರ ಬಂದೆಯೇನು? ನಭಾ:- ಅಲ್ಲ, ನಿನ್ನ ಸ್ಥಿತಿಯನ್ನು ತಿಳಿದು ತಂದೆಗೆ ಹೇಳಲ. ಬಂದೆನು. ರಾಜ:- ನೀನು ಬಾರದಿದ್ದರೆಯೇ ಚೆನ್ನಾಗಿತ್ತು, ಇನ್ನೆರಡು ಮೂರು ದಿನಗಳೊಳಗಾಗಿ ನನ್ನ ಹೆಣವನ್ನು ನೋಡುತ್ತಿದ್ದೆ, ಆಗಲಾ ದರೂ ನಿನಗೆ ಆನಂದವಾಗದೆ ಇರುತಿರಲಿಲ್ಲ. ನಭಾ:- ಏನು? ರಾಜ:- ಈ ಕ್ಷೇಮ -- ನಭಾ:- ನಾನು ಹೊರಡುವೆನು. ರಾಜ:- ಹೊರಡಬೇಡ, ಒಂದು ಮಾತನ್ನು ಹೇಳುವೆನು, ಕೇಳಿ ಹೊರಡು, ಇಲ್ಲಿ ಹತ್ತಿರ, ಬಾ! ನಭಾ:-ಅಲ್ಲಿಗೆಬರಲಾರೆ! ಅದೇನು ಹೇಳು; ಇಲ್ಲಿಯೇ ಇರುವೆನು ?